Sunday, April 20, 2025
Homeಸುದ್ದಿಗಳುಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಖಾಸಗಿ ಬಸ್ ಪಲ್ಟಿ : ಸಕಲೇಶಪುರದ ಯುವಕ ಸಾವು

ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಖಾಸಗಿ ಬಸ್ ಪಲ್ಟಿ : ಸಕಲೇಶಪುರದ ಯುವಕ ಸಾವು

ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಖಾಸಗಿ ಬಸ್ ಪಲ್ಟಿ : ಸಕಲೇಶಪುರದ ಯುವಕ ಸಾವು.

ಸಕಲೇಶಪುರ: ಪಟ್ಟಣದ ಅಶೋಕ ರಸ್ತೆಯ ಅಂಬಾ ಡ್ರೈಪ್ರೂಟ್ಸ್ ವರ್ತಕ ನರೇಂದ್ರ ಸಿಂಗ್ ರವರ ಪುತ್ರ ರೋನಕ್ ಸಿಂಗ್ (22) ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಸಮೀಪ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

  ಮೃತ ಯುವಕ ರೋನಕ್ ಸಿಂಗ್ (23) ಡ್ರೋನ್ ಮೆಕ್ಯಾನಿಕ್ ಆಗಿ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು ಬೆಂಗಳೂರಿನಿಂದ ಚಿತ್ರದುರ್ಗಕ್ಕೆ  ಕಾರ್ಯನಿಮಿತ್ತ ಗೋಕರ್ಣ ಮಾರ್ಗವಾಗಿ ಹೊರಟಿದ್ದ ಎಂದು ತಿಳಿ ಬಂದಿದೆ. ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಗೋಕರ್ಣಕ್ಕೆ ಹೊರಟಿದ್ದ ಖಾಸಗಿ ಬಸ್ ಭಾನುವಾರ ಬೆಳಿಗ್ಗೆ 5.30ರ ವೇಳೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹನುಮಂತ ದೇವರ ಕಣಿವೆ ಪ್ರದೇಶದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಅಪಘಾತಕ್ಕೀಡಾಗಿದೆ. ಸ್ಥಳದಲ್ಲೆ ಮೂವರು ಮೃತ ಪಟ್ಟಿದ್ದು ಗೋಕರ್ಣದ 34 ವರ್ಷದ ಗಣೇಶ ಕಲ್ಲಪ್ಪ, ಶಿವಮೊಗ್ಗದ ಜಗದೀಶ್ ಎಂಬುವರ ಶವಗಳನ್ನು ಗುರುತಿಸಲಾಗಿತ್ತು. ಇದರಲ್ಲಿ ಪ್ರಯಾಣಿಸುತ್ತಿದ್ದ ರೋನಕ್ ಸಿಂಗ್ ಸಹ ಮೃತಪಟ್ಟಿದ್ದು ನಂತರ ಮೃತನ ಬಳಿಯಿದ್ದ ದಾಖಲಾತಿಗಳ ಆಧಾರದ ಮೇಲೆ ಸಕಲೇಶಪುರದ ಯುವಕನೆಂದು ಗುರುತಿಸಿ ಪೋಲಿಸರು ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಮೃತನ ಕುಟುಂಬದವರು ಹೊಳಲ್ಕೆರೆಗೆ ಹೋಗಿದ್ದು ನಂತರ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ. ರಾಷ್ಟ್ರೀಯ ಹೆದ್ದಾರಿ – 13ರಲ್ಲಿ ಅಪಘಾತಕ್ಕೀಡಾದ ಸ್ಲೀಪರ್ ಬಸ್ಸಿನಲ್ಲಿ ಸುಮಾರು 50 ಜನ ಪ್ರಯಾಣಿಕರಿದ್ದರು. ಇದರಲ್ಲಿ 38 ಜನರಿಗೆ ತೀವ್ರ ಗಾಯಗಳಾಗಿದ್ದು, ಹೊಳಲ್ಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 18 ಜನರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಹಾಗೂ 6 ಜನರನ್ನು ದಾವಣಗೆರೆಗೆ ಮತ್ತು 9 ಜನ ಗಾಯಾಳುಗಳನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ.

RELATED ARTICLES
- Advertisment -spot_img

Most Popular