Saturday, November 23, 2024
Homeಸುದ್ದಿಗಳುಸಕಲೇಶಪುರಹೆಬ್ಬಸಾಲೆ ಪಿಡಿಓ ವತ್ಸಲಾ ದಕ್ಷ ಅಧಿಕಾರಿ|| ಗ್ರಾಪಂ ಅಧ್ಯಕ್ಷ ಮಹೇಶ್ ಶೆಟ್ಟಿ ಅಭಿಮತ

ಹೆಬ್ಬಸಾಲೆ ಪಿಡಿಓ ವತ್ಸಲಾ ದಕ್ಷ ಅಧಿಕಾರಿ|| ಗ್ರಾಪಂ ಅಧ್ಯಕ್ಷ ಮಹೇಶ್ ಶೆಟ್ಟಿ ಅಭಿಮತ

ಅಧ್ಯಕ್ಷರ ಮನದಾಳದ ಮಾತು,

ಬಂಧುಗಳೇ,

ನಮ್ಮ ಹೆಬ್ಬಸಾಲೆ ಗ್ರಾಮ ಪಂಚಾಯತಿಯ ದಕ್ಷ ಅಧಿಕಾರಿಯಾದ ( ಪಿಡಿಒ) ಮಾನ್ಯ ವತ್ಸಲಾ ಕುಮಾರಿ ಮೇಡಂ ರವರನ್ನು ಕೆಲವು ಭ್ರಷ್ಟರು ರಾಜಕೀಯ ಪ್ರೇರಿತವಾಗಿ ಕುತಂತ್ರದಿಂದ ವರ್ಗಾವಣೆ ಮಾಡಿಸಿರುತ್ತಾರೆ. ಈ ವರ್ಗಾವಣೆಗೆ ಒಂದೆರಡು ಗ್ರಾ.ಪ ಸದಸ್ಯರನ್ನು ಹೊರತುಪಡಿಸಿ ಉಳಿದೆಲ್ಲಾ ಗ್ರಾ.ಪ ಸದಸ್ಯರುಗಳ ವಿರೋಧವಿದೆ. ಮೇಡಂ ರವರ ನೇರ ನುಡಿ, ಭ್ರಷ್ಟಾಚಾರಕ್ಕೆ ಅನುವು ಮಾಡಕೊಡದಿರುವುದು ಕೆಲವು ಬೆರಳೆನಕೆಯ ಸದಸ್ಯರಿಗೆ ನುಂಗಲಾರದ ತುತ್ತಾಗಿತ್ತು.

ಕುಮಾರಿ ವತ್ಸಲಾ ಮೇಡಂ ನೇರ ನುಡಿ, ಹಲವಾರು ಜನಪರ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದರು. ಇವರ ಕಾರ್ಯವದಿಯಲ್ಲಿ ಆದ ಕೆಲವು ಜನಪರ ಕಾರ್ಯಗಳ ಒಂದು ಕಿರು ನೋಟ.

1. ಹೆಬ್ಬಸಾಲೆ ಗ್ರಾ. ಪ. ವ್ಯಾಪ್ತಿಯ ಒಂದು ನ್ಯಾಯ ಬೆಲೆ ಅಂಗಡಿಯಲ್ಲಿ ದರ್ಪ ವಂಚನೆ, ಅವ್ಯವಹಾರ ನಡೆಯುತ್ತಿದ್ದಾಗ ಅದನ್ನು ಮನಗಂಡು ಅವರಿಗೆ ನೀಡಿದ ಲೈಸನ್ಸ್ ರದ್ದುಗೊಳಿಸಿ ಜಿಲ್ಲೆಯಲ್ಲಿಯೇ ಮೊದಲು ಎಂಬಂತೆ ಗ್ರಾ.ಪ ಗೆ ನ್ಯಾಯಬೆಲೆ ಅಂಗಡಿ ನಡೆಸುವ ಅಧಿಕಾರ ಪಡೆಯುವಲ್ಲಿ ಕುಮಾರಿ ವತ್ಸಲಾ ಮೇಡಂ ರವರ ಪಾತ್ರ ಬಹುಮುಖ್ಯವಾಗಿದೆ.

2. ಮಳೆ – ಗಾಳಿಗೆ ಸಿಲುಕಿದ್ದ ವಿಧವಾ ಕೂಲಿ ಕಾರ್ಮಿಕರೋರ್ವರ ಮನೆಯನ್ನು ಧಾನಿಗಳ ನೆರವಿನಿಂದ ಒಂದೇ ದಿನದಲ್ಲಿ ದುರಸ್ಥಿ ಮಾಡಿಸಿದ ಹೆಗ್ಗಳಿಕೆ ಕುಮಾರಿ ವತ್ಸಲಾ ಮೇಡಂ ರವರದ್ದು.

3. ಮಾತೃಪೂರ್ಣ ಯೋಜನೆಯಡಿಯಲ್ಲಿ ಮಹಿಳಾ ಗ್ರಾಮಸಭೆ ಮೂಲಕ ಗ್ರಾ.ಪ ವ್ಯಾಪ್ತಿಯ ಗರ್ಭಿಣಿ ಮಹಿಳೆಯರ ಅಪೌಷ್ಟಿತಿಕತೆ ವಿಚಾರವಾಗಿ ವಿಶೇಷ ಕಾಳಜಿ ವಹಿಸಿ, ಜನಜಾಗೃತಿ ಮೂಡಿಸುವ ಮೂಲಕ ಸರ್ಕಾರದ ವತಿಯಿಂದ ಅಂಗನವಾಡಿಗಳಲ್ಲಿ ಸಿಗುವ ಮೊಟ್ಟೆ, ಹೆಸರುಕಾಳು, ಬಿಸಿಯೂಟದ ಯೋಜನೆಯನ್ನು ಅತ್ಯಂತ ಸಮಗ್ರವಾಗಿ, ಸಮರ್ಪಕವಾಗಿ ಜಾರಿಗೆ ತಂದಿರುತ್ತಾರೆ.

4. ಧೀನ ದಲಿತರ ಕಷ್ಟಕ್ಕೆ ಸದಾ ಮಿಡಿಯುವ ಮೇಡಂ, ಇತ್ತೀಚಿಗೆ ಗಾಣದ ಹೊಳೆ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ಮೀಸಲಾಗಿದ್ದ ರುದ್ರಭೂಮಿ (ಸ್ಮಶಾನ ) ಒತ್ತುವರಿಯನ್ನು ಹಲವಾರು ಒತ್ತಡಗಳ ನಡುವೆಯೂ ವಂಚಿತರಿಗೆ ಬಿಡಿಸಿಕೊಟ್ಟಿದ್ದು ಅವರ ಜನಪರ ಕಾಳಜಿಯ ತಾಜಾ ಉದಾಹರಣೆಯಾಗಿದೆ.

5. ಅನಾಥ ವೃದ್ದೆಯೋರ್ವರ ಕಷ್ಟ ಕಾಣಲಾರದೆ ಸ್ವಯಂಪ್ರೇರಿತರಾಗಿ ಸರ್ಕಾರದ ಯೋಜನೆಯಡಿಯಲ್ಲಿ ಸುಸಜ್ಜಿತ ವಸತಿ ನಿರ್ಮಾಣ ಮಾಡಿಕೊಡಲಾಗಿದೆ.

ಇಷ್ಟೇ ಅಲ್ಲದೆ ನಮ್ಮ ಗ್ರಾಮ ಪಂಚಾಯತಿ ಕಟ್ಟಡ ಕಟ್ಟಿ ಹಲವಾರು ವರ್ಷಗಳಾಗಿದ್ದರು ಇಲ್ಲಿಯವರೆಗೆ ಶಾಶ್ವತ ನೀರಿನ ಸೌಲಭ್ಯ ವಿರಲಿಲ್ಲ ಆದುದರಿಂದ ನಮ್ಮ ಮನವಿಗೆ ಸ್ಪಂದಿಸಿ, ನಮ್ಮ ಸಂಕಲ್ಪಕ್ಕೆ ಬೆಂಗಾವಲಾಗಿ ನಿಂತು ಶಾಶ್ವತ ನೀರಿನ ಸೌಲಭ್ಯ ಒದಗಿಸುವಲ್ಲಿ ಮಹತ್ತರ ಪಾತ್ರ ವಹಿಸಿರುತ್ತಾರೆ.

