Sunday, November 24, 2024
Homeಸುದ್ದಿಗಳುಸಕಲೇಶಪುರಹೆನ್ನಲಿ - ಹೆಬ್ಬಸಾಲೆ ರಸ್ತೆಯಲ್ಲಿ ಮತ್ತೆ ಭೂ ಕುಸಿತ : ವಾಹನ ಸಂಚಾರ ದುಸ್ಥರ

ಹೆನ್ನಲಿ – ಹೆಬ್ಬಸಾಲೆ ರಸ್ತೆಯಲ್ಲಿ ಮತ್ತೆ ಭೂ ಕುಸಿತ : ವಾಹನ ಸಂಚಾರ ದುಸ್ಥರ

ಹೆನ್ನಲಿ – ಹೆಬ್ಬಸಾಲೆ ರಸ್ತೆಯಲ್ಲಿ ಮತ್ತೆ ಭೂ ಕುಸಿತ : ವಾಹನ ಸಂಚಾರ ದುಸ್ಥರ 

ಸಕಲೇಶಪುರ : ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿದ ಮಳೆಗೆ ಹಲವೆಡೆ ಭೂಕುಸಿತ ಉಂಟಾಗಿದ್ದು ನಗರದ ರೈಲ್ವೆ ನಿಲ್ದಾಣ ಸಮೀಪ ಹೆಬ್ಬಸಾಲೆ ಸಂಪರ್ಕಿಸುವ ರಸ್ತೆ ಯ ಪುನಃ ಭೂಕುಸಿತ ಉಂಟಾಗಿದೆ.

ನಗರದಿಂದ ಹೆನ್ನಲಿ ಮಾರ್ಗವಾಗಿ ಹೆಬ್ಬಸಾಲೆ ಸಂಪರ್ಕಿಸುವ ರಸ್ತೆ ಮೇಲೆ ಕಳೆದ ಎರಡು ದಿನಗಳ ಹಿಂದೆ ಭೂ ಕುಸಿತವಾಗಿತ್ತು. ರಸ್ತೆಯ ಮೇಲೆ ಬಿದ್ದಿದ್ದ ಮಣ್ಣು ತೆರವುಗೊಳಿಸಿದ ನಂತರ ಇಂದು ಸಂಜೆ ಮತ್ತೆ ಭೂ ಕುಸಿತವಾಗಿದೆ. ಪರಿಣಾಮ ಈ ಮಾರ್ಗದಲ್ಲಿ ಚಲಿಸುವ ವಾಹನಗಳಿಗೆ ಅಡಚಣೆಯಾಗಿದೆ.

ವಾಹನ ಸವಾರರು ಇದೀಗ ಆನೆಮಹಲ್ ಮೂಲಕ ಹೆಬ್ಬಸಾಲೆ ತಲುಪಬೇಕಾದ ಅನಿವಾರ್ಯತೆ ಎದುರಾಗಿದೆ.ಸರಿಯಾದ ರೀತಿಯಲ್ಲಿ ಮಣ್ಣನ್ನು ತೆರವು ಮಾಡದಿರುವುದರಿಂದ ವಾಹನ ಸವಾರರಿಗೆ ಅನಾನುಕೂಲ ಆಗಿದೆ ಎಂದು ಹೆಬ್ಬಸಾಲೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಿವಕುಮಾರಿ ಆರೋಪಿಸಿದ್ದು ಕೂಡಲೇ ಸೂಕ್ತ ರೀತಿಯಲ್ಲಿ ರಸ್ತೆ ಮೇಲೆ ಬಿದ್ದಿರುವ ಮಣ್ಣನ್ನು ತೆರವು ಮಾಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ

RELATED ARTICLES
- Advertisment -spot_img

Most Popular