Sunday, April 20, 2025
Homeಸುದ್ದಿಗಳುಸಕಲೇಶಪುರನಾಳೆ ಸಕಲೇಶಪುರದಲ್ಲಿ ಬೃಹತ್ ಶೋಭಾಯಾತ್ರೆ.

ನಾಳೆ ಸಕಲೇಶಪುರದಲ್ಲಿ ಬೃಹತ್ ಶೋಭಾಯಾತ್ರೆ.

ಸಕಲೇಶಪುರ ತಾಲೂಕು ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ವತಿಯಿಂದ ನಾಳೆ ದಿನಾಂಕ 22-12-2023ರಂದು ದತ್ತಮಾಲೆ ಅಭಿಯಾನದ ಅಂಗವಾಗಿ ಪಟ್ಟಣದಲ್ಲಿ ಸಂಜೆ 5.30ಕ್ಕೆ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಗುರುವೇಗೌಡ ಕಲ್ಯಾಣ ಮಂಟಪದವರೆಗೆ ಬೃಹತ್ ಶೋಭಾಯಾತ್ರೆ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಂಧರ್ಭದಲ್ಲಿ ರಾಮಜನ್ಮಭೂಮಿ 1989-1990-1992-2002 ನೇ ಇಸವಿಯಲ್ಲಿ ಅಯೋಧ್ಯೆಗೆ ತಾಲೂಕಿನಿಂದ ಕರಸೇವೆಗೆ ಹೋದ ಕರಸೇವಕರಿಗೆ ಸನ್ಮಾನ ಮಾಡಲಾಗುವುದು. ಅರಕಲಗೂಡಿನ ತೋಂಡದಾರ್ಯ ಸಂಸ್ಥಾನ ಮಠದ ಬಸವಲಿಂಗಸ್ವಾಮಿಜೀ ಆಶೀರ್ವಚನ ನೀಡಲಿದ್ದು ಉಡುಪಿಯ ವಾಗ್ಮಿ ಶ್ರೀಕಾಂತ ಶೆಟ್ಟಿ ಮುಖ್ಯ ಭಾಷಣ ಮಾಡಲಿದ್ದು ಕಾರ್ಯಕರ್ತರು ಹಾಗೂ ಹಿಂದೂ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡಬೇಕೆಂದು ಭಜರಂಗದಳ ಜಿಲ್ಲಾ ಸಹ ಸಂಚಾಲಕ ಕೌಶಿಕ್ ಮನವಿ ಮಾಡಿದ್ದಾರೆ.

RELATED ARTICLES
- Advertisment -spot_img

Most Popular