ಸಕಲೇಶಪುರ :ಕ್ಯಾಂಟರ್ ಮತ್ತು ಮಾರುತಿ ಓಮಿನಿ ನಡುವೆ ಅಪಘಾತ ಸಂಭವಿಸಿ ಓರ್ವ ಮೃತಪಟ್ಟು ಮೂವರು ತೀವ್ರ ರೀತಿಯಲ್ಲಿ ಗಾಯಗೊಂಡಿರುವ ಘಟನೆ ಪಟ್ಟಣದ ಶ್ರೀನಿವಾಸ್ ಕಲ್ಯಾಣ ಮಂಟಪದ ಎದುರಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.
ಬೆಂಗಳೂರು ಕಡೆಯಿಂದ ಮಂಗಳೂರಿಗೆ ತರಕಾರಿ ಸಾಗಿಸುತ್ತಿದ್ದ ಪಿಕಪ್ ಮತ್ತು ಮಾರುತಿ ಓಮಿನಿ
ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ.
ತಾಲೂಕಿನ ಆಚಂಗಿ ಗ್ರಾಮದ ನಿವಾಸಿಗಳಾದ ಡೇವಿನ್ ಮೃತಪಟ್ಟು ಜೀರಾಜ್ , ಮುತ್ತು ರಾಜ್, ಅಭಿಷೇಕ್ ಗಾಯಗೊಂಡಿರುವ ವ್ಯಕ್ತಿಗಳಾಗಿದ್ದಾರೆ. ಇಬ್ಬರ ತಲೆಗೆ ಪೆಟ್ಟು ಬಿದ್ದಿದ್ದು, ಇನ್ನೊಬ್ಬರ ಕೈ ಕಾಲಿಗೆ ಪೆಟ್ಟು ಬಿದ್ದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಮಾರುತಿ ಓಮಿನಿ ನುಜ್ಜುಗುಜ್ಜಾಗಿದ್ದು , ತರಕಾರಿ ತುಂಬಿದ ವಾಹನ ಹೆದ್ದಾರಿಯಲ್ಲಿ ಉರುಳಿಬಿದ್ದಿದೆ.
ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ಥಳಕ್ಕೆ ಉಪವಿಭಾಗಾಧಿಕಾರಿ ಪ್ರತೀಕ್ಯ ಬಾಯಲ್ , ಡಿವೈಎಸ್ಪಿ ಮಿಥುನ್ , ಸಬ್ ಇನ್ಸ್ ಪೆಕ್ಟರ್
ಶಿವಶಂಕರ್ ಅಫಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದರು
ಡಿಕ್ಕಿ ಹೊಡೆದ ರಭಸಕ್ಕೆ ಮಾರುತಿ ಓಮಿನಿ ನುಜ್ಜುಗುಜ್ಜಾಗಿದ್ದು , ತರಕಾರಿ ತುಂಬಿದ ವಾಹನ ಹೆದ್ದಾರಿಯಲ್ಲಿ ಉರುಳಿಬಿದ್ದಿದೆ.
ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪತ್ರಿಕೆಯೊಂದಿಗೆ ಮಾತನಾಡಿದ ತರಕಾರಿ ವಾಹನದ ಚಾಲಕ ಆನಂದ್, ನಾನು ಬೆಂಗಳೂರಿನಿಂದ ಮಂಗಳೂರಿಗೆ
ತರಕಾರಿಯನ್ನು ತೆಗೆದುಕೊಂಡು ಒಬ್ಬನೇ ಚಾಲನೆ ಮಾಡಿಕೊಂಡು ಹೋಗುತ್ತಿದ್ದೆ. ನನ್ನ ಮುಂದಿನಿಂದ ರಭಸವಾಗಿ ಬಂದ ಮಾರುತಿ ಓಮಿನಿ ಗಾಡಿ ಡಿಕ್ಕಿ ಹೊಡೆಯಿತು ಎಂದು ತಿಳಿಸಿದರು. ನಿಯಂತ್ರಣ ತಪ್ಪಿ ನನ್ನ ವಾಹನ ಉರುಳಿಬಿದ್ದಿದೆ. ಎಂದು ವಿವರಿಸಿದರು .