ಮನೆ ಮೇಲೆ ವಿದ್ಯುತ್ ಕಂಬ ಉರಿಳಿಸಿದ ಕಾಡಾನೆ : ತಪ್ಪಿದ ಭಾರಿ ಅನಾಹುತ.
ಸಕಲೇಶಪುರ : ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು ಕಾಡಾನೆಯೊಂದು ವಾಸದ ಮನೆಯ ಮೇಲೆಯೇ ವಿದ್ಯುತ್ ಕಂಬ ಉರುಳಿಸಿರುವ ಘಟನೆ ಜರುಗಿದೆ.
ತಾಲೂಕಿನ ಬೆಳಗೋಡು ಹೋಬಳಿ ಶಿಡಗಳಲೆ ಗ್ರಾಮದ ಮಲ್ಲಿಕಾರ್ಜುನ್ ಎಂಬುವರ ಮನೆಯ ಮುಂಭಾಗ 440 ಕಿ. ವ್ಯಾ ಸಾಮರ್ಥ್ಯದ ವಿದ್ಯುತ್ ತಂತಿ ಹಾದು ಹೋಗಿದ್ದು ಸಂಪರ್ಕಕ್ಕೆ ಅಳವಡಿಸಿದ್ದ ವಿದ್ಯುತ್ ಕಂಬದ ಮೇಲೆ ದಾಳಿ ನಡೆಸಿರುವ ಕಾಡಾನೆಯು ಕಂಬವನ್ನು ಮನೆಯ ಮೇಲೆಯೇ ಉರುಳಿಸಿದೆ. ಕಂಬ ಉರುಳಿಸುವ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಭಾರಿ ದುರಂತವೊಂದು ತಪ್ಪಿದೆ.ಹೆಬ್ಬನಹಳ್ಳಿ, ಹೊಸಕೊಪ್ಪಲು, ಮಾಸುವಳ್ಳಿ ಭಾಗದಲ್ಲಿ ಕಳೆದ 15 ದಿನಗಳಿಂದ ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು ಅಪಾರ ಪ್ರಮಾಣದ ಬೆಳೆ ನಾಶದ ಜೊತೆಗೆ ಜನರು ವಾಸಿಸುವ ಮನೆಗಳ ಮೇಲೂ ದಾಳಿ ನಡೆಸುತ್ತಿರುವುದು ಇಲ್ಲಿನ ಸಾರ್ವಜನಿಕರು ಭಯದ ವಾತಾವರಣದಲ್ಲಿ ಜೀವನ ನಡೆಸುವಂತಾಗಿದೆ. ಸರ್ಕಾರ ಕೂಡಲೇ ಕಾಡಾನೆಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವಿದ್ಯುತ್ ಕಂಬ ಉರುಳುಸಿರುವುದನ್ನು ಕೆಇಬಿ ಇಲಾಖೆ ಶೀಘ್ರವೇ ದುರಸ್ತಿ ಪಡಿಸುವಂತೆ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದಾರೆ.