Saturday, April 19, 2025
Homeಸುದ್ದಿಗಳುಜೀಪಿನ ಟ್ರೈಲರ್ ಕಳಚಿ ಗಂಭೀರ ಗಾಯಗೊಂಡ ಕೂಲಿ ಕಾರ್ಮಿಕರು.

ಜೀಪಿನ ಟ್ರೈಲರ್ ಕಳಚಿ ಗಂಭೀರ ಗಾಯಗೊಂಡ ಕೂಲಿ ಕಾರ್ಮಿಕರು.

ಜೀಪಿನ ಟ್ರೈಲರ್ ಕಳಚಿ ಗಂಭೀರ ಗಾಯಗೊಂಡ ಕೂಲಿ ಕಾರ್ಮಿಕರು.

ಸಕಲೇಶಪುರ: ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಜೀಪ್ ಟ್ರೈಲರ್ ಒಂದು ಕಳಚಿ ಐದು ಜನ ಕಾರ್ಮಿಕರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ವಾಟೆ ಗುಂಡಿ ಸಮೀಪ ನಡೆದಿದೆ.

     ತಾಲೂಕಿನ ಬಾಳ್ಳುಪೇಟೆ ಸಮೀಪ ಕಾಫಿ ತೋಟವೊಂದರಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ಕ್ಯಾಮನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೇದಲಮಕ್ಕಿ ಗ್ರಾಮಕ್ಕೆ ಹಿಂತಿರುಗುವಾಗ ವಾಟೆಗುಂಡಿ ಸಮೀಪ ಜೀಪಿನ ಟ್ರೈಲರ್ ಮಗುಚಿ ಬಿದ್ದ ಪರಿಣಾಮ ಟ್ರೈಲರ್ ನಲ್ಲಿ ಕುಳಿತಿದ್ದ 10ಜನ ಕಾರ್ಮಿಕರಲ್ಲಿ 6 ಜನಕ್ಕೆ ತೀವ್ರ ಪೆಟ್ಟು ಬಿದ್ದು ಉಳಿದ 6 ಕಾರ್ಮಿಕರನ್ನು ಹಾಸನದ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.

RELATED ARTICLES
- Advertisment -spot_img

Most Popular