ಸಕಲೇಶಪುರ: ರಸ್ತೆ ಬದಿಯಲ್ಲಿ ನಿಲ್ಲಿಸಿದ ಲಾರಿಯಿಂದ 350 ಲೀಟರ್‌ಗೂ ಹೆಚ್ಚು ಡೀಸೆಲ್ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಪಟ್ಟಣದ ಮಹೇಶ್ವರಿ ನಗರದ ನಿವಾಸಿಯಾದ ತಸ್ಲೀಮ್ ಎಂಬುವವರಿಗೆ ಸೇರಿದ ಲಾರಿಯಿಂದ ಕಳೆದ ರಾತ್ರಿ ಆನೇಮಹಲ್, ಬಳಿ ರಾತ್ರಿ ನಿಲ್ಲಿಸಿದ್ದ ಲಾರಿಯಿಂದ ಡೀಸೆಲ್ ಕಳ್ಳತನ ಮಾಡಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆನೆಮಹಲ್ ಗ್ರಾಮದ ದೇವಸ್ಥಾನದಿಂದ ಮೂರು ಕಿ.ಮೀ. ದೂರದಲ್ಲಿ ಮನೆ ಇದೆ, ಅಲ್ಲಿಗೆ ಲಾರಿ ಹೋಗಲು ರಸ್ತೆ ಇಲ್ಲದೆ ಇರುವ ಕಾರಣ ದೇವಸ್ಥಾನದ ಸಮೀಪ ಲಾರಿ ನಿಲ್ಲಿಸುತ್ತಿದ್ದೇವೆ. ಕಳೆದ ರಾತ್ರಿ ಎಂದಿನಂತೆ ಲಾರಿಯನ್ನು ನಿಲ್ಲಿಸಿ ಮನೆಗೆ ಹೋಗಿ ಬರುವ ಒಳಗೆ ಕಳ್ಳರು ಡೀಸೆಲ್ ಕಳ್ಳತನ ಮಾಡಿದ್ದಾರೆ ಎಂದು ಲಾರಿ ಮಾಲಿಕ ತಸ್ಲೀಮ್ ಹೇಳಿದರು.
ಲಾರಿಯಲ್ಲಿ ಸರಕನ್ನು ಹೇರಿ ಹೊರಟೆರೆ , ಏಳರಿಂದ ಎಂಟು ದಿವಸವಾಗುತ್ತದೆ ಈ ಮಧ್ಯೆ ಸಮಯ ಸಿಕ್ಕಿದರೆ ಅನೆ ಮಹಲ್ ಸಮೀಪ ಲಾರಿಯನ್ನು ನಿಲ್ಲಿಸಿ ಮನೆಗೆ ಹೋಗಿ ಬರುತ್ತೇವೆ ಈ ಮಧ್ಯೆ ಕಳ್ಳರು ಡಿಜಿಟಲ್ ಕಳ್ಳತನ ಮಾಡಿದ್ದಾರೆ. ಸಾಲುಸೂಲ ಮಾಡಿಕೊಂಡು ಲಾರಿಯನ್ನು ಮಾಡಿ ಬದುಕು ಕಟ್ಟಿಕೊಂಡಿರುವ ನಮ್ಮಂತವರಿಗೆ 350 ಲೀಟರ್ ಡೀಸೆಲ್ ಕಳ್ಳತನವಾದರೆ ಜೀವನ ಸಾಗಿಸಲು ಕಷ್ಟವಾಗುತ್ತದೆ ಎಂದು ಇದ್ದರು.
ಇತ್ತೀಚಿನ ದಿನಗಳಲ್ಲಿ ಡಿಸಲ್ ಕಳ್ಳತನ ದಿನನಿತ್ಯ ನಡೆಯುತ್ತಿದ್ದು ಮನೆ ಮುಂದೆ ನಿಲ್ಲಿಸುವ ದ್ವಿಚಕ್ರ ವಾಹನಗಳು, ಜೀಪು, ಕಾರುಗಳಿಂದಲೂ ಡೀಸೆಲ್, ಪೆಟ್ರೋಲ್ ಕಳ್ಳತನ ಪ್ರಕರಣಗಳು ಆಗಾಗ ನಡೆಯುತ್ತಿರುವ ದೂರುಗಳು ಪಟ್ಟಣ ಹಾಗೂ ತಾಲ್ಲೂಕಿನ ಇತರ ಪ್ರದೇಶಗಳಲ್ಲಿ ಕೇಳಿ ಬಂದಿವೆ.
ಕಳೆದ ಕೆಲವು ದಿನಗಳಿಂದ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇತ್ತೀಚೆಗೆ ಕಳವು ಪ್ರಕರಣ ಹೆಚ್ಚಾಗಿದ್ದು, ಲಾರಿ ಮಾಲೀಕರು ಹಾಗೂ ಚಾಲಕರು ಆತಂಕಗೊಂಡಿದ್ದಾರೆ.