Tuesday, December 23, 2025
Homeಸುದ್ದಿಗಳುಸಕಲೇಶಪುರಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ವಾಟೇಹಳ್ಳಿಯ ದಿವಾಕರ್ ಶೆಟ್ಟಿ ನಿಧನ

ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ವಾಟೇಹಳ್ಳಿಯ ದಿವಾಕರ್ ಶೆಟ್ಟಿ ನಿಧನ

ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ವಾಟೇಹಳ್ಳಿಯ ದಿವಾಕರ್ ಶೆಟ್ಟಿ ನಿಧನ

ಸಕಲೇಶಪುರ : ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ವಾಟೇಹಳ್ಳಿ ಗ್ರಾಮದ ದಿವಾಕರ್ ಶೆಟ್ಟಿ ಚಿಕಿತ್ಸೆ ಕಳೆದ ಒಂದು ತಿಂಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ತಾಲೂಕಿನ ವಾಟೆಹಳ್ಳಿ ಗ್ರಾಮದ ದಿವಾಕರ ಶೆಟ್ಟಿ (62 ) ದಿನಾಂಕ 13/6/2024 ರಂದು ಕಾಡಾನೆ ತುಳಿತಕ್ಕೆ ಒಳಗಾಗಿ ಹೊಟ್ಟೆ ತಲೆ ತೀವ್ರ ಗಾಯಗಳಿಂದ ಚಿಕಿತ್ಸೆಗೆ ಒಳಗಾಗಿದ್ದರು. ಶಾಸಕ ಸಿಮೆಂಟ್ ಮಂಜು ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಸಿ ಕಳೆದ ಒಂದು ತಿಂಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಯಾವುದೇ ಪ್ರಯೋಜನವಾಗಿಲ್ಲ.ಮೃತರ ಅಂತ್ಯಕ್ರಿಯೆ ಇಂದು ಸಂಜೆ ಸ್ವಗ್ರಾಮ ವಾಟೇಹಳ್ಳಿಯಲ್ಲಿ ನಡೆಯಲಿದೆ. ದಿವಾಕರ್ ಶೆಟ್ಟಿ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಶಾಸಕ ಸಿಮೆಂಟ್ ಮಂಜು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು ಸರ್ಕಾರದಿಂದ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

RELATED ARTICLES
- Advertisment -spot_img

Most Popular