ದೇಶ ಸೇವೆ ಮಾಡುವ ಸೈನಿಕರ ಕಾರ್ಯ ಶ್ಲಾಘನೀಯ – ಶಾಸಕ ಸಿಮೆಂಟ್ ಮಂಜು
ಆಲೂರು : ಸೈನಿಕರು ತಮ್ಮ ಜೀವನವನ್ನು ಪಣವಾಗಿಟ್ಟು ದೇಶವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿರುವದರಿಂದ ನಾವಿಂದು ದೇಶದಲ್ಲಿ ಸಂತೋಷದಿಂದ ಬದುಕುತ್ತಿದ್ದೇವೆ ಎಂದು ಶಾಸಕ ಸಿಮೆಂಟ್ ಮಂಜುನಾಥ್ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾರತೀಯ ಸೇನೆಯಿಂದ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ತಾಲೂಕಿನ ನಾಕಲಗೂಡು ಗ್ರಾಮದ ಸಿದ್ದಮ್ಮ ದ್ಯಾವಯ್ಯ ಮಗ ಎನ್ ಡಿ ಸ್ವಾಮಿ ರವರಿಗೆ ತಾಲೂಕಿನ ವಿವಿಧ ದಲಿತಪರ ಸಂಘಟನೆಗಳು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು. ದೇಶದ ರಕ್ಷಣೆಗಾಗಿ ಯುವಕರು ಸೇನೆಗೆ ಸೇರುತ್ತಾರೆ. ಮಳೆ-ಗಾಳಿ ಶೀತವನ್ನು ಲೆಕ್ಕಿಸದೇ ಪ್ರಾಣ ಪಣಕ್ಕಿಟ್ಟು ಪ್ರತಿ ಭಾರತೀಯನು ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳುವ ಯೋಧರು ದೇವರಿಗೆ ಸರಿಸಮಾನರು. ನಿವೃತ್ತಿ ನಂತರ ಸ್ವಗ್ರಾಮಕ್ಕೆ ಬಂದ ಸ್ವಾಮಿ ಸೈನಿಕರನ್ನು ಗೌರವಿಸುವ ಕೆಲಸವಾದರೆ ನಮ್ಮ ಜೀವನಕ್ಕೆ ಸಾರ್ಥಕತೆ ಸಿಕ್ಕಂತಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಸ್ವಾಮಿಯವರು ತಮ್ಮ ಸೈನಿಕ ವೃತ್ತಿಯ ಅನುಭವಗಳನ್ನು ಹಂಚಿಕೊಳ್ಳುವುದರಿಂದ ಇತರರಲ್ಲಿ ದೇಶಭಕ್ತಿ ಮೂಡಿಸಿದಂತಾಗುತ್ತದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಸೈನಿಕ ಎನ್. ಡಿ ಸ್ವಾಮಿ ಮಾತನಾಡಿ, ನಾಡಿನ ಋಣ, ತಾಯಿ ಋಣ, ದೇಶದ ಋಣ ತೀರಿಸಲು ಎಷ್ಟು ಜನ್ಮವೆತ್ತಿದರೂ ಸಾಲದು. ನಾನು 38 ವರ್ಷ ದೇಶ ಸೇವೆ ಮಾಡಿದ್ದು, ಅದ್ಭುತ ಅನುಭವ ನೀಡಿದೆ. ದೇಶಕ್ಕಾಗಿ ಏನಾದರು ಮಾಡಬೇಕು ಎಂಬ ಕಿಚ್ಚು ನನ್ನ ಬಾಲ್ಯದಲ್ಲಿ ಹೊತ್ತಿತ್ತು ಅದು ಈಗ ಸಾಕಾರವಾಗಿದೆ. ಭಾರತದಲ್ಲಿ ಸೈನಿಕರಿಗೆ ತಮ್ಮದೇ ಆದ ಇತಿಹಾಸವಿದೆ ಎಂದು ಸ್ಮರಿಸಿದರು.
ಕಾರ್ಯಕ್ರಮಕ್ಕೂ ಮೊದಲು ಸೈನಿಕ ಸ್ವಾಮಿ ರವರು ಆಲೂರು ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಹೂಗಳಿಂದ ಅಲಂಕರಿಸಿದ ತೆರೆದ ವಾಹನದಲ್ಲಿ ಹೋಮಳೆಗೈಯುತ್ತಾ, ಪಟಾಕಿ ಸಿಡಿಸುತ್ತಾ, ವಾದ್ಯ ಮೇಳ ಮೇಳದಲ್ಲಿ ಕುಪ್ಪಳಿಸುತ್ತಾ ಅದ್ದೂರಿಯಿಂದ ಮಾಜಿ ಶಾಸಕರಾದ ಎಚ್. ಕೆ ಕುಮಾರಸ್ವಾಮಿ ಹಾಗೂ ಎಚ್ ಎಂ ವಿಶ್ವನಾಥ್ ಸೇರಿದಂತೆ ಹಲವು ಗಣ್ಯರಿಂದ ಸ್ವಾಗತಿಸಲಾಯಿತು. ನಂತರ ಕೆಇಬಿ ಸರ್ಕಲ್ ನಲ್ಲಿರುವ ಅಂಬೇಡ್ಕರ್ ತಾಲೂಕಿನ ಹಲವು ದಲಿತ ಪರ ಸಂಘಟನೆಗಳ ವತಿಯಿಂದ ನಿವೃತ್ತ ಸೈನಿಕರ ಎನ್.ಡಿ ಸ್ವಾಮಿ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಲ್ಲೇಶ್, ಪಟ್ಟಣ ಪಂಚಾಯಿತಿ ಸಿಬ್ಬಂದಿ ಮಂಜುನಾಥ್, ತಾಲೂಕು ಎಸ್ಸಿ. ಎಸ್ಟಿ ನೌಕರರ ಸಂಘದ ಅಧ್ಯಕ್ಷ ವಾಸುದೇವ್, ಮಹಾಬೋಧಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶಿವಾನಂದ್, ಉಪಾಧ್ಯಕ್ಷ ಶಿವಣ್ಣ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಾಂತ ಕೃಷ್ಣ, ಎಸ್ಸಿ ಮೋರ್ಚಾ ಉಪಾಧ್ಯಕ್ಷ ರವಿ ಕಾರ್ಜುವಳ್ಳಿ, ತಾ.ಪಂ ಮಾಜಿ ಸದಸ್ಯ ನಟರಾಜ್ ನಾಕಲಗೂಡು, ತಾಲೂಕು ಬಿಜೆಪಿ ಅಧ್ಯಕ್ಷೆ ಉಮಾ ರವಿಪ್ರಕಾಶ್, ನಿವೃತ್ತ ಶಿಕ್ಷಕರಾದ ಕೆ.ಎಸ್ ನಿರ್ವಣಯ್ಯ, ಕೆ.ಬಿ ಗುರಮೂರ್ತಿ, ಹರೇಂದ್ರ, ದಲಿತ ಮುಖಂಡರಾದ ದೇವರಾಜ್, ದ್ಯಾವಪ್ಪ, ನಿವೃತ್ತ ಸೈನಿಕ ಸಂಘದ ಉಪಾಧ್ಯಕ್ಷ ನಾಗೇಶ್, ನಿವೃತ್ತ ಕೃಷಿ ಅಧಿಕಾರಿ ಜವರಪ್ಪ, ಐಟಿಐ ಕಾಲೇಜು ಆಧ್ಯಾಪಕ ನಾಗೇಶ್, ಸೇರಿದಂತೆ ತಾಲೂಕಿನ ಹಲವು ಸಂಘ ಸಂಸ್ಥೆಗಳ ದಲಿತ ಪರ ಸಂಘಟನೆಗಳ ಮುಖಂಡರು ಹಾಜರಿದ್ದರು.