ಮೇಲೆ ತಿಳಿಸಿರುವುದು ಕೆಲವೇ ಕೆಲವು, ಅದೆಷ್ಟೋ ಮಹತ್ಕಾರ್ಯಗಳು ಇವರ ಕಾರ್ಯವಧಿಯಲ್ಲಿ ಆಗಿವೆ ಎಲ್ಲವನ್ನು ಪಟ್ಟಿಮಾಡಿದರೆ ಹಲವಾರು ಪುಸ್ತಕಗಳ ಮುದ್ರಣ ಮಾಡುವಷ್ಟಿದೆ .

ಇವರ ದಕ್ಷ, ಪ್ರಾಮಾಣಿಕ ಸೇವೆಯನ್ನು ಮನಗಂಡು ಇವರು ಹಿಂದೆ ಸೇವೆ ಸಲ್ಲಿಸಿದ್ದ ಹಾನುಬಾಳು ಗ್ರಾ.ಪ ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ರಾಜ್ಯ ಸರ್ಕಾರ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಿದೆ. ಹಾಸನ ಜಿಲ್ಲಾಡಳಿತ 2021-2022 ಸಾಲಿನ ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಿರುವುದು ಅವರ ದಕ್ಷ ಪ್ರಾಮಾಣಿಕ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ. ಅಷ್ಟೇ ಅಲ್ಲದೆ ರೋಟರಿ ಕ್ಲಬ್ ಸೇರಿದಂತೆ ಹಲವಾರು ಪ್ರಶಸ್ತಿಗಳು ವತ್ಸಲಾ ಕುಮಾರಿ ಮೇಡಂ ರವರನ್ನು ಅರಸಿ ಬಂದಿವೆ.

ಬಂಧುಗಳೇ, ಇಂದಿನ ವ್ಯವಸ್ಥೆಯಲ್ಲಿ ಒಬ್ಬ ವ್ಯಕ್ತಿಯ ಪ್ರಾಮಾಣಿಕತೆ, ಧೀನ ದಲಿತರ, ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಪರ ನಿಲ್ಲುವವರಿಗೆ ಕಾಲವೇ ಇಲ್ಲ ಎಂಬಂತಾಗಿದೆ. ಮೇಡಂ ರವರ ತಾನು ತಿನ್ನುವುದಿಲ್ಲ, ಇತರರಿಗೂ ತಿನ್ನಲು ಬಿಡುವುದಿಲ್ಲ ಎಂಬ ನಿಲುವು ಇಂದು ಅವರಿಗೆ ಮಾರಕವಾಗಿದೆ. ಇಂತಹವರಿಗೆ ಹೀಗೆ ರಾಜಕೀಯ ಪ್ರೇರಿತವಾಗಿ ಉಪದ್ರ ನೀಡಿದರೆ ಇವರ ಹಾದಿಯಲ್ಲಿರುವ ಹಲವಾರು ದಕ್ಷ ಅಧಿಕಾರಿಗಳಿಗೆ ಯಾವ ಸಂದೇಶ ನೀಡಿದಂತಾಗುತ್ತದೆ ತಾವುಗಳೇ ಊಹಿಸಿ.ಸಹಜವಾಗಿ ಗ್ರಾ.ಪಂ ಅಧ್ಯಕ್ಷನಾಗಿ ಈ ವ್ಯವಸ್ಥೆಯ ಬಗ್ಗೆ ತಿರಸ್ಕಾರದ ಭಾವನೆ ಮೂಡಿದೆ. ನಮ್ಮ ಪಿಡಿಒರ ಬಗ್ಗೆ ಮೊದಲಿಗೆ ನಕರಾತ್ಮಕ ಯೋಚನೆಗಳನ್ನು ಇಟ್ಟುಕೊಂಡೆ ಗ್ರಾ.ಪಂ ಪ್ರವೇಶ ಮಾಡಿದ್ದೆ. ಬರ ಬರುತ್ತಾ ಅವರ ಯೋಚನೆ, ಯೋಜನೆ, ಕಾರ್ಯ ವೈಕರಿಯನ್ನು ನೋಡುತ್ತಾ ನಾನೆಷ್ಟು ಅವರ ಬಗ್ಗೆ ತಪ್ಪಾಗಿ ಅರ್ಥ ಮಾಡಿಕೊಂಡಿದ್ದೆ ಎಂದು ಅರ್ಥವಾಗುವುದಕ್ಕೆ ಸಮಯ ಹಿಡಿಯುತ್ತೆ. ನಮ್ಮ ಪಿಡಿಒ ರಂತಹ ಅಧಿಕಾರಿಗಳು ಐದು ಜನ ಒಂದು ತಾಲ್ಲೂಕಿಗೆ ದೊರೆತರೆ ಬಹುಷಃ ಅಭಿವೃದ್ಧಿಯ ಚಿತ್ರಣ ಬದಲಾಗಿಬಿಡುತ್ತೆ. ಅಂತಹ ಅಧಿಕಾರಿಯ ಮೇಲೆ ಯಾರೋ ಒಂದಿಬ್ಬರು ಸುಳ್ಳು ಆರೋಪ ಹೊರಿಸಿದ ಕೂಡಲೇ ಅವರನ್ನು ವರ್ಗಾವಣೆ ಮಾಡಿದ ಆಡಳಿತ ವ್ಯವಸ್ಥೆಯ ಮೇಲೆ ನಮ್ಮೆಲ್ಲರ ಧಿಕ್ಕಾರವಿದೆ.

