Saturday, November 23, 2024
Homeಸುದ್ದಿಗಳುಸಕಲೇಶಪುರಕಾಂಗ್ರೆಸ್ ಬೆಂಬಲಿಸಿ ಮೈತ್ರಿ ಅಭ್ಯರ್ಥಿ ಸೋಲಿಸಿ:ಡಾ.ಬಿ.ಆರ್.ಅಂಬೇಡ್ಕರ್ ದಲಿತ ಹೋರಾಟಗಾರರ ಒಕ್ಕೂಟ ಕರೆ

ಕಾಂಗ್ರೆಸ್ ಬೆಂಬಲಿಸಿ ಮೈತ್ರಿ ಅಭ್ಯರ್ಥಿ ಸೋಲಿಸಿ:ಡಾ.ಬಿ.ಆರ್.ಅಂಬೇಡ್ಕರ್ ದಲಿತ ಹೋರಾಟಗಾರರ ಒಕ್ಕೂಟ ಕರೆ

ಕಾಂಗ್ರೆಸ್ ಬೆಂಬಲಿಸಿ ಮೈತ್ರಿ ಅಭ್ಯರ್ಥಿ ಸೋಲಿಸಿ:ಡಾ.ಬಿ.ಆರ್.ಅಂಬೇಡ್ಕರ್ ದಲಿತ ಹೋರಾಟಗಾರರ ಒಕ್ಕೂಟ ಕರೆ

ಸಕಲೇಶಪುರ : 2024 ರ ಹಾಸನ ಲೋಕಸಭಾ ಚುನಾವಣೆಯಲ್ಲಿ‌ ಕಾಂಗ್ರೆಸ್ ಅಭ್ಯರ್ಥಿ ‌ಶ್ರೇಯಸ್ ಪಟೇಲ್ ಬೆಂಬಲಿಸಲು ಡಾ.ಬಿ.ಆರ್.ಅಂಬೇಡ್ಕರ್ ದಲಿತ ಹೋರಾಟಗಾರರ ಒಕ್ಕೂಟ ನಿರ್ದಾರ ಕೈಗೊಳ್ಳಲಾಗಿದ್ದು ಜಿಲ್ಲೆಯಾಧ್ಯಂತ ಇಂದಿನಿಂದ ಪ್ರಚಾರ ಆಂದೋಲನ ಹಮ್ಮಿಕೊಂಡಿದೆ ಎಂದು‌‌ ಒಕ್ಕೂಟದ ರಾಜ್ಯ‌ಸಂಸ್ಥಾಪಕ ಅಧ್ಯಕ್ಷ‌‌ ಶ್ರೀಧರಕಲಿವೀರ ಹೇಳಿದ್ದಾರೆ

ಸಕಲೇಶಪುರದಲ್ಲಿ ಬುದವಾರ ಪತ್ರಿಕಾ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕ‌ರ್ ಅವರ ಸಿದ್ಧಾಂತದಡಿ ರಾಜಕೀಯ ಪ್ರಜ್ಞೆ ಮೂಡಿಸಲು ದಲಿತ ಸಂಘಟನೆಗಳ ಜನಾಂದೋಲನ‌ ಇದಾಗಿದ್ದು ಪ್ರತಿಯೊಬ್ಬ ಪ್ರಜೆಯು ಮತದಾನ ಮಾಡುವ ಮೂಲಕ ಸಂವಿಧಾನಬದ್ದವಾದ ಹಕ್ಕು ಮತ್ತು ಕರ್ತವ್ಯ ಪಾಲನೆ‌‌‌ ಮಾಡಬೇಕು ಎಂದು‌ ಹೇಳಿದರು.

ಪ್ರಜಾಪ್ರಭುತ್ವ, ಸಮಾನತೆ, ಬಹುತ್ವ,ಒಕ್ಕೂಟ, ಸಂವಿಧಾನದ ಸಂಪೂರ್ಣ ಅನುಷ್ಠಾನಕ್ಕಾಗಿ ನಿರ್ಧರಿಸಿರುವ ಕಾಂಗ್ರೆಸ್/ಐ.ಎನ್.ಡಿ.ಐ.ಎ. ಗೆಲ್ಲಿಸಿ
ಸಂವಿಧಾನ ಬದಲಾಯಿಸಲು ನಿರ್ಧರಿಸಿರುವ ಬಿಜೆಪಿ/ ಜನತಾದಳ/ಎನ್.ಡಿ.ಎ. ಸೋಲಿಸುವಂತೆ ಕರೆ ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನವನ್ನು ಬದಲಾಯಿಸಲು ನಿರ್ಧರಿಸಿರುವ ಬಿಜೆಪಿ/ ಜನತಾದಳ/ ಆರ್ ಪಿ ಐ (ಅಠವಳೆ) ಒಳಗೊಂಡ ಎನ್.ಡಿ.ಎ. ರಾಜಕೀಯ ರಂಗವು ಮಾನ್ಯ ಪ್ರಧಾನಿ ನರೇಂದ್ರಮೋದಿಯವರ ಸಾರಥ್ಯದಲ್ಲಿ ಚುನಾವಣಾ ಪ್ರಚಾರ ಹಮ್ಮಿಕೊಳ್ಳಲಾಗಿದೆ.ಅಂದರೆ ಜಾತಿ, ಅಸಮಾನತೆ, ಶೋಷಣೆಗಳು, ವರ್ಣಾಶ್ರಮ ಮತ್ತು ಮನುಸ್ಮೃತಿಯನ್ನು ಪುನಃ ವಾಪಸ್ಸು ತರುವ ಷಂಡ್ಯಂತ್ರವನ್ನು ಆರ್. ಎಸ್. ಎಸ್ ಪ್ರಣೀತ ಬಿಜೆಪಿ ಮತ್ತು ಜನತಾದಳಗಳು ಹೊಂದಿವೆ ಎಂದರು.
ಬಿಜೆಪಿ/ ಜನತಾದಳ ಮೈತ್ರಿಯು ಸುಳ್ಳು ಭರವಸೆಗಳೇ ತುಂಬಿರುವ ಪ್ರಣಾಳಿಕೆಗಳ ‘ಸಂಕಲ್ಪ ಪತ್ರ ಹೊರ ತಂದು ಮತದಾರರಿಗೆ ವಂಚಿಸುತ್ತಿದೆ. 400 ಎಂಪಿಗಳನ್ನು ಗೆದ್ದು ಲೋಕಸಭೆ/ ರಾಜ್ಯಸಭೆಗಳಲ್ಲಿ ಬಹುಮತ ಸಾಧಿಸಿ ಸಂವಿಧಾನವನ್ನು ಬದಲಾಯಿಸುವ ಗುಪ್ತ ಗುರಿಯನ್ನು ಎನ್.ಡಿ.ಎ. ಹೊಂದಿದೆ ಎಂದರು.

ಕಾಂಗ್ರೆಸ್ ಪಕ್ಷವು ರಾಹುಲ್‌ ಗಾಂಧಿ. ಮಲ್ಲಿಕಾರ್ಜುನಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಇವರುಗಳ ನೇತೃತ್ವದಲ್ಲಿ ಸಂವಿಧಾನವನ್ನು ಸಂರಕ್ಷಿಸಿ ಸಂಪೂರ್ಣವಾಗಿ ಅನುಷ್ಠಾನಗೊಳಿಸುವುದಾಗಿ ಘೋಷಿಸಿ ಜೊತೆಗೆ ಎಲ್ಲಾ ಜಾತಿ ಧರ್ಮಗಳ ವ್ಯಕ್ತಿಗಳ ಜನಗಣತಿ ಮತ್ತು ಸಾಮಾಜಿಕ, ಆರ್ಥಿಕ ಸಮೀಕ್ಷೆ, ಶೋಷಿತ
ಬಹುಜನರಿಗೆ ಶೇ.50 ಮೀರಿ ಮೀಸಲಾತಿ ನೀಡಲು ಸಂವಿಧಾನಕ್ಕೆ ತಿದ್ದುಪಡಿ, ಕೇಂದ್ರ ಬಜೆಟ್‌ ನಲ್ಲಿ‌ ಎಸ್ ಸಿ ಎಸ್ ಪಿ ಟಿಎಸ್ಪಿ ಕಾಯ್ದೆಯ ಜಾರಿ, ಪಂಚನ್ಯಾಯಗಳಾದ ಯುವ ನ್ಯಾಯ, ರೈತ ನ್ಯಾಯ, ಮಹಿಳಾ ನ್ಯಾಯ, ಶ್ರಮಿಕ ನ್ಯಾಯ,. ಪಾಲುದಾರಿಕೆಯ ನ್ಯಾಯಗಳ ಭರವಸೆಗಳನ್ನೊಳಗೊಂಡ ‘ನ್ಯಾಯಪತ್ರ’ ಪ್ರಕಟಿಸಿ ಆರ್ಥಿಕ ಅಸಮಾನತೆಯನ್ನು ನಿವಾರಿಸುವ ಘೋಷಣೆ ಮಾಡಲಾಗಿದೆ. ಜೊತೆಗೆ 25 ಹೊಸ ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗಿದೆ. ಈಗಾಗಲೇ ರಾಜ್ಯ ಸರ್ಕಾರವು ಘೋಷಿಸಿದ್ದ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರವೆಂಬ ನಂಬಿಕೆ, ವಿಶ್ವಾಸವನ್ನು ಜನರಲ್ಲಿ ಗಳಿಸಿದೆ. ಅಂತೆಯೇ ಕೇಂದ್ರ ಸರ್ಕಾರದಲ್ಲಿ ಕಾಂಗ್ರೆಸ್ ನೇತೃತ್ವದ ಐ.ಎನ್.ಡಿ.ಐ.ಎ ಸರ್ಕಾರವು ಅಧಿಕಾರಕ್ಕೆ ಬಂದು ಮುಂದೆ ಪ್ರಸ್ತುತ ಭರವಸೆಗಳನ್ನು ಈಡೇರಿಸುವ ನಂಬಿಕೆಗಳನ್ನು ಜನರಲ್ಲಿ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಸಂವಿಧಾನ/ಪ್ರಜಾಪ್ರಭುತ್ವ/ ಒಕ್ಕೂಟ/ದೇಶದ ಸಮಗ್ರತೆ/ ಸಾರ್ವಭೌಮತ್ವ/ ಏಕತೆಗಳನ್ನು ಕಾಪಾಡುವ ಗುಣ/ಗುರಿ ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ಹಾಸನದಲ್ಲಿ ಗೆಲ್ಲಿಸುವಂತೆ ಕೋರುತ್ತೇವೆ ಎಂದು ಮನವಿ ಮಾಡಿದರು.
ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಆ ಮೂಲಕ ಜೆಡಿಎಸ್ ದಲಿತರಿಗೆ ಧಾರ್ಮಿಕ ಅಲ್ಪಾಸಂಖ್ಯಾತರಿಗೆ ಮತ್ತು ಹಿಂದುಳಿದ ವರ್ಗಗಳಿಗೆ ನಂಬಿಕೆ ದ್ರೋಹ ಎಸಗಿದೆ. ಆದುದರಿಂದ ಬಿಜೆಪಿ/ ಜೆಡಿಎಸ್/ ಎನ್.ಡಿ.ಎ. ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಇವರನ್ನು ಈ ಬಾರಿ ಸೋಲಿಸಬೇಕೆಂದು ಜನತೆಯಲ್ಲಿ ವಿನಂತಿ ಮಾಡಿಕೊಳ್ಳುತ್ತೇವೆ ಎಂದರು.
ಜನಪರ, ಸರಳ ಸಜ್ಜನಿಕೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೇಯಸ್‌ ಎಂ. ಪಟೇಲ್ ಇವರನ್ನು ಗೆಲ್ಲಿಸುವಂತೆ ಮತದಾರರಲ್ಲಿ ಕೋರುತ್ತೇವೆ. ಹಾಸನ ಜಿಲ್ಲೆಯ ಸುಮಾರು 25 ವಿವಿಧ ದಲಿತ ಸಂಘಟನೆಗಳನ್ನು ಹೊಂದಿರುವ ಡಾ.ಬಿ.ಆರ್.ಅಂಬೇಡ್ಕರ್ ದಲಿತ ಹೋರಾಟಗಾರರ ಒಕ್ಕೂಟದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀಧರಕಲಿವೀರ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪರ ಪ್ರಚಾರ ಆಂದೋಲವನ್ನು ಸದರಿ ಕ್ಷೇತ್ರಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ದಲಿತ ಮುಖಂಡರಾದ ನಾರಾಯಣದಾಸ್ , ಭಾಗ್ಯ ಕಲಿವೀರ, ಕೆ.ವೈ.ಜಗದೀಶ್ ,ಯಸಳೂರು ಮಂಜು ,ಕ್ರೈಸ್ತ ಸಂಘಟನೆಗಳ ಮುಖಂಡ ಸುನೀಲ್ ಕುಮಾರ್ ,ಮುಂತಾದವರಿದ್ದರು.

RELATED ARTICLES
- Advertisment -spot_img

Most Popular