ಸಕಲೇಶಪುರ : ವಿಶ್ವ ಅಂಚೆ ದಿನದ ಪ್ರಯುಕ್ತ ಒಲಂಪಸ್ ಶಾಲಾ ಚಿನ್ನರಿಗೆ ಅಂಚೆ ಕಚೇರಿಯ ಕಾರ್ಯ ನಿರ್ವಹಣೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು
ಅಂಚೆ ಕಚೇರಿಗೆ ಆಗಮಿಸಿದ್ದ ಮಕ್ಕಳು ಅಂಚೆ ಕಚೇರಿಯ ಕಾರ್ಯ ನಿರ್ವಹಣೆಯನ್ನು ತಿಳಿದುಕೊಂಡರು. ಅಂಚೆ ಪತ್ರ ರವಾನಿಸುವುದು, ಪತ್ರಗಳನ್ನು ಮನೆ ಮನೆಗೆ ತಲುಪಿಸುವ ವಿಧಾನ, ಪೋಸ್ಟಲ್ ಆರ್ಡರ್, ವಿವಿಧ ಉಳಿತಾಯ ಯೋಜನೆ ಸೇರಿದಂತೆ ಒಟ್ಟಾರೆ ಅಂಚೆ ಕಚೇರಿಯಲ್ಲಿ ಸಾರ್ವಜನಿಕರಿಗೆ ಒದಗಿಸುವ ಸೇವೆಗಳ ಕುರಿತು ಮಾಹಿತಿ ನೀಡಲಾಯಿತು.
ತಂತ್ರಜ್ಞಾನದ ಯುಗದಲ್ಲಿ ಅಂಚೆ ಕಚೇರಿಯ ಕಾರ್ಯ ನಿರ್ವಹಣೆ ಕುರಿತು ತಿಳುವಳಿಕೆ ಕಡಿಮೆ ಇರುವ ಸಂದರ್ಭದಲ್ಲಿ ಅಂಚೆ ಇಲಾಖೆಯ ಮಹತ್ವದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲಾಯಿತು ಮಕ್ಕಳು ಹಲವು ವಿಷಯಗಳನ್ನು ಕುತೂಹಲದಿಂದ ಕೇಳಿ ತಿಳಿದಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಒಲಂಪಸ್ ಶಾಲೆಯ ಸಮತ ಮಾತನಾಡಿ, ಇಂದಿನ ಪೀಳಿಗೆ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿರುವ ಪರಿಣಾಮ ಅಂಚೆ ಕಚೇರಿಗಳ ಕಾರ್ಯ ನಿರ್ವಹಣೆ ಬಗೆಗೆ ಮಾಹಿತಿಯ ಕೊರೆತೆ ಎದುರಿಸುತ್ತಿದ್ದಾರೆ . ತಂತ್ರಜ್ಞಾನ ಸಾಕಷ್ಟು ಬೆಳೆದಿದ್ದರೂ ಅಂಚೆ ಸಿಬ್ಬಂದಿ ಸಾರ್ವಜನಿಕರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಅಂಚೆಯಣ್ಣನ ಬರುವಿಕೆಗೆ ಕಾಯುತ್ತಿದ್ದ ದಿನಗಳು ಇಂದು ಇಲ್ಲವಾಗಿದ್ದರೂ ಅಂಚೆ ತನ್ನ ಮಹತ್ವವನ್ನು ಹಾಗೆಯೇ ಉಳಿಸಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಅಂಚೆ ಪಾಲಕರಾದ ವನಜಾಕ್ಷಮ್ಮ, ಒಲಂಪಸ್ ಶಾಲೆಯ ಸಿಬ್ಬಂದಿಗಳಾದ ಹರ್ಷಿತ ಮಧುಚಂದ್ರ, ವರ್ಷ, ರೆಹನಾ, ಅಶ್ವಿನಿ, ರಶ್ಮಿ, ನಿಶ್ಚಿತಾ, ಮತ್ತು ಅವಿನಾಶ್ ಇದ್ದರು.