ಸಕಲೇಶಪುರ : ವಿಶೇಷ ಚೇತನರಿಗೆ ವೀಲ್ ಚೇರ್ ಹಾಗೂ ಟ್ಯಾಬ್ ವಿತರಿಸಿದ ಶಾಸಕ ಸಿಮೆಂಟ್ ಮಂಜು
ಸಕಲೇಶಪುರ : ತಾಲೂಕು ಪಂಚಾಯತಿಯ ವಿಶೇಷ ಅನುದಾನದಲ್ಲಿ ಅಂಗವಿಕಲರಿಗೆ ವಿಚಾರ್ ಹಾಗೂ ಟ್ಯಾಬ್ ಗಳನ್ನು ಶಾಸಕ ಸಿಮೆಂಟ್ ಮಂಜು ವಿತರಣೆ ಮಾಡಿದರು.
ಬುಧುವಾರ ತಾಲೂಕು ಪಂಚಾಯತಿ ಆವರಣದಲ್ಲಿ ನೆಡೆದ 2023-24 ಸಾಲಿನ ತಾಲೂಕು ಪಂಚಾಯತಿ ಅನಿರ್ಭಧಿತ ಶೇ 5 ಅನುದಾನದಲ್ಲಿ ಅಂಗವಿಕಲರಿಗೆ ವಿವಿಧ ಉಪಕರಣ ವಿತರಿಸಿ ಮಾತನಾಡಿದ ಶಾಸಕರು, ವಿಶೇಷ ಚೇತನರ ಶ್ರೇಯೋಭಿವೃದ್ದಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸದುಪಯೋಗದಿಂದ ಸಾವಲಂಬಿ ಜೀವನ ನಡೆಸಬೇಕೆಂದರು.12 ಜಾರಿಗೆ ವೀಲ್ ಚೇರ್ ಹಾಗೂ ತಾಲೂಕಿನಲ್ಲಿ ಗ್ರಾಮ ಪಂಚಾಯತಿಯಲ್ಲಿ ವಿಶೇಷ ಚೇತನರಿಗಾಗಿ ಕಾರ್ಯನಿರ್ವಹಿಸುವ 24 ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ ಟ್ಯಾಬ್ ವಿತರಿಸಲಾಗಿದೆ.ವಿಶೇಷ ಚೇತನರಿಗೆ ಅನುಕಂಪ, ಕರುಣೆಗಿಂತ ಪ್ರೋತ್ಸಾಹ ಅತ್ಯಗತ್ಯ. ಅವರನ್ನು ಮುಖ್ಯ ವಾಹಿನಿಗೆ ತರುವ ಮತ್ತು ಎಲ್ಲರಂತೆ ಅವರನ್ನು ಗೌರವಿಸುವ ಕೆಲಸ ಸಮಾಜದ ಪ್ರತಿಯೊಬ್ಬರ ಮೇಲಿದೆ. ಸಮಾನತೆಯ ಹಾದಿಯಲ್ಲಿ ನಾವೆಲ್ಲಾ ಸಾಗಬೇಕು ಎಂದರು.
ಈ ಸಂಧರ್ಭದಲ್ಲಿ ತಾಲೂಕು ಪಂಚಾಯತಿ ಇ. ಓ ಗಂಗಾಧರ್, ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕರಾದ ಆದಿತ್ಯ, ಹರೀಶ್ ಸೇರಿದಂತೆ ಮುಂತಾದವರುರಿದ್ದರು.