ನದಿಗೆ ಹಾರಿ ವಿವಾಹಿತ ಆತ್ಮಹತ್ಯೆಗೆ ಯತ್ನ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಯುವಕನ ರಕ್ಷಣೆ.
ವರದಿ : ಅಕ್ಬರ್ ಜುನೈದ್
ಸಕಲೇಶಪುರ : ನದಿಗೆ ಹಾರಿ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳೀಯರ ಸಮಯ ಪ್ರಜ್ಞೆಯಿಂದ ಯುವಕನನ್ನು ರಕ್ಷಣೆ ಮಾಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ಪಟ್ಟಣದ ಹಳೇ ಹೇಮಾವತಿ ಸೇತುವೆ ಬಳಿ ನಡೆದಿದೆ. ತಾಲ್ಲೂಕಿನ,
ಹಲಸುಲಿಗೆ ಗ್ರಾಮದ ಅನಿಲ್ ಎಂಬಾಗ ಪಟ್ಟಣದ ಹಳೇ ಹೇಮಾವತಿ ಸೇತುವೆಗೆ ಬೆಂಬಲವಾಗಿ ನಿರ್ಮಿಸಿರುವ ಕಬ್ಬಿಣದ ಮೇಲೇರಿ ನದಿಗೆ ಹಾರಲು ನಿಂತಿದ್ದನು. ಯುವಕನನ್ನು ನೋಡಿದ ಸ್ಥಳೀಯರಾದ ಅಪ್ಪಯ್ಯ ಹಾಗೂ ನಾಸಿರ್ ಎಂಬುವವರು ಯುವಕನನ್ನು ರಕ್ಷಿಸಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದು, ನನ್ನ ಮನಸ್ಥಿತಿ ಸರಿಯಿಲ್ಲ ಅದಕ್ಕಾಗಿ ಸಾಯಲು ಬಂದಿದ್ದೇನೆ ಎಂದು ಅನಿಲ್ ಹೇಳುತ್ತಿದ್ದಾನೆ. ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.