Saturday, April 19, 2025
Homeಸುದ್ದಿಗಳುಸಕಲೇಶಪುರಕಾಡಾನೆಯ ದಾಳಿಯಿಂದ ಬೈಕ್ ಸವಾರ ಪಾರು

ಕಾಡಾನೆಯ ದಾಳಿಯಿಂದ ಬೈಕ್ ಸವಾರ ಪಾರು

ಸಕಲೇಶಪುರ : ಕಾಡಾನೆಯ ದಾಳಿಯಿಂದ ಬೈಕ್ ಸವಾರನೊಬ್ಬ ಪ್ರಾಣಪಾಯದಿಂದ  ಪಾರಾಗಿರುವ ಘಟನೆ ತಾಲೂಕಿನ ಕಿರೇಹಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ

ತಾಲ್ಲೂಕಿನ  ಗ್ರಾಮದ ಶ್ರೀನಿವಾಸ ಎಸ್ಟೇಟ್ ಸಮೀಪ ಭಾನುವಾರ ರಾತ್ರಿ ಕಾಟಳ್ಳಿ ಗ್ರಾಮದ ಚೇತನ್ ಅವರು ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ   ಎದುರುನಿಂದ ಬಂದ ಕಡಣಿಯೊಂದು  ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ಗಾಬರಿಗೊಂಡರು ವಿಚಲಿತರಾಗದೆ  ಚೇತನ್ ಬೈಕ್ ಬಿಟ್ಟು ತಪ್ಪಿಸಿಕೊಂಡಿದ್ದಾರೆ. ಮದವೇರಿದ ಕಾಡಾನೆ  ಬೈಕನ್ನು ತುಳಿದು ಹಾನಿ ಮಾಡಿದೆ.
ಘಟನೆ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಸಾರ್ವಜನಿಕರು ಹಾಗು ವಾಹನ ಸವರಾರು ಕಾಟಳ್ಳಿ, ಕಿರೇಹಳ್ಳಿ, ಮಾಸವಳ್ಳಿ ಮಾರ್ಗವಾಗಿ ಸಂಚರಿಸುವವರು ಎಚ್ಚರಿಕೆಯಿಂದ ಮನವಿ ಮಾಡಿಕೊಂಡಿದ್ದಾರೆ.

RELATED ARTICLES
- Advertisment -spot_img

Most Popular