ಶಟಲ್ ಬ್ಯಾಟ್ ಮೀಟನ್ ಬಾಳ್ಳುಪೇಟೆ ಯುವಕರ ಅಮೋಘ ಸಾಧನೆ.
ನವೀನ್ ಮತ್ತು ಸಂತೋಷ ಜೋಡಿ ಪ್ರಥಮಜಮ್ಮನಹಳ್ಳಿಯ ಮನು ಮತ್ತು ಅಭಿ ಜೋಡಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಸಕಲೇಶಪುರ : ಸಕಲೇಶ್ವರ ಸ್ವಾಮಿ ಜಾತ್ರೆ ಮಹೋತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ 66ನೇ ಜನಗಳ ಜಾತ್ರೆ ಹಾಗೂ ವಸ್ತು ಪ್ರದರ್ಶನದಲ್ಲಿ ನೆಡೆದ ಕ್ರೀಡಾಕೂಟದಲ್ಲಿ ತಾಲೂಕಿನ ಬಾಳ್ಳುಪೇಟೆ ಯುವಕರು ಅಮೋಘ ಸಾಧನಗೈದಿದ್ದಾರೆ.
ನಗರದ ಡಿಕೆ ಡೆವಲಪರ್ಸ್ ಮೈದಾನದಲ್ಲಿ ನಡೆದ ಶಟಲ್ ಬ್ಯಾಟ್ ಮೀಟನ್ ಕ್ರೀಡಾಕೂಟದಲ್ಲಿ ಬಾಳ್ಳುಪೇಟೆ ನವೀನ್ ಮತ್ತು ಸಂತೋಷ್ ಜೋಡಿ ಪ್ರಥಮ ಸ್ಥಾನ ಪಡೆದಿದ್ದಾರೆ. ಬಾಲುಪೇಟೆ ಸಮೀಪದ ಜಮ್ಮನಹಳ್ಳಿ ಯುವಕರಾದ ಮನು ಮತ್ತು ಅಭಿ ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಫೈನಲ್ ಪಂದ್ಯದ ವೇಳೆ ರೊಚಕ ಹಣಾಹಣಿಯಲ್ಲಿ ಬಾಳ್ಳುಪೇಟೆ ಯುವಕರು ಛಲ ಬಿಡದೆ ಬುದ್ಧಿವಂತಿಕೆಯಿಂದ ಆಟವಾಡಿದ್ದರಿಂದ ಪ್ರಥಮ ಸ್ಥಾನ ಪಡೆಯುವಲ್ಲಿ ನವೀನ್ ಹಾಗೂ ಸಂತೋಷ್ ತಂಡ ಯಶಸ್ವಿಯಾಗಿದೆ.