ಕರ್ನಾಟಕ ಬಿಜೆಪಿ ಶಾಸಕರ ಮೇಲೆ ತೆಲಂಗಾಣ ಚುನಾವಣಾ ಜವಾಬ್ದಾರಿ.
ಶಾಸಕ ಸಿಮೆಂಟ್ ಮಂಜು ತೆಲಂಗಾಣದ ಒಂದು ವಿಧಾನಸಭಾ ಕ್ಷೇತ್ರದ ಚುನಾವಣೆಯ ಹೊಣೆ ಹೊತ್ತಿದ್ದಾರೆ.
ಬಿಜೆಪಿ ಹಿರಿಯ ನಾಯಕ ಬಂಗಾರು ಲಕ್ಶ್ಮಣ್ ಪುತ್ರಿ ಶ್ರುತಿ ಬಂಗಾರು ರನ್ನು ಭೇಟಿ ಮಾಡಿ ಮಾತುಕತೆ ನೆಡೆಸಿದ ಸಿಮೆಂಟ್ ಮಂಜುನಾಥ್.
ತೆಲಂಗಾಣ: ಮುಂಬರುವ ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ಬಿಜೆಪಿಯ ಬಹುತೇಕ ಶಾಸಕರಿಗೆ ಚುನಾವಣಾ ಜವಾಬ್ದಾರಿ ನೀಡಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಮೇರೆಗೆ ರಾಜ್ಯ ಪ್ರಾದೇಶಿಕ ಸಮಿತಿ ಆಯ್ಕೆ ಮಾಡಿದೆ. 2023 ರಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿವೆ. ವಿವಿಧ ಸಾಂಸ್ಥಿಕ ಮತ್ತು ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳಿಗಾಗಿ ವಿವಿಧ 18 ರಾಜ್ಯಗಳ ಬಿಜೆಪಿ ಶಾಸಕರನ್ನು ಪ್ರದೇಶಕ್ಕೆ ನಿಯೋಜಿಸಲಾಗಿದೆ. ಈ ಚುನಾಯಿತ ಶಾಸಕರು ಆಗಸ್ಟ್ 20 ಮತ್ತು 27 ರ ನಡುವೆ ತಮ್ಮ ನಿಯೋಜಿತ ಕ್ಷೇತ್ರಗಳ ವಿವಿಧ ಪ್ರದೇಶಗಳಿಗೆ ಪ್ರಯಾಣ ಬೆಳೆಸಿದ್ದಾರೆ.
ಬಿಜೆಪಿ ಮಾಜಿ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಪುತ್ರಿ ಭೇಟಿಯಾದ ಸಿಮೆಂಟ್ ಮಂಜುನಾಥ್ :
ಭಾರತೀಯ ಜನತಾ ಪಾರ್ಟಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷ,ದಲಿತ ಮೊದಲ ಅಧ್ಯಕ್ಷ ಬಂಗಾರು ಲಕ್ಷ್ಮಣ್ ರವರ ಪುತ್ರಿ ಬಂಗಾರು ಶ್ರುತಿ ಅವರನ್ನು ಶಾಸಕ ಸಿಮೆಂಟ್ ಮಂಜುನಾಥ್ ಭೇಟಿ ಮಾಡಿ ಮಾತನಾಡಿದರು.ಈ ವೇಳೆ ವಿವಿಧ ರಾಜ್ಯಗಳ ಶಾಸಕರರನ್ನು ಭೇಟಿ ಮಾಡಿ ವಿಚಾರ ವಿನಿಮಯ ಮಾಡಿಕೊಂಡರು.