ಇದೇ ಅಕ್ಟೋಬರ್ 25ರಂದು ವರ್ಷದ ಕೊನೆಯ ಭಾಗಶಃ ಸೂರ್ಯಗ್ರಹಣ ಗೋಚರವಾಗಲಿದ್ದು ದೀಪಾವಳಿಯಂದೇ ಈ ಸೂರ್ಯಗ್ರಹಣ ಗೋಚರಿಸಲಿದೆ.
ಅ. 25ರಂದು ಸಂಜೆ 4.29ಕ್ಕೆ ಆರಂಭವಾಗಿ ಸಂಜೆ 5.42ಕ್ಕೆ ಸೂರ್ಯಗ್ರಹಣ ಕೊನೆಗೊಳ್ಳಲಿದ್ದು ಭಾರತದ ಬಹುತೇಕ ಪ್ರದೇಶಗಳಲ್ಲಿ ಗೋಚರಿಸಲಿದೆ ಎಂದು ಹೇಳಲಾಗುತ್ತಿದೆ. ಇನ್ನುಳಿದಂತೆ ಯುರೋಪ್, ಪಶ್ಚಿಮ ಸೈಬೀರಿಯಾ, ಮಧ್ಯ ಏಷ್ಯಾ, ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾದ ಈಶಾನ್ಯ ಭಾಗದಲ್ಲಿ ಗೋಚರಿಸುತ್ತದೆ.ಈ ಭಾಗಶಃ ಸೂರ್ಯಗ್ರಹಣವು ದೆಹಲಿಯಲ್ಲಿ ಗೋಚರಿಸುತ್ತದೆ. ಭಾಗಶಃ ಸೂರ್ಯಗ್ರಹಣವನ್ನು ಆಂಶಿಕ್ ಸೂರ್ಯ ಗ್ರಹಣ ಎಂದೂ ಕರೆಯುತ್ತಾರೆ. ಸಂಪೂರ್ಣ ಗ್ರಹಣವಾದಾಗ ಚಂದ್ರನು ಸೂರ್ಯಗೆ ಸಂಪೂರ್ಣವಾಗಿ ಅಡ್ಡ ನಿಂತಿರುತ್ತಾನೆ. ಆದರೆ, ಭಾಗಶಃ ಗ್ರಹಣಗಳಲ್ಲಿ ಸೂರ್ಯನ ಒಂದು ಭಾಗ ಮಾತ್ರ ಅಸ್ಪಷ್ಟಗೊಳಿಸಲಾಗುತ್ತದೆ.