ಯುವಕನ ಆತ್ಮಹತ್ಯೆ
ಸಕಲೇಶಪುರ: ಕಳೆದ ಎರಡು ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನೋರ್ವ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಮಧು (31) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಬುಧುವಾರ ತಾಲೂಕಿನ ಹಾಲೇಬೇಲೂರು ಗ್ರಾಮದಲ್ಲಿರುವ ತನ್ನ ಮನೆಯಲ್ಲಿ ವಿಷ ಸೇವನೆ ಮಾಡಿದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಯುವಕ ಮೃತಪಟ್ಟಿದ್ದಾನೆ.
ಮೃತನು ಪಟ್ಟಣದ ಮಧು ಸ್ಟುಡಿಯೋದಲ್ಲಿ ಪೋಟೋಗ್ರಾಪರ್ ಆಗಿ ಕೆಲಸಕ್ಕಿದ್ದು ನಂತರ ಮಲ್ಲಮ್ಮನ ರಸ್ತೆಯಲ್ಲಿ ತನ್ನದೇ ಆದ ನಿಸರ್ಗ ಸ್ಟುಡಿಯೋದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಜೊತೆಗೆ ಜಮೀನಿನಲ್ಲಿ ರೈತರಾಗಿ ಕೆಲಸ ಮಾಡುತ್ತಿದ್ದರು. ಅಪಾರ ಸ್ನೇಹ ವೃಂದವನ್ನು ಹೊಂದಿದ್ದ ಇವರು ಯಾವ ಕಾರಣಕ್ಕೆ ವಿಷ ಸೇವನೆ ಮಾಡಿದರೆಂಬುದು ರಹಸ್ಯವಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.