ಸಕಲೇಶಪುರ : ಅರಣ್ಯ ಇಲಾಖೆಯ ನಿರ್ಲಕ್ಷಕ್ಕೆ ಕಾಡೆಮ್ಮೆ(ಕಾಟಿ) ಮೃತ.
ಅರಣ್ಯ ಇಲಾಖೆ ಸಿಬ್ಬಂದಿಗಳ ವಿರುದ್ಧ ಕ್ರಮ ಒತ್ತಾಯಿಸಿದ ಗ್ರಾಮಸ್ಥರು.
ಸಕಲೇಶಪುರ : ಅಸ್ವಸ್ಥಗೊಂಡಿದ್ದ ಕಾಡೆಮ್ಮೆಗೆ ಚಿಕಿತ್ಸೆ ನೀಡುವಂತೆ ಅರಣ್ಯ ಇಲಾಖೆಗೆ ತಿಳಿಸಿದ್ದರೂ ಸಹ ಇಲಾಖೆ ಬೇಜವಾಬ್ದಾರಿತನಕ್ಕೆ ಕಾಡೆಮ್ಮೆಯೊಂದು ಅಸುನೀಗಿರುವ ಘಟನೆ ನೆಡೆದಿದೆ.
ತಾಲೂಕಿನ ಯಸಳೂರು ಹೋಬಳಿಯ ಚಂಗಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರೂರು ಗ್ರಾಮದಲ್ಲಿ ಕಳೆದ 25 ದಿನಗಳಿಂದ ಒಂದೇ ಸ್ಥಳದಲ್ಲಿ ನಿಂತಲ್ಲೇ ನಿಂತು ನಿಂತ್ರಾಣಗೊಂಡಿದ್ದ ಕಾಡೆಮೆಯನ್ನು ಸ್ಥಳೀಯರು ನೋಡಿ ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದರು. ಆದರೆ ಇದಕ್ಕೆ ಯಾವೊಬ್ಬ ಅಧಿಕಾರಿಗಳಾಗಲಿ ಸಿಬ್ಬಂದಿಗಳಾಗಲಿ ಈ ಕುರಿತು ಪರಿಶೀಲನೆ ಮಾಡುವುದಕ್ಕೂ ಸಹ ಸ್ಥಳಕ್ಕೆ ತೆರಳದೆ ಇದ್ದುದರಿಂದ ಇಂದು ಕಾಡೆಮ್ಮೆ ತೀವ್ರ ಅಸ್ವಸ್ಥದಿಂದ ಮತಪಟ್ಟಿದೆ.
ಅರಣ್ಯ ಇಲಾಖೆಯ ಕುಮಾರ್ ಎಂಬುವರಿಗೆ ಗ್ರಾಮಸ್ಥರು ದೂರವಾಣಿ ಕರೆ ಮಾಡಿ ತಿಳಿಸಿದರು. ಆದರೂ ಕ್ಯಾರೇ ಎನ್ನದ ಇಲಾಖೆಯ ನಿರ್ಲಕ್ಷತನಕ್ಕೆ ಕಾಡೆಮ್ಮೆ ನಿಧನ ಹೊಂದಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ನಿರ್ಲಕ್ಷ ವಹಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.