ಅವರು ನಮ್ಮ ಗ್ರಾಮ ಪಂಚಾಯಿತಿಗೆ ಬಂದು ಮೂರು ವರ್ಷ. ಆ ಮೂರು ವರ್ಷದಲ್ಲಿ ಎರಡು ವರ್ಷ ಕೋವಿಡ್ ನಲ್ಲಿ ಕಳೆದು ಹೋಯಿತು. ಒಂದು ವೇಳೆ ಕೋವಿಡ್ ಇಲ್ಲದೆ ಹೋಗಿದ್ದರೆ ಹೆಬ್ಬಸಾಲೆ ಗ್ರಾಮ ಪಂಚಾಯತಿ ಇವತ್ತು ಜಿಲ್ಲೆಯ ಅತ್ಯುತ್ತಮ ಗ್ರಾ.ಪಂ ಯಾಗಿ ಇವತ್ತಿಗೆ ವರುಷವೇ ಕಳೆದು ಹೋಗುತ್ತಿತ್ತೇನೋ.

ಕೋವಿಡ್ ಸಮಯದಲ್ಲಿ ಗ್ರಾ.ಪಂ ಯ ಯಾವುದೇ ಅನುದಾನವನ್ನು ಬಳಸದೇ ಸುಮಾರು ನಾನೂರು ಜನಕ್ಕೆ ಅವರ ಸ್ವಂತ ದುಡ್ಡಿನೊಂದಿಗೆ ದಾನಿಗಳನ್ನು ಹಿಡಿದು ಕಡುಬಡವರಿಗೆ ಆಹಾರ ಕಿಟ್ ಗಳನ್ನು ನೀಡಿದ್ದನ್ನು ನೋಡಿಯೇ ಆಶ್ಚರ್ಯ ಆಗಿತ್ತು.

ಅದರ ಜತೆಗೆ ಮನೆ ಫಲಾನುಭವಿಗಳನ್ನು ಆಯ್ಕೆಯನ್ನು ಕೂಡ ನೋಡಬೇಕು. ಮನೆ ಕಟ್ಟಲು ಶಕ್ತರಲ್ಲದ ಕಡುಬಡವರನ್ನು ಆಯ್ಕೆ ಮಾಡಿ ಅವರೇ ಖುದ್ದು ನಿಂತು ಮನೆ ಕಟ್ಟಿಸಿಕೊಡುತ್ತಿದ್ದರು. ಈಗಾಗಲೇ ಕೆಲವು ಮನೆಕಟ್ಟಿಸಿಕೊಟ್ಟ ಬಗ್ಗೆ ಮಾಧ್ಯಮ ವರದಿಯಾಗಿದ್ದನ್ನು ನೀವು ಗಮನಿಸಿರಬಹುದು. ಇನ್ನೂ ಎರಡು ವಯಸ್ಕರ ಮನೆಯನ್ನು ಕಟ್ಟಿಸಲು ಶುರು ಮಾಡಿದ್ದರು, ಆದರೆ ಅವರೇ ವರ್ಗಾವಣೆಯಾದರೆ ಅವರಿಗೆ ದೇವರೇ ಗತಿ. ಈ ಪರಿ ಸ್ವಂತ ದುಡ್ಡಿನಿಂದ ಸಮಾಜ ಸೇವೆ ಮಾಡುವ ಅಧಿಕಾರಿಯನ್ನು ನೀವು ನೋಡಿರುತ್ತೀರೋ ಇಲ್ಲವೋ ಗೊತ್ತಿಲ್ಲ. ಆದರೆ ಅವರು ನಮ್ಮ ಪಂಚಾಯಿತಿಯಲ್ಲಿದ್ದರು. ಅವರ ಅಭಿವೃದ್ಧಿ ಯೋಚನೆ ಯೋಜನೆಗಳೇ ಬೇರೆ. ಅವರು ಗ್ರಾಮ ಮಟ್ಟದ ಅಧಿಕಾರಿಯಾಗುವುದಕ್ಕಿಂತ ಹಿರಿಯ ಅಧಿಕಾರಿಯಾಗಿಬಿಟ್ಟಿದ್ದರೇ ಎಷ್ಟು ಚೆನ್ನಾಗಿರುತ್ತಿತ್ತು ಎಂದೆಣಿಸುತ್ತಿತ್ತು. ನಿವೇಶನ ರಹಿತರ ಬಗ್ಗೆ ಎಷ್ಟು ಯೋಚನೆ ಮಾಡುತ್ತಿದ್ದರೆಂದರೇ, ಬಹುಷಃ ಇನ್ನೊಂದು ಸ್ವಲ್ಪ ದಿನ ಇರುತ್ತಿದ್ದರೆ ನಿವೇಶನ ರಹಿತರಿಗೆ ದೇವರಾಗಿಬಿಡುತ್ತಿದ್ದರು. ಅವರ ಥರಾನೇ ಯೋಚನೆ ಮಾಡಿ ಇತರ ಅಧಿಕಾರಿಗಳು ಸಾಥ್ ಕೊಟ್ಟಿದ್ದರೆ ಅವರಿಗೆ ಮೂರು ವರ್ಷದಲ್ಲಿ ಒಂದು ಪಂಚಾಯಿತಿಯನ್ನು ಮಾದರಿ ಮಾಡಬಲ್ಲರು. ಅವರು ಬಂದ ಮೇಲೆ ಮಾಹಿತಿಗಳು ಕಟ್ಟ ಕಡೆಯ ವ್ಯಕ್ತಿಗಳಿಗೆ ತಲುಪುತಿತ್ತು. ಹಾಗೆ ಅವರುಗಳು ನೇರವಾಗಿಯೇ ಪಿಡಿಒ ರಿಂದ ಸಹಾಯ ಪಡೆಯುತ್ತಿದ್ದರು. ಇದು ಕೆಲವರಿಗೆ ಜೀರ್ಣಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅಧಿಕಾರಿಗಳು ಜನಪರರಾಗಿ ಕೆಲಸ ಮಾಡುವಾಗ ರಾಜಕೀಯ ಮಾಡದೆ ಸಹಕಾರ ಕೊಡುವುದು ನಮ್ಮೆಲ್ಲರ ಕರ್ತವ್ಯ. ಏಕೆಂದರೆ ಅಧಿಕಾರಿ ಹಾಗೂ ರಾಜಕಾರಣಿಗಳ ಕೆಲಸ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದು.ಈಗಾಗಲೇ ಇವರ ಕಾರ್ಯವಧಿಯಲ್ಲಿ ಅಮೃತ ಗ್ರಾಮ ಪಂಚಾಯತಿ ಯೋಜನೆ,MRF, FSM, SLWM ಕೆಲಸಗಳಿಗೆ ಚಾಲ್ತಿ ನೀಡಲಾಗಿದೆ.ದೂರ ದೃಷ್ಟಿ ಯೋಜನೆಗೆ ನಮ್ಮ ಪಂಚಾಯತಿಯನ್ನು ಆಯ್ಕೆ ಮಾಡಲಾಗಿದೆ. ಅಂತೆಯೇ ನಮ್ಮ ಗ್ರಾಮ ಪಂಚಾಯತಿಯನ್ನು ಪೈಲೆಟ್ ಗ್ರಾಮ ಪಂಚಾಯತಿಯಾಗಿ ಸಹ ಆಯ್ಕೆ ಮಾಡಲಾಗಿರುತ್ತದೆ.ಎಲ್ಲಕಿಂತ ಮುಖ್ಯವಾಗಿ ಪಂಚಾಯತಿಗೆ ಸೇರಿದ EO ಹೆಸರಿನಲ್ಲಿರುವ ಸರ್ವೇ ನಂ.283 ರಲ್ಲಿ ಸುಬ್ಬರಾಜು ಗೌಡ ಎಂಬುವವರು 4 ಎಕರೆ 10 ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಂಡಿರುತ್ತಾರೆ ಅದನ್ನು ಬಿಡಿಸಿ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವ ಯೋಜನೆಯನ್ನು ಓರ್ವ ಸದಸ್ಯನನ್ನು ಹೊರತುಪಡಿಸಿ ನಾನು ಮತ್ತು ಪಿಡಿಒ ಸೇರಿದಂತೆ ಎಲ್ಲಾ ಸದಸ್ಯರು ಕಾರ್ಯರೂಪಕ್ಕೆ ತರುವ ಪ್ರಯತ್ನದಲ್ಲಿದ್ದೇವೆ ಇದನ್ನು ಸಹಿಸದ ಓರ್ವ ಸದಸ್ಯಕೆಲವು ಸುಳ್ಳು ಸುದ್ದಿಯನ್ನು ಪಿಡಿಒ ವಿರುದ್ಧ ಹಬ್ಬಿಸಿದ್ದಾರೆ ಓರ್ವ ಸದಸ್ಯ ಸಾಮಾನ್ಯ ಸಭೆಯಲ್ಲಿ ಅನಧಿಕೃತ ಒತ್ತುವರಿ ಪರವಾಗಿ ವಾದ ಮಂಡಿಸಿರುವುದು ವಿಶಾದನೀಯ.

ಇಂತಹ ದಕ್ಷ ಆಡಳಿತಗಾರ್ತಿಯೊಂದಿಗೆ ಕೆಲಸ ಮಾಡುವುದು ಅಧ್ಯಕ್ಷನಾದ ನನಗೆ ಹಾಗೂ ನನ್ನ ಸಹಪಾಟಿ ಸದಸ್ಯರುಗಳಿಗೆ ಭಾಗ್ಯವೆಂದು ಭಾವಿಸಿದ್ದೇವೆ. ಆದರೆ ಒಂದಿಬ್ಬರು ಸದಸ್ಯರು ಹಣ ಮಾಡಲೆಂದೆ ಜನಸೇವೆ ಎಂಬ ಮುಖವಾಡ ಧರಿಸಿ ಗ್ರಾ.ಪ ಸದಸ್ಯರಾಗಿರುತ್ತಾರೆ. ಅಂತಹವರಿಗೆ ಮೇಡಂ ರವರ ನಿಷ್ಠುರ ಮಾತು, ಪ್ರಾಮಾಣಿಕತೆ ನುಂಗಲಾರದ ತುತ್ತಾಗಿತ್ತು.

ಹಿಂದೆಯೂ ಹಲವಾರು ವಿಫಲ ಪ್ರಯತ್ನ ಮಾಡಿ ಸೋತು ಸುಣ್ಣವಾಗಿದ್ದರು ಆದರೆ ಈ ಬಾರಿ ಎಲ್ಲಾ ಕುಟಿಲ ಮಾರ್ಗಗಳನ್ನು ಅನುಸರಿಸಿ ತಮ್ಮ ನಾಯಕರಿಗೆ ತಪ್ಪು ಮಾಹಿತಿ ನೀಡಿ ರಾಜಕೀಯ ಪ್ರಭಾವ ಬಳಸಿ ತಾತ್ಕಾಲಿಕ ಉಪದ್ರ ನೀಡುವ ಪ್ರಯತ್ನ ಮಾಡಿದ್ದಾರೆ.

ಪ್ರಸ್ತುತ ಹೆಬ್ಬಸಾಲೆ ಗ್ರಾ.ಪ ವ್ಯಾಪ್ತಿಯ ಹಲವಾರು ಬಡ ಕೂಲಿ ಕಾರ್ಮಿಕರು ಈ ಕಿಡಿಗೇಡಿಗಳನ್ನು ಶಪಿಸುತ್ತಿದ್ದಾರೆ, ಮೇಡಂ ರವರ ವರ್ಗಾವಣೆ ಸುದ್ದಿ ಕೇಳಿ ಕಣ್ಣೀರಿಡುತ್ತಿದ್ದಾರೆ ಅಂತಹ ಜನಪರ ಆಡಳಿತಗಾರ್ತಿಯ ಜೊತೆಗೆ ನಾನು ಸೇರಿದಂತೆ 14 ಸದಸ್ಯರಲ್ಲಿ 12 ಜನ ಸದಸ್ಯರಿದ್ದೇವೆ. ಈ ಕುತಂತ್ರಿಗಳ ಬಣ್ಣ ಬಯಲು ಮಾಡಲು ಹೆಚ್ಚು ಸಮಯ ಬೇಕಿಲ್ಲ, ನಾವು ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ ಅಂತೆಯೇ ರಾಜಕೀಯ ನಮಗೆ ಹೊಸತೂ ಅಲ್ಲ ಆದರೆ ಜನರು ನಮಗೆ ನೀಡಿರುವ ಜವಾಬ್ದಾರಿಯನ್ನು ರಾಜಕೀಯ ಗೊಳಿಸಲು ಇಚ್ಚಿಸುವುದಿಲ್ಲ ಹಾಗೆ ಮಾಡಿ ವತ್ಸಲಾ ಮೇಡಂ ರವರಿಗೆ ಇರಿಸು ಮುರಿಸು ಮಾಡಲು ನಮಗೆ ಇಷ್ಟವೂ ಇಲ್ಲ.

 

ಕೊನೆಯದಾಗಿ ನಾನು ಹೇಳುವುದಿಷ್ಟೇ ಕುತಂತ್ರಿಗಳ ಆಟ ಹೆಚ್ಚು ದಿನ ನಡೆಯುವುದಿಲ್ಲ ಇಂದಲ್ಲಾ ನಾಳೆ ಸತ್ಯ ಹೊರ ಬಂದೇ ಬರುತ್ತದೆ ಸತ್ಯಕ್ಕಾಗಿ, ಜನರಿಗಾಗಿ ನಮ್ಮ ಹೋರಾಟ ಎಂದಿಗೂ ನಿಲ್ಲುವುದಿಲ್ಲ.

 

ವಂದನೆಗಳು

ಮಹೇಶ್ ಶೆಟ್ಟಿ ಅಧ್ಯಕ್ಷರುಹೆ

ಬ್ಬಸಾಲೆ ಗ್ರಾಮ ಪಂಚಾಯತಿ.

 

ಹೆಬ್ಬಸಾಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಾಗಿದ್ದ ಕು. ವತ್ಸಲಾ ರವರು  ತಮ್ಮ ಗ್ರಾಮ ಪಂಚಾಯಿತಿಯಲ್ಲಿ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಒಂದು ಕಿರು ಪರಿಚಯ.

RELATED ARTICLES
- Advertisment -spot_img

Most Popular