ಯಸಳೂರು ವಲಯ ಅರಣ್ಯಧಿಕಾರಿ ಜಗದೀಶ್ ಕರ್ತವ್ಯದಿಂದ ಅಮಾನತ್ತು.
ಸಕಲೇಶಪುರ : ಜೆಸಿಬಿ ಬಿಡುಗಡೆ ಲಂಚ ಪ್ರಕರಣದಲ್ಲಿ ಸಿಲುಕ್ಕಿದ್ದ ವಿವಾದತ್ಮಕ ಅಧಿಕಾರಿ ಯಸಳೂರು ವಲಯ ಅರಣ್ಯಧಿಕಾರಿ ಜಗದೀಶ್ ರವರ ಅಮಾನತ್ತು ಆದೇಶವನ್ನು ಅರಣ್ಯ ಇಲಾಖೆಯ ಶಿಸ್ತು ಪ್ರಾಧಿಕಾರಿ ಹಾಗೂ ಪ್ರದಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ದೀಕ್ಷಿತ್ ಅಮಾನತ್ತು ಆದೇಶ ಹೊರಡಿಸಿದ್ದಾರೆ. ಶಾಸಕ ಸಿಮೆಂಟ್ ಮಂಜು ಸಹ ಇವರನ್ನು ಅಮಾನತ್ತು ಮಾಡುವಂತೆ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳಿಗೆ ಮನವಿ ಮಾಡಿದ್ದರು.