Saturday, November 23, 2024
Homeಸುದ್ದಿಗಳುಗ್ರಾಮೀಣಸಕಲೇಶಪುರ : ಪಟ್ಲ ಬೆಟ್ಟಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಪಿಕಪ್ ವಾಹನ ಮಾಲೀಕರ ಬೇಡಿಕೆಗೆ ಸ್ಪಂದಿಸಿದ ಶಾಸಕ...

ಸಕಲೇಶಪುರ : ಪಟ್ಲ ಬೆಟ್ಟಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಪಿಕಪ್ ವಾಹನ ಮಾಲೀಕರ ಬೇಡಿಕೆಗೆ ಸ್ಪಂದಿಸಿದ ಶಾಸಕ ಸಿಮೆಂಟ್ ಮಂಜುನಾಥ್.

ಸಕಲೇಶಪುರ : ಪಟ್ಲ ಬೆಟ್ಟಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಪಿಕಪ್ ವಾಹನ ಮಾಲೀಕರ ಬೇಡಿಕೆಗೆ ಸ್ಪಂದಿಸಿದ ಶಾಸಕ ಸಿಮೆಂಟ್ ಮಂಜುನಾಥ್.

ಸ್ವತಃ ಪಿಕಪ್ ಚಾಲನೆ ಮಾಡಿ ಜೀಪು ಮಾಲೀಕರಿಗೆ ಹುಮ್ಮಸ್ಸು ತುಂಬಿದ ಶಾಸಕರು.

 

ಸಕಲೇಶಪುರ : ಸಕಲೇಶಪುರ ಎಂದರೆ ಕರ್ನಾಟಕದ ಕಾಶ್ಮೀರ ಎನ್ನುತ್ತಾರೆ. ಇಲ್ಲಿನ ನಿಸರ್ಗದ ಸೌಂದರ್ಯಕ್ಕೆ ಮಾರುಹೋದವರು ಯಾರು ಇಲ್ಲ.
ಹೌದು, ತಾಲೂಕಿನ ಹೆತ್ತೂರು ಹೋಬಳಿ ವಣಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಪಟ್ಲಾ ಬೆಟ್ಟ ಕೂಡ ಪ್ರವಾಸಿಗರನ್ನು ಆಕರ್ಷಿಸುವ ಪ್ರಾಕೃತಿಕ ಸೌಂದರ್ಯವಾದ ತಾಣವಾಗಿದೆ. ಆದರೆ ಕಳೆದ ಮಳೆಗಾಲದಲ್ಲಿ. ಗುಡ್ಡ ಕುಸಿಯುವ ಆತಂಕದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಪಟ್ಲಾ ಬೆಟ್ಟದ ಕೆಳಗಿಂದ ಮೇಲಕ್ಕೆ ಕರೆದೊಯ್ಯುವ ಪಿಕಪ್ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಿತ್ತು.ಇದರಿಂದ ಬಾಡಿಗೆ ಮಾಡಿ ಜೀವನ ನೆಡೆಸುತ್ತಿದ್ದ ಹಲವಾರು ಪಿಕಪ್ ಮಾಲೀಕರ ಬದುಕು ಬೀದಿಗೆ ಬಿದ್ದಂತಾಗಿತ್ತು. ಮಲೆನಾಡು ಭಾಗದಲ್ಲಿ ನಿರೀಕ್ಷಿತವಾದ ಮಳೆ ಬೀಳದ ಹಿನ್ನೆಲೆಯಲ್ಲಿ ಬೆಟ್ಟದ ಸಂಚಾರಕ್ಕೆ ಯಾವುದೇ ಅಡಚಣೆಯಾಗುತ್ತಿರಲಿಲ್ಲ ಆದರೂ ಕೂಡ ಅರಣ್ಯ ಇಲಾಖೆ ವಿನಾಕಾರಣ ಪಿಕಪ್ ವಾಹನ ಮಾಲೀಕರಿಗೆ ಬೆಟ್ಟಕ್ಕೆ ಸಂಚಾರ ನಡೆಸಿದಂತೆ ನಿರ್ಬಂಧ ಹೇರಿತ್ತು. ಇದು ಪ್ರವಾಸೋದ್ಯಮ ಇಲಾಖೆಗೆ ಸೇರಿದ ಜಾಗವಾಗಿದ್ದರು ಅರಣ್ಯ ಇಲಾಖೆಯ ಹಸ್ತಕ್ಷೇಪದಿಂದ ಸುಲಭವಾಗಿ ಪ್ರಕೃತಿಯ ರಸದೂತಣ ಸವಿಯಲಾಗದೆ ಪ್ರವಾಸಿಗರಿಗೆ ಪ್ರಯಾಸದಿಂದ ಬೆಟ್ಟ ಹತ್ತಬೇಕಾದ ಅನಿವಾರ್ಯತೆ ಎದುರಾಗಿತ್ತು. ಈ ಸಂಕಷ್ಟವನ್ನು ಬಗೆಹರಿಸುವಂತೆ ಪಿಕಪ್ ಮಾಲೀಕರ ಸಂಘವು ಶಾಸಕ ಸಿಮೆಂಟ್ ಮಂಜುರವರ ಬಳಿ ಕಳೆದ ಮೂರು ತಿಂಗಳ ಹಿಂದೆಯೇ ಸಮಸ್ಯೆ ಬಗೆಹರಿಸುವಂತೆ ಮನವಿಯ ಮೇರೆಗೆ ಖುದ್ದು ಸ್ಥಳಕ್ಕೆ ತೆರಳಿದ ಶಾಸಕರು ಪರಿಸ್ಥಿತಿಯನ್ನು ಅವಲೋಕಿಸಿ ಕಳೆದ ಮೂರು ತಿಂಗಳಿಂದ ಅರಣ್ಯ ಇಲಾಖೆ ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ರಾಜ್ಯ ಸರ್ಕಾರದ ಸಚಿವರನ್ನು ಭೇಟಿಯಾಗಿ ಸ್ಥಳೀಯ ಪಿಕಪ್ ಮಾಲೀಕರು ಹಾಗೂ ಪ್ರವಾಸಿಗರಿಗೆ ಅಡಚಣೆಯಾಗುತ್ತಿರುವ ಬಗ್ಗೆ ಕೂಲಂಕುಶವಾಗಿ ವಿವರಿಸಿದ್ದರು. ಶಾಸಕರ ಸತತ ಪ್ರಯತ್ನದ ನಡುವೆಯೂ ಅರಣ್ಯ ಇಲಾಖೆಯು ತನ್ನ ಕುಂಟು ನೆಪ ಹೇಳುತ್ತಿರುವುದನ್ನು ಮನಗಂಡ ಶಾಸಕರು ಶುಕ್ರವಾರ ಸಂಜೆ ಅರಣ್ಯ ಇಲಾಖೆಯ ಅಪರ ಕಾರ್ಯದರ್ಶಿ ಜಾವೇದ್ ಅಕ್ತರ್ ಹಾಗೂ ಸಂಬಂಧಪಟ್ಟ ಇಲಾಖೆಗಳ ಸಚಿವರನ್ನು ಭೇಟಿ ಮಾಡಿ ಶನಿವಾರದೊಳಗೆ ಸಮಸ್ಯೆ ಬಗ್ಗೆ ಹರಿಸದಿದ್ದರೆ ಹಾಸನದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಕೂರುವುದಾಗಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆಯೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪಿಕಪ್ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಪಟ್ಲಾ ಬೆಟ್ಟಕ್ಕೆ ಭೇಟಿ ನೀಡಿ ಜೀಪು ಚಾಲನೆ ಮಾಡಿದ ನಂತರ ಮಾತನಾಡಿ

ವಾಹನ ಚಾಲಕರು ಹಾಗೂ ಪ್ರವಾಸಿಗರು ಸುರಕ್ಷತೆಯಿಂದ ಪಟ್ಲಬೆಟ್ಟದ ಸೌಂದರ್ಯ ವೀಕ್ಷಿಸಬೇಕು.ಪ್ರಜಾಪ್ರಭುತ್ವದ ಅಡಿಯಲ್ಲಿ ಮತದಾರರು ನೀಡಿರುವ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಆದರೂ ಕೆಲವರು ನನ್ನ ಏಳಿಗೆಯನ್ನು ಸಹಿಸದೆ ಅಪಪ್ರಚಾರದಲ್ಲಿ ತೊಡಗಿದ್ದಾರೆ. ನಾನು ಮಾಡುವ ಕೆಲಸಗಳಿಗೆ ಕೆಲವರು ಪುಕ್ಸಟ್ಟೆ ಪ್ರಚಾರ ತಗೊಳುತಿದ್ದಾರೆ.ಯಾವುದೇ ಸರ್ಕಾರವಿರಲಿ ಶಾಸಕರ ಮಾತನ್ನು ಅಧಿಕಾರಿಗಳು ಕೇಳುತ್ತಾರೆ. ಏಕೆಂದರೆ ಶಾಸಕರು ಕ್ಷೇತ್ರದ ಪ್ರಥಮ ಪ್ರಜೆಯಾಗಿರುತ್ತಾರೆ.ನನ್ನ ವಿರುದ್ಧ ಅಪಪ್ರಚಾರ ತೊಡಗಿರುವವರು ಒಮ್ಮೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಬಳಿ ತೆರಳಿ ಶಾಸಕರು ಯಾವ ಸಮಯದಲ್ಲಿ ಇಲ್ಲಿನ ಸಮಸ್ಯೆ ಬಗ್ಗೆ ಮನವಿ ಪತ್ರ ನೀಡಿದ್ದಾರೆ ಎಂಬುವುದನ್ನು ಹೋಗಿ ತಿಳಿದುಕೊಳ್ಳಲಿ. ಯಾರೂ ಕೂಡ ಆತ್ಮಸಾಕ್ಷಿಗೆ ವಂಚನೆ ಮಾಡಿಕೊಳ್ಳದೆ ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಲಿ. ಸಕಲೇಶಪುರದ ಜನ ಬುದ್ಧಿವಂತರಿದ್ದಾರೆ ಯಾವುದು ಸರಿ ಯಾವುದು ತಪ್ಪು ಎಂದು ಅವಲೋಕಿಸುವ ಪರಿಜ್ಞಾನ ಇಲ್ಲಿನ ಜನರಲ್ಲಿ ಇದೆ. ಸುಳ್ಳು ಹೆಚ್ಚು ದಿನ ನಿಲ್ಲುವುದಿಲ್ಲ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.

RELATED ARTICLES
- Advertisment -spot_img

Most Popular