Sunday, April 20, 2025
Homeಸುದ್ದಿಗಳುಭಾರಿ ಮಳೆಗೆ ಮುಳುಗಿದ ಸಕಲೇಶಪುರದ ಅಜಾದ್ ರಸ್ತೆ  : ನಿರಾಶ್ರಿತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸುತ್ತಿರುವ ತಹಸೀಲ್ದಾರ್...

ಭಾರಿ ಮಳೆಗೆ ಮುಳುಗಿದ ಸಕಲೇಶಪುರದ ಅಜಾದ್ ರಸ್ತೆ  : ನಿರಾಶ್ರಿತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸುತ್ತಿರುವ ತಹಸೀಲ್ದಾರ್ ಮೇಘನಾ.

ಭಾರಿ ಮಳೆಗೆ ಮುಳುಗಿದ ಸಕಲೇಶಪುರದ ಅಜಾದ್ ರಸ್ತೆ  : ನಿರಾಶ್ರಿತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸುತ್ತಿರುವ ತಹಸೀಲ್ದಾರ್ ಮೇಘನಾ.

ಸಕಲೇಶಪುರ : ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಸಕಲೇಶಪುರ ತಾಲೂಕಿನಲ್ಲಿ ಹಲವಾರು ಅವಾಂತರಗಳು ಸೃಷ್ಟಿಯಾಗಿದೆ.

 ಭಾರಿ ಮಳೆ ಹೇಮಾವತಿ ನದಿಯ ನೀರಿನ ಮಟ್ಟ ಏರಿಕೆಯಾದ ತೊಡಗಿದ್ದು ಇದೀಗ ಪಟ್ಟಣದ ಆಜಾದ್ ರಸ್ತೆ ಸಂಪೂರ್ಣವಾಗಿ ಮುಳುಗಿ ಹೋಗಿದೆ.

 ಕಳೆದ ಎರಡು ವರ್ಷಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆ ಯಾಗದ ಹಿನ್ನೆಲೆಯಲ್ಲಿ ಅಜಾದ್ ರಸ್ತೆಯಲ್ಲಿ ನೀರು ಆವರಿಸಿಕೊಂಡಿರಲಿಲ್ಲ. ಇದೀಗ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಅಜಾದ್ ರಸ್ತೆಯ ಮನೆಗಳು, ಗ್ಯಾರೇಜ್ ಸೇರಿದಂತೆ ಅಂಗಡಿ ಮುಂಗಟ್ಟುಗಳು ವಾಹನಗಳು ನೀರಿನಲ್ಲಿ ಮುಳುಗಿ ಹೋಗಿದೆ. ಈ ಪ್ರದೇಶದಲ್ಲಿ ಜನರು ಓಡಾಡಲು ನೀರಿನ ಬೋಟ್ ಬಳಸಿ ತಿರುಗಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ನೀರಿನಲ್ಲಿ ಸಿಲುಕಿರುವ ನಿರಾಕರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸುವ ಕೆಲಸವನ್ನು ತಹಶೀಲ್ದಾರ್ ಮೇಘನ ಮಾಡುತ್ತಿದ್ದಾರೆ. ನೀರಿನ ಪ್ರಭಾವ ತಾಗುವವರೆಗೂ ನಿರಾಶಿಕರನ್ನು ಕಾಳಜಿ ಕೇಂದ್ರದಲ್ಲಿ ಆರೈಕೆ ಮಾಡಲು ತಾಲೂಕು ಆಡಳಿತ ಸಿದ್ದವಾಗಿದೆ.

RELATED ARTICLES
- Advertisment -spot_img

Most Popular