Wednesday, January 22, 2025
Homeಸುದ್ದಿಗಳುಸುಭಾಷ್ ಮೈದಾನದ ಕ್ರೀಡಾಂಗಣದಲ್ಲಿ ದನಗಳ ಜಾತ್ರೆ ಹಾಗೂ ವಸ್ತುಪ್ರದರ್ಶನ: ಶಾಸಕ ಸಿಮೆಂಟ್ ಮಂಜು

ಸುಭಾಷ್ ಮೈದಾನದ ಕ್ರೀಡಾಂಗಣದಲ್ಲಿ ದನಗಳ ಜಾತ್ರೆ ಹಾಗೂ ವಸ್ತುಪ್ರದರ್ಶನ: ಶಾಸಕ ಸಿಮೆಂಟ್ ಮಂಜು

ಸಕಲೇಶಪುರ: ಸಕಲೇಶ್ವರಸ್ವಾಮಿರವರ ರಥೋತ್ಸವದ ಹಿನ್ನೆಲೆಯಲ್ಲಿ ನಡೆಯಲಿರುವ ದನಗಳ ಜಾತ್ರೆ ಹಾಗೂ ವಸ್ತುಪ್ರದರ್ಶನವನ್ನು ಪಟ್ಟಣದ ಸುಭಾಷ್ ಮೈದಾನದಲ್ಲಿ ನಡೆಸಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

   ಪಟ್ಟಣದ ಪುರಸಭಾ ಸಭಾಂಗಣದಲ್ಲಿ ನಡೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ಮಾತನಾಡಿ ಕೆಲವೊಂದು ಕಾರಣಗಳಿಂದ ಈ ಬಾರಿ ಜಾತ್ರ ಮಹೋತ್ಸವವನ್ನು ಸುಭಾಷ್ ಮೈದಾನದಲ್ಲಿ ಮಾಡಲಾಗುತ್ತಿದೆ. ಖರ್ಚು ವೆಚ್ಚ ಎಲ್ಲಾ ಕಳೆದು ಯಾವುದಾದರು ಹಣ ಉಳಿದಲ್ಲಿ ಆ ಹಣವನ್ನು ಸುಭಾಷ್ ಮೈದಾನ ಅಭಿವೃದ್ದಿಗೆ ಬಳಸಲಾಗುತ್ತದೆ. ಜಾತ್ರೆ ಜನಸಾಮಾನ್ಯರಿಗೆ ಹೊರೆಯಾಗಬಾರದು, ಮಕ್ಕಳು ಖುಷಿ ಪಡಬೇಕು ಎಂಬ ನಿಟ್ಟಿನಲ್ಲಿ ಅಮ್ಯೂಸ್‌ಮೆಂಟ್‌ಗಳಿಗೆ ದರ ನಿಗದಿ ಪಡಿ ಟೆಂಡರ್ ಮಾಡಲಾಗುತ್ತದೆ. ಅಲ್ಲದೆ ಹೇಮಾವತಿ ಸೇತುವೆಗೆ ಸುಣ್ಣ ಬಣ್ಣ ಮಾಡಿ ವಿದ್ಯುತ್ ದೀಪಲಂಕಾರ ಮಾಡಲಾಗುತ್ತದೆ. ಈ ಹಿಂದಿನಂತೆ ಪುರಸಭಾ ಸದಸ್ಯರ ನೇತೃತ್ದದಲ್ಲಿ ಕ್ರೀಡೆ, ಸಾಂಸ್ಕೃತಿಕ, ಮಹಿಳಾ ಹಾಗೂ ಪ್ರಚಾರ ಸಮಿತಿಗಳನ್ನು ಜಾತ್ರೆಗಾಗಿ ರಚಿಸಲಾಗುವುದು. ಒಟ್ಟಾರೆಯಾಗಿ ಜಾತ್ರೆಯನ್ನು ಅರ್ಥಪೂರ್ಣವಾಗಿ ಜನ ಸಾಮಾನ್ಯರಿಗೆ ಹೊರೆಯಾಗದಂತೆ ಮಾಡಲಾಗುವುದು. ಪುರಸಭೆಯಲ್ಲಿ 2023 ಸಾಲಿನ ವಸ್ತುಪ್ರದರ್ಶನದ ಸಂಬಂದ ಕೆಲವೊಂದು ಕಡತಗಳು ನಾಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ ಯಾವುದೆ ಕಡತಗಳು ಇಲ್ಲದೆ ಬಿಲ್ ಪಾಸಾದರೆ ಕ್ರಮ ಕೈಗೊಳ್ಳಲಾಗುತ್ತದೆ. ಬೀದಿ ವ್ಯಾಪಾರಿಗಳು ಪಟ್ಟಣದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಈ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಯಾವುದೆ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಅತಿ ಶೀಘ್ರದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಾಗುವುದು. ಪಟ್ಟಣದಲ್ಲಿ ಪುರಸಭೆಯ ಕೆಲವೊಂದು ಜಾಗಗಳನ್ನು ಕಡಿಮೆ ದರದಲ್ಲಿ ನೆಲಬಾಡಿಗೆಗೆ ತೆಗೆದುಕೊಂಡಿರುವ ಆರೋಪವಿದ್ದು ಶೀಘ್ರದಲ್ಲಿ ನೆಲಬಾಡಿಗೆ ಏರಿಕೆಗೆ ಕ್ರಮ ಕೈಗೊಳ್ಳಲಾಗುವುದು. ಮಾಂಸದ ಅಂಗಡಿಗಳನ್ನು ಒಂದೆಡೆಗೆ ಸ್ಥಳಾಂತರಿಸಿ ಖಾಲಿ ಇರುವ ಮಳಿಗೆಗಳನ್ನು ಹರಾಜಿಗೆ ಹಾಕಲಾಗುವುದು. ಪುರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಜನಸಾಮಾನ್ಯರಿಗೆ ಸರಿಯಾಗಿ ಸ್ಪಂಧಿಸಬೇಕು, ಸಮಸ್ಯೆಗಳು ಇದೆ ಎಂದು ಸುಮ್ಮನೆ ಕುಳಿತುಕೊಳ್ಳದೆ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು ಎಂದು ಕಿವಿ ಮಾತು ಹೇಳಿದರು.

ಈ ಸಂಧರ್ಭದಲ್ಲಿ ಉಪವಿಭಾಗಾಧಿಕಾರಿ ಡಾ.ಶ್ರುತಿ, ಪುರಸಭಾ ಮುಖ್ಯಾಧಿಕಾರಿ ರಮೇಶ್ ,ಪುರಸಭಾ ಸದಸ್ಯರುಗಳು ಹಾಜರಿದ್ದರು.

RELATED ARTICLES
- Advertisment -spot_img

Most Popular