ಕಾಡಾನೆ ದಾಳಿಯಿಂದ ಮೃತಪಟ್ಟ ದಿವಾಕರ್ ಶೆಟ್ಟಿಯ ಅಂತಿಮ ದರ್ಶನ ಪಡೆದ ಶಾಸಕ ಸಿಮೆಂಟ್ ಮಂಜು
ಬೆಂಗಳೂರು : ತಾಲೂಕಿನ ವಾಟೆಹಳ್ಳಿ ಗ್ರಾಮದಲ್ಲಿ ಕಳೆದ ಒಂದು ತಿಂಗಳ ಹಿಂದೆ ಕಾಡಾನೆ ದಾಳಿಗೆ ಒಳಗಾಗಿದ್ದ ದಿವಾಕರ್ ಶೆಟ್ಟಿ ಎಂಬುವವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇನ್ನು ಮೃತಪಟ್ಟಿದ್ದು ಆಸ್ಪತ್ರೆಗೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದರು.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು, ದಿವಾಕರ್ ಶೆಟ್ಟಿ ಅವರು ಕಾಡಾನೆ ಜಾಳಿಯಿಂದ ಮೃತಪಟ್ಟಿರುವ ದುರದೃಷ್ಟಕರವಾದ ಸಂಗತಿಯಾಗಿದ್ದು, ಸರ್ಕಾರದಿಂದ ಬರಬೇಕಾದ ಪರಿಹಾರವನ್ನು ಶೀಘ್ರದಲ್ಲಿ ವಿತರಿಸಲಾಗುವುದು ಜೊತೆಗೆ ತಾಲೂಕಿನಲ್ಲಿರುವ ಕಾಡಾನೆ ಸಮಸ್ಯೆಗೆ ಶೀಘ್ರವಾಗಿ ಪರಿಹಾರ ಹುಡುಕುವ ನಿಟ್ಟಿನಲ್ಲಿ ಸರ್ಕಾರದ ಜೊತೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.