ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷನ ಮಾರಣಾಂತಿಕ ಹಲ್ಲೆ.
ಔತಣ ಕೂಟದಲ್ಲಿ ಭಾಗಿಯಾಗಿದ್ದ ವೇಳೆ ಕಿಡಿಗೇಡಿಗಳಿಂದ ತೀವ್ರ ಹಲ್ಲೆ
ಗಭೀರವಾಗಿ ಗಾಯಗೊಂಡಿರುವ ವಿನುಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ.
ಸಕಲೇಶಪುರ : ತಾಲೂಕಿನ ಹಲಸುಲಿಗೆ ಗ್ರಾಮ ಪಂಚಾಯತಿ ಶಕ್ತಿ ಕೇಂದ್ರ ಅಧ್ಯಕ್ಷ ವಿನು ರವರ ಮೇಲೆ ಮಂಗಳವಾರ ರಾತ್ರಿ ಬಾಳುಪೇಟೆಯಲ್ಲಿ ನಡೆದ ಔತಣ ಕೂಟದ ಕಾರ್ಯಕ್ರಮ ವೇಳೆ ಕೆಲವರು ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಕತ್ತಿನಲ್ಲಿದ್ದ ಚಿನ್ನದ ಸರ ವನ್ನು ಸಹ ದೋಚಿದ್ದಾರೆ.
ಸದ್ಯ ಹಾಸನದ ಸರ್ಕಾರಿ ಆಸ್ಪತ್ರೆ ಯಲ್ಲಿ ವಿನು ಚಿಕಿತ್ಸೆ ಪಡೆಯುತ್ತಿದ್ದು ಹೆಚ್ಚಿನ ಚಿಕಿತ್ಸೆ ಗೆ ಬೆಂಗಳೂರಿಗೆ ದಾಖಲಿಸುವ ಸಾಧ್ಯತೆ ಇದೆ.