ರಾಜ್ಯ ಸರಕಾರ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದೆ – ವಳಲಹಳ್ಳಿ ಅಶ್ವಥ್ ಆಕ್ರೋಶ
ಸಕಲೇಶಪುರ : ಹಿಂದೂ ಕಾರ್ಯಕರ್ತರ ಗಡಿಪಾರಿಗೆ ಪೊಲೀಸ್ ಇಲಾಖೆ ಆದೇಶ ಮಾಡಿರುವ ವಿರುದ್ದ ಬಿಜೆಪಿ ತಾಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವಥ್ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ಸರಕಾರ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಂಘಟನೆಯ ಮೂಲಕ ಹಿಂದೂ ಸಮಾಜದ ಕೆಲಸ ಮಾಡುತ್ತಿರುವ ಸಂಘಟನೆಯ ಜವಾಬ್ದಾರಿಯುತ ಕಾರ್ಯಕರ್ತರನ್ನು ಗಡಿಪಾರು ಅಸ್ತ್ರ ಮೂಲಕ ಕುಗ್ಗಿಸುವ,ಬೆದರಿಸುವ ಸರಕಾರದ ಕ್ರಮವನ್ನು ಖಂಡಿಸುತ್ತೇವೆ.ರಾಜ್ಯ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ನಡೆಯನ್ನು ತೋರಿಸುತ್ತಿದೆ. ಅನೇಕ ವರುಷಗಳಿಂದ ಹಿಂದೂ ಸಮಾಜದ ಸಂಘಟನೆಯ,ರಕ್ಷಣೆಯ ಕೆಲಸ ಮಾಡುತ್ತಿರುವ ರಘು ಸಕಲೇಶಪುರ ಹಾಗೂ ಶಿವು ಇವರ ಮೇಲೆ ಗಡಿಪಾರು ಅಸ್ತ್ರ ಉಪಯೋಗಿಸಿ ಹಿಂದೂ ಸಂಘಟನೆಯನ್ನು ಹತ್ತಿಕ್ಕುವ ಕೆಲಸ ನಡೆಸುವ ಕ್ರಮವನ್ನು ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.ಸಿಎಂ ಸಿದ್ಧರಾಮಯ್ಯ ಸರಕಾರದಿಂದ ದ್ವೇಷದ ರಾಜಕಾರಣ ಮಾಡಲಾಗುತ್ತಿದ್ದು, ಸಿದ್ಧರಾಮಯ್ಯ ಮುಖ್ಯಮಂತ್ರಿ ಆದ ಬಳಿಕ ಗೋಹತ್ಯೆ, ರೈತರ ಆತ್ಮಹತ್ಯೆ,ಗೂಂಡಾಗಳ ಹಾವಳಿ ಹೆಚ್ಚಾಗಿದೆ, ರಾಜ್ಯದಲ್ಲಿ ಗೂಂಡಾಗಳಿಗೆ ಹೆಚ್ಚಿನ ಲಾಭ ಆಗಿದೆ, ರಾಜ್ಯ ಇಂದು ಗೂಂಡಾರಾಜ್ಯವಾಗಿ ಬದಲಾಗಿದೆ ಎಂದರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.