ಸಕಲೇಶಪುರ:ಪಟ್ಟಣದ ಸಂತ ಜೋಸೆಫರ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆದ ಕಾರ್ಯ ಕ್ರಮದಲ್ಲಿ ತಾಲೂಕಿನ ನೋಂದಾಯಿತ ವಾಹನ ಚಾಲಕರಿಗೆ ಕರುನಾಡು ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ನ ಸದಸ್ಯರು ಹಾಗೂ ಪಧಾದಿಕಾರಿಗಳಿಗೆ ಐಡಿ ಕಾರ್ಡ್ ವಿತರಿಸಿ ಮಾತನಾಡಿದ ಶಾಸಕರು ದೇಶದ ಬೆಳವಣಿಗೆಗೆ ಚಾಲಕರ ಶ್ರಮ ಅತ್ಯವಶ್ಯಕ ,ಸರಕು ಸಾಗಣೆಯ ಚಾಲಕರು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಹಲವು ಸಮಸ್ಯೆ ಗಳಿಂದ ತಮ್ಮ ಜೀವನ ನಡೆಸುತಿದ್ದಾರೆ. ಈ ರೀತಿಯ ಸಂಘ ಸಂಸ್ಥೆಗಳ ಸಹಾಯದಿಂದ ತಮ್ಮ ಹಲವು ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.. ನಾನು ಚಾಲಕರ ಸಮಸ್ಯೆ ಗಳನ್ನು ಬಗೆಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು ಈ ಸಂಧರ್ಭದಲ್ಲಿ ಶಾಸಕ ಸಿಮೆಂಟ್ ಮಂಜು ಹಾಗು ಪಟ್ಟಣದ ಕುಡುಗರ ಹಳ್ಳಿ ಯಲ್ಲಿರುವ ಭಾರತೀಯ ಸೈನ್ಯದ ಯೋಧರನ್ನು ಸನ್ಮಾನಿಸಲಾಯಿತು.
ಈ ಕಾರ್ಯ ಕ್ರಮದಲ್ಲಿ ಟ್ರೇಡ್ ಯೂನಿಯನ್ ತಾಲೂಕು ಅಧ್ಯಕ್ಷ ನವೀನ್ ಲಾರೆನ್ಸ್ , ಸಂಘಟನೆ ಕಾರ್ಯದರ್ಶಿ ಸಚ್ಚಿನ್, ಜಗದೀಶ್, ಡಾ ನವೀನ್ ಚಂದ್ರ ಶೆಟ್ಟಿ ,ಶಾಲೆಯ ಮುಖ್ಯ ಶಿಕ್ಷಕಿ ಗೀತಾ ಮುಂತಾದವರು ಉಪಸ್ಥಿತಿ ರಿದ್ದರು