ಜೆಎಸ್ಎಸ್ ಪದವಿ ಪೂರ್ವ ಕಾಲೇಜಿಗೆ ಶೇ 100 ಫಲಿತಾಂಶ
ಸಕಲೇಶಪುರ: ತಾಲೂಕಿನ ಕೌಡಳ್ಳಿ ಗ್ರಾಮದ ಜೆ.ಎಸ್.ಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ 2024ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿಶಾಂಶ ದೊರಕಿದೆ.
ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ 53 ವಿದ್ಯಾರ್ಥಿಗಳಲ್ಲಿ 31 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ ಉಳಿದ 22 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದು ಕುಮಾರಿ ದೀಕ್ಷಾ ಎಂ ರವರು 600ಕ್ಕೆ 586 ಅಂಕಗಳಿಸುವ ಮೂಲಕ ಸಕಲೇಶಪುರ ತಾಲ್ಲೂಕು ಹಾಗೂ ಕಾಲೇಜಿಗೆ ಪ್ರಥಮ ಸ್ಥಾನ ಹಾಗೂ ಕುಮಾರಿ ಅನ್ನಪೂರ್ಣೇಶ್ವರಿರವರು 600ಕ್ಕೆ 581 ಅಂಕ ಪಡೆಯುವ ಮೂಲಕ ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ದೀಕ್ಷಾ ಎಂ (586), ಅನ್ನಪೂರ್ಣೇಶ್ವರಿ (581), ಉಜ್ವಲ ಹೆಚ್.ಎಸ್ (575), ರಚನ ಡಿ (569), ವಿಷ್ಣುಪ್ರಿಯ ಎಸ್.ಆರ್ (567), ಧನುಶ್ರೀ (566), ಪೃಥ್ವಿ ಜಿ.ಕೆ (565), ತನುಶ್ರೀ ಸಿ.ಹೆಚ್ (565), ಹೇಮಲತ ಎಸ್.ಎಸ್ (558) ಹಾಗೂ ಉನ್ನತಿ ಟಿ.ಎಂ (557) ರವರು ಅತೀ ಹೆಚ್ಚು ಅಂಕ ಪಡೆದ ಮೊದಲ 10 ವಿದ್ಯಾರ್ಥಿಗಳಾಗಿದ್ದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.
ಉತ್ತಮ ಸಾಧನೆ ಮಾಡಿದ ಕಾಲೇಜಿಗೆ ಕೀರ್ತಿ ತಂದ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಪೋಷಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.