ರಾಷ್ಟ್ರೀಯ ಹೆದ್ದಾರಿ 75 ರ ಕಳಪೆ ಕಾಮಗಾರಿ ಪರಿಶೀಲನೆ ಮಾಡಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ – ಶಾಸಕ ಸಿಮೆಂಟ್ ಮಂಜುನಾಥ್
ಸಕಲೇಶಪುರ : ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು ಮಂಗಳೂರು ಹೆದ್ದಾರಿಯ ತಾಲೂಕಿನ ಆನೆ ಮಹಲ್ ಸಮೀಪ ಕಾಂಕ್ರೀಟ್ ರಸ್ತೆ ಮಳೆ ನೀರಿಗೆ ಕುಸಿದಿದ್ದು ಕೆಲವೆಡೆ ತಡೆಗೋಡೆ ಇಲ್ಲದೆ ಮಣ್ಣು ಕುಸಿದ ಹಿನ್ನೆಲೆಯಲ್ಲಿ ಶಾಸಕ ಸಿಮೆಂಟ್ ಮಂಜುನಾಥ್ ಹೆದ್ದಾರಿ ಕಾಮಗಾರಿ ವೀಕ್ಷಿಸಿದರು.
ಶಾಸಕರು ಸ್ಥಳಕ್ಕೆ ಬರುವ ಮುನ್ನವೇ ಗುತ್ತಿಗೆದಾರ ರಾಜ್ ಕಮಲ್ ಕಂಪನಿಯ ಅಧಿಕಾರಿಗಳು ಕಾಂಕ್ರೀಟ್ ತುಂಡುಗಳನ್ನು ತೆರವುಗೊಳಿಸಿ,ಸಿಮೆಂಟ್ ಮಿಶ್ರಿತ ಜಲ್ಲಿ ಪುಡಿ ಹಾಕಿ ತೇಪೆ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಶಾಸಕರು
ಕಾಮಗಾರಿಯನ್ನು ಪರಿಶೀಲನೆ ಮಾಡಿ ಸಂಬಂಧ ಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಳ್ಳುವ ಮೂಲಕ ಎಚ್ಚರಿಕೆ ನೀಡಿದರು.ಮಳೆಗಾಲ ಆರಂಭ ವಾಗುವ ಮೊದಲೇ ಕಾಮಗಾರಿಯ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವತೆ ಹೇಳಿದರು ಸಹ ಈ ಕುರಿತು ತಾವು ಎಚ್ಚರ ವಹಿಸಿದ ಕಾರಣ ಈ ರೀತಿ ಅನಾಹುತ ವಾಗಲು ಕಾರಣವಾಗಿದೆ ಎಂದರು. ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕೆಲವು ಕಡೆ ಜನರಿಗೆ ಅನುಕೂಲವಾಗದ ಕಡೆ ಬಸ್ ತಂಗುದಾಣಗಳನ್ನು ನಿರ್ಮಾಣ ಮಾಡಲಾಗಿದ್ದು ಕೂಡಲೇ ಜನರಿಗೆ ಅನುಕೂಲವಾಗುವ ಕಡೆ ಬಸ್ ತಂಗುದಾನ ನಿರ್ಮಾಣ ಮಾಡಬೇಕು ಹಾಗೂ ಒಸ್ಸೂರ್ ಹೋಟೆಲ್ ಸಮೀಪ ನಿರ್ಮಾಣವಾಗಿರುವ ತಂಗುದಾನವನ್ನು ಬೇರೆ ಕಡೆಗೆ ಸ್ಥಳಂತರ ಮಾಡಲು ಕ್ರಮ ಕೈಗೊಳ್ಳಬೇಕೆಂದು ದೂರವಾಣಿ ಮುಖಾಂತರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಾದ ಪ್ರಶಾಂತ್, ದೀಪಕ್, ಜೆ. ಡಿ ರವಿ ಮುಂತಾದವರು ಹಾಜರಿದ್ದರು.