ಜಮ್ಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ : ವೈ. ಡಿ ಬಸವಣ್ಣ ಭರ್ಜರಿ ಗೆಲುವು
ಸಕಲೇಶಪುರ : ತಾಲೂಕಿನ ಬಾಳ್ಳುಪೇಟೆಯ ಜಮ್ಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಶನಿವಾರ ಶಾಂತಿಯುತವಾಗಿ ಮುಕ್ತಾಯಗೊಂಡಿತ್ತು.
ಒಟ್ಟು 12 ಜನ ನಿರ್ದೇಶಕರು ಆಯ್ಕೆಯಾಗಿದ್ದಾರೆ ಸಾಲಗಾರರ ಕ್ಷೇತ್ರದಿಂದ 11 ಜನ ನಿರ್ದೇಶಕರು ಆಯ್ಕೆಗೆ ಒಟ್ಟು 37 ಜನ ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಚುನಾವಣೆ ನೆಡೆದು ಸಾಮಾನ್ಯ ಕ್ಷೇತ್ರದಿಂದ ಸ್ಪರ್ದಿಸಿದ್ದ ಯಡೇಹಳ್ಳಿಯ ವೈ. ಡಿ ಬಸವಣ್ಣ ಅತಿ ಹೆಚ್ಚು ಮತ 378 ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ.ಬನವಾಸೆಯ ಬಿ. ಬಿ ಲೋಕೇಶ್ (ಸಾಮಾನ್ಯ ಕ್ಷೇತ್ರ ),ಬಾಳ್ಳುಪೇಟೆಯ ಸಂಗಪ್ಪ (ಸಾಮಾನ್ಯ ಕ್ಷೇತ್ರ )ಬನವಾಸೆಯ ಬಿ. ಬಿ ಮಂಜುನಾಥ್ (ಸಾಮಾನ್ಯ ಕ್ಷೇತ್ರ) ಚಿಕ್ಕನಾಯಕನಹಳ್ಳಿಯ ಎಂ. ಎಸ್ ಚಂದ್ರಶೇಖರ್ (ಸಾಮಾನ್ಯ ಕ್ಷೇತ್ರ)ಬನವಾಸೆಯ ಉದೀಶ್ ಬಿ. ಎಲ್ (ಹಿಂದುಳಿದ ವರ್ಗ ಎ) ಮೆಣಸಮಕ್ಕಿಯ ಎಂ. ಆರ್ ಉದಯ್ ಶಂಕರ್ (ಹಿಂದುಳಿದ ವರ್ಗ ಎ)ಬಾಳ್ಳುಪೇಟೆಯ ಬಿ.ಎಂ ನೇತ್ರಾವತಿ(ಮಹಿಳಾ ಕ್ಷೇತ್ರ)ಹಸುಗವಳ್ಳಿಯ ಉಷಾ ರಾಣಿ(ಮಹಿಳಾ ಕ್ಷೇತ್ರ)ಅಂಬೇಡ್ಕರ್ ನಗರದ ಬಿ. ಎನ್ ರಾಜೇಶ್ (ಪರಿಶಿಷ್ಟ ಜಾತಿ)ಜೆಪಿ ನಗರದ ಕೃಷ್ಣ ಮೂರ್ತಿ (ಪರಿಶಿಷ್ಟ ಪಂಗಡ ಕ್ಷೇತದಿಂದ ಗೆಲುವು ಸಾಧಿಸಿದರು. ಸಾಲಗಾರರಲ್ಲದ ಕ್ಷೇತ್ರಕ್ಕೆ ಒಬ್ಬರು ನಿರ್ದೇಶಕರಾಗಿ ಆಯ್ಕೆಯಾಗಬೇಕಿದ್ದ ಸ್ಥಾನಕ್ಕೆ ಮೂವರು ನಾಮಪತ್ರ ಸಲ್ಲಿಸಿದ್ದರು ಸಾಮಾನ್ಯ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿದ್ದ ಹೆಗ್ಗೋವೆ ಪುಟ್ಟರಾಜು ಗೆಲುವು ಸಾಧಿಸಿದ್ದಾರೆ.
ಜಮ್ಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ 12 ಜನ ನಿರ್ದೇಶಕರಿಗೆ ಚುನಾವಣೆ ನೆಡೆದಿದ್ದು ವಿಶೇಷವಾಗಿತ್ತು.ಚುನಾವಣೆ ಹಿನ್ನಲೆ ಯಾವುದೇ ಅಹಿತಕರ ಘಟನೆ ನೆಡೆಯದಂತೆ ಗ್ರಾಮಾಂತರ ಪೊಲೀಸರು ಬಿಗಿ ಪೊಲೀಸ್ ಬಂದುಬಸ್ತ್ ಮಾಡಿದ್ದರು.ಚುನಾವಣೆ ಮುಗಿದು ಫಲಿತಾಂಶ ಹೊರ ಬೀಳುತ್ತೀದ್ದಂತೆ ಗೆದ್ದ ಅಭ್ಯರ್ಥಿಗಳ ಅಭಿಮಾನಿಗಳು ಬಾಳ್ಳುಪೇಟೆ ಮುಖ್ಯ ರಸ್ತೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನೆಡೆಸಿದರು.