Monday, November 25, 2024
Homeಸುದ್ದಿಗಳುಸಕಲೇಶಪುರನಕಲಿ ಡಾಕ್ಟರೇಟ್ ಪಡೆದವರ ವಿರುದ್ಧ ಕ್ರಮ

ನಕಲಿ ಡಾಕ್ಟರೇಟ್ ಪಡೆದವರ ವಿರುದ್ಧ ಕ್ರಮ

ನಕಲಿ ಡಾಕ್ಟರೇಟ್ ಪಡೆದವರ ವಿರುದ್ಧ ಕ್ರಮ

ಬೆಂಗಳೂರು,ಫೆ.19- ವಿಶ್ವವಿದ್ಯಾನಿಲಯಗಳಿಂದ ನೀಡುವ ನಕಲಿ ಗೌರವ ಡಾಕ್ಟರೇಟ್ ಪದವಿಗಳನ್ನು ಪಡೆಯುವುದರ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಮಂಜುನಾಥ್ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಇತ್ತೀಚೆಗೆ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಪಕವಾಗಿ ನಕಲಿ ಡಾಕ್ಟರೇಟ್ ಪದವಿಗಳನ್ನು ನೀಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ.

ಇದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು. ನಕಲಿ ಗೌರವ ಡಾಕ್ಟರೇಟ್ ಕೊಡುವ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರ ಎಂದು ಮಂಜುನಾಥ್ ಕೇಳಿದ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಡಾಕ್ಟರೇಟ್ ಪದವಿ ಪಡೆದವರು ಡಾಕ್ಟರ್ ಎಂದು ಹಾಕೊಳ್ಳಬಹುದಾ ಎಂಬುದರ ಬಗ್ಗೆ ಸುಪ್ರಿಂಕೋರ್ಟ್ ತೀರ್ಪು ಬರಲಿದೆ. ಉನ್ನತ ಶಿಕ್ಷಣ ಪರಿಷತ್ ಸಭೆ ಕರೆದು, ನಕಲಿ ಗೌರವ ಡಾಕ್ಟರೇಟ್ ಪಡೆಯವ ಪ್ರಕರಣಗಳಿಗೆ ಕಡಿವಾಣ ಹಾಕುತ್ತೇವೆ ಎಂದು ಆಶ್ವಾಸನೆ ನೀಡಿದರು.ಜೊತೆಗೆ ಖಾಸಗಿ ವಿಶ್ವವಿದ್ಯಾನಿಲಯಗಳ ಮುಖ್ಯಸ್ಥರ ಕರೆದು ಚರ್ಚೆ ಮಾಡುತ್ತೇವೆ. ಇಂತಹ ಪ್ರಕರಣಗಳು ಮರುಕಳಿಸಂತೆ ಸರ್ಕಾರ ಸೂಕ್ತ ಕ್ರಮ ಜರುಗಿಸಲಿದೆ ಎಂದು ಆಶ್ವಾಸನೆ ನೀಡಿದರು.

RELATED ARTICLES
- Advertisment -spot_img

Most Popular