ಬೆಳಮೆ ಶಿವನಂಜಪ್ಪ ನಿಧನಕ್ಕೆ ಶಾಸಕ ಸಿಮೆಂಟ್ ಮಂಜು ತೀವ್ರ ಸಂತಾಪ.
ಆಲೂರು : ಭಾರತೀಯ ಜನತಾ ಪಾರ್ಟಿಯ ಹಿರಿಯ ಮುಖಂಡ ಹಾಗೂ ಸಮಾಜ ಸೇವಕರಾದ ಬೆಳಮೆ ಶಿವ ನಂಜಪ್ಪನವರ ಸಾವಿಗೆ ಸಕಲೇಶಪುರ, ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ತೀವ್ರ ಸಂತಾಪ ಸೂಚಿಸಿದ್ದಾರೆ.ಆಲೂರು ತಾಲೂಕು ಪಾಳ್ಯ ಹೋಬಳಿ ಮಡಬಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಮೆ ಗ್ರಾಮದ ಶಿವನಂಜಪ್ಪ (72) ನವರು ಇಂದು ಹೃದಯಘಾತದಿಂದ ನಿಧನ ಹೊಂದಿದ್ದರು. ಪಾಳ್ಯ ಗ್ರಾಮ ಪಂಚಾಯತಿ ಮಾಜಿ ಪ್ರಧಾನರಾಗಿ, ಆಲೂರು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಭಾರತೀಯ ಜನತಾ ಪಾರ್ಟಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿ ದುಡಿದಿದ್ದರು. ಶಿವನಂಜಪ್ಪನವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.ಈ ವೇಳೆ ಮಾತನಾಡಿದ ಶಾಸಕರು, ಶಿವನಂಜಪ್ಪನವರ ನಿಧನದಿಂದ ಇಡೀ ಆಲೂರು ತಾಲೂಕಿನ ಜನತೆ ಹಿರಿಯ ಮುಸ್ಸದ್ದಿಯೊಬ್ಬರನ್ನು ಕಳೆದುಕೊಂಡಿರುವಷ್ಟು ನಷ್ಟವಾಗಿದೆ. ಭಾರತೀಯ ಜನತಾ ಪಾರ್ಟಿಗೆ ಅವರ ಸೇವೆ ಅನನ್ಯವಾಗಿದ್ದು ಅವರ ಸೇವೆ ಎಂದು ಮರೆಯಲು ಸಾಧ್ಯವಿಲ್ಲ. ನಮ್ಮ ಕುಟುಂಬ ಹಾಗೂ ಬಿಜೆಪಿ ಪಕ್ಷದ ನಡುವೆ ಉತ್ತಮ ಬಾಂಧವ್ಯ ಹೊಂದಿದ್ದರು.ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲಿ. ಮೃತರ ಅಗಲಿಕೆ ನೋವುವನ್ನು ಸಹಿಸುವ ಶಕ್ತಿಯನ್ನು ದೇವರು ಕುಟುಂಬಸ್ಥರಿಗೆ ಅನುಗ್ರಹಿಸಲಿ ಎಂದು ಶಾಸಕ ಸಿಮೆಂಟ್ ಮಂಜು ಹಾಗೂ ಪತ್ನಿ ಪ್ರತಿಭಾ ಮಂಜುನಾಥ್ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.