Thursday, December 12, 2024
Homeಸುದ್ದಿಗಳುಪಾಳ್ಯ ರಘು ಗೆ ಸಿರಿಗನ್ನಡ ರತ್ನ ಪ್ರಶಸ್ತಿ ಪ್ರಧಾನ

ಪಾಳ್ಯ ರಘು ಗೆ ಸಿರಿಗನ್ನಡ ರತ್ನ ಪ್ರಶಸ್ತಿ ಪ್ರಧಾನ

ಪಾಳ್ಯ ರಘು ಗೆ ಸಿರಿಗನ್ನಡ ರತ್ನ ಪ್ರಶಸ್ತಿ ಪ್ರಧಾನ

ಸಾಮಾಜಿಕ ಸೇವೆ ಗುರುತಿಸಿದ ಸಿರಿಗನ್ನಡ ವೇದಿಕೆ , ಸಿರಿಗನ್ನಡ ಮಹಿಳಾ ವೇದಿಕೆ.

ಹಾಸನ : ಇಂದು ಅರಸೀಕೆರೆಯಲ್ಲಿ ನೆಡೆದ ಸಿರಿಗನ್ನಡ ವೇದಿಕೆ , ಸಿರಿಗನ್ನಡ ಮಹಿಳಾ ವೇದಿಕೆ ಹಾಸನ ಹಾಗೂ ಕನ್ನಡ ರಾಜ್ಯೋತ್ಸವದ ಸುವರ್ಣ ಸಂಭ್ರಮ ಮತ್ತು ರಾಜ್ಯ ಮಟ್ಟದ ಕವಿ ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ ರಘು ಪಾಳ್ಯರವರಿಗೆ ಸಿರಿಗನ್ನಡ ರತ್ನ ಪ್ರಶಸ್ತಿ ಪ್ರಧಾನಮಾಡಲಾಯಿತು.

ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲ್ಲೂಕಿನ ಕರವೇ ಉಸ್ತುವಾರಿಯಾಗಿರುವ ರಘು ಪಾಳ್ಯ ರವರ ಕನ್ನಡ ಪರ ಹೋರಾಟವನ್ನು ಗುರುತಿಸಿ ಈ ಕಾರ್ಯಕ್ರಮದಲ್ಲಿ ಸಿರಿಗನ್ನಡ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ವೇಳೆ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು..ಮಾಲಾ ಚಲುವನಹಳ್ಳಿ ಸಿರಿಗನ್ನಡ ವೇದಿಕೆ ಮಹಿಳಾ ಜಿಲ್ಲಾ ಅಧ್ಯಕ್ಷರು ಬರೆದ ನೆನೆಪಾಗುವ ಮುನ್ನ ಎಂಬ ಕವನ ಸಂಕಲನ,ಭಾಗ್ಯ ಮಂಜುನಾಥ್ ರವರ ಆರು ಪಾದ ನೂರು ಭಾವ,ಶ್ರೀಮತಿ ಶಾರದ ದೇವರಾಜ್ ರವರ ಬನಸಿರಿ ಎಂಬ ಕವಿತೆಗಳ ಪುಸ್ತಕ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀಮತಿ ರಜನಿ ಜೀರಗ್ಯಳ, ರಾಜ್ಯಾಧ್ಯಕ್ಷರು ಸಿರಿಗನ್ನಡ ಮಹಿಳಾ ವೇದಿಕೆ ಬೆಂಗಳೂರು, ಶ್ರೀಮತಿ ಮಾಲ ಚಲುವನಹಳ್ಳಿ, ಜಿಲ್ಲಾ ಅಧ್ಯಕ್ಷರು ಸಿರಿಗನ್ನಡ ವೇದಿಕೆ ಮಹಿಳಾ ವೇದಿಕೆ ಹಾಸನ ಜಿಲ್ಲೆ, ಚಂದ್ರು ಬಾಣವರ ಜಿಲ್ಲಾ ಅಧ್ಯಕ್ಷರು ಸಿರಿಗನ್ನಡ ವೇದಿಕೆ ಹಾಸನ ಜಿಲ್ಲೆ ಉಮೇಶ್ ಹೊಸಹಳ್ಳಿ ಸಾಹಿತಿಗಳು, ಪರಮೇಶ್ ಸಾಹಿತಿಗಳು ಮಡಬಲು ಪ್ರಜ್ವಲ್ ಕೋಡಿಹಳ್ಳಿ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಾಹಿತಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು

RELATED ARTICLES
- Advertisment -spot_img

Most Popular