ಸಕಲೇಶಪುರ: ಪಟ್ಟಣದಲ್ಲಿರುವ ತಾಲೂಕು ಕ್ರಾರ್ಡ್ ಆಸ್ಪತ್ರೆ 75 ನೇ ವರ್ಷದ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು ಈ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಇಲಾಖೆಗಳ ನೌಕರರಿಗೆ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳ ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿಗಳಿಗಾಗಿ ಫೆಬ್ರುವರಿ 10 ಹಾಗೂ 11ರಂದು 2 ದಿನಗಳ ಕಾಲದ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾವಳಿಯನ್ನು ಪಟ್ಟಣದ ಸುಭಾಷ್ ಮೈದಾನದಲ್ಲಿ ಆಯೋಜಿಸಲು ಆರೋಗ್ಯ ಇಲಾಖೆ ವತಿಯಿಂದ ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದೆ. ಪಟ್ಟಣದ ಸುಭಾಷ್ ಮೈದಾನದಲ್ಲಿ ಎರಡು ಕಡೆ ಏಕಕಾಲದಲ್ಲಿ ಎರಡು ಪಂದ್ಯಗಳನ್ನು ಆಡಿಸಲಾಗುವುದು. ಶನಿವಾರ 10 ತಂಡಗಳು ಲೀಗ್ ಮಾದರಿಯ ಪಂದ್ಯ ಆಡಳಿದ್ದು ಭಾನುವಾರ ಇನ್ನುಳಿದ 10 ತಂಡಗಳು ಆಡಳಿದೆ. ಶಾಸಕ ಸಿಮೆಂಟ್ ಮಂಜು, ಉಪವಿಭಾಗಾಧಿಕಾರಿ ಡಾ.ಶ್ರುತಿ, ತಹಶೀಲ್ದಾರ್ ಮೇಘನಾ, ಡಿ.ವೈ.ಎಸ್.ಪಿ ಪ್ರಮೋದ್ ಕುಮಾರ್, ಕ್ರಾರ್ಡ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಹೇಶ್, ಆಸ್ಪತ್ರೆ ವೈದ್ಯರುಗಳಾದ ಡಾ.ಮಧುಸೂಧನ್, ಡಾ.ಹೇಮಂತ್, ಡಾ.ಕಿಣಿ, ಡಾ.ಅರುಣ್, ಡಾ.ಪುರುಷೋತ್ತಮ್ ಮುಂತಾದವರು ಭಾಗಿಯಾಗಿ ಶನಿವಾರ ಬೆಳಗ್ಗೆ 9 ಗಂಟೆಗೆ ಪಂದ್ಯಾವಳಿಯನ್ನು ಉದ್ಘಾಟಿಸಿಲಿದ್ದಾರೆ. ಆರೋಗ್ಯ ಇಲಾಖೆಯ ಕ್ಷಕಿರಣ ವಿಭಾಗದ ತಂತ್ರಜ್ಞ ರಘು ಹಾಗೂ ಸಂಗಡಿಗರು ಆಸ್ಪತ್ರೆ ವತಿಯಿಂದ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದಾರೆ. ತಾಲೂಕಿನ ವಿವಿಧ ಇಲಾಖೆಗಳ ನೌಕರರು ಕಳೆದ ಒಂದು ವಾರದಿಂದ ಈ ಪಂದ್ಯಾವಳಿಗಾಗಿ ನಿರಂತರವಾಗಿ ಅಭ್ಯಾಸ ಮಾಡುತ್ತಿರುವುದು ಕಂಡು ಬಂದಿದೆ. ಪ್ರತಿ ತಂಡಕ್ಕೆ ಪ್ರವೇಶ ಶುಲ್ಕ 4000ರೂಗಳಿದ್ದು ಪ್ರಥಮ ಬಹುಮಾನ 30000 ಹಾಗೂ ಪಾರಿತೋಷಕ, ದ್ವಿತೀಯಾ ಬಹುಮಾನ 20000 ಹಾಗೂ ಪಾರಿತೋಷಕ ಮತ್ತು ತೃತೀಯಾ ಬಹುಮಾನ 10000ರೂ ಹಾಗೂ ಪಾರಿತೋಷಕ, ಸರಣಿ ಶ್ರೇಷ್ಠ, ಉತ್ತಮ ಬ್ಯಾಟರ್, ಉತ್ತಮ ಬೌಲರ್ , ಉತ್ತಮ ಆಲ್ ರೌಂಡರ್ ಪ್ರಶಸ್ತಿಗಳನ್ನು ಸಹ ನೀಡಲಾಗುತ್ತದೆ.