ಸಕಲೇಶಪುರ: ಚೆಸ್ಕಾಂ ಇಲಾಖೆಯ ನಿರ್ಲಕ್ಷ್ಯಕ್ಕೆ ಬೇಸತ್ತು ಮನೆಯ ಮಾಲಿಕ ವಿದ್ಯುತ್ ಕಂಬವನ್ನು ಒತ್ತುವರಿ ಮಾಡಿಕೊಂಡು ಮನೆ ಕಟ್ಟಿರುವ ಅಪರೂಪದ ದೃಶ್ಯ ತಾಲೂಕಿನ ಗಣೇಶ್ ನಗರದಲ್ಲಿ ಕಂಡು ಬಂದಿದ್ದು ಕೂಡಲೆ ಚೆಸ್ಕಾಂ ಇಲಾಖೆ ಕಂಬವನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕಾಗಿದೆ.
ತಾಲೂಕಿನ ಹಲಸುಲಿಗೆ ಗ್ರಾ.ಪಂ ವ್ಯಾಪ್ತಿಯ ಗಣೇಶ್ ನಗದ ಕಮಲಮ್ಮ ಎಂಬುವರ ಮನೆಯ ಬಚ್ಚಲು ಮನೆಯಿಂದ ವಿದ್ಯುತ್ ಕಂಬ ಹಾದುಹೋಗಿದ್ದು ಇದೀಗ ಮನೆಯಲ್ಲಿರುವವರು ಆತಂಕದಿಂದ ಮನೆಯಲ್ಲಿ ನೆಲೆಸಿದ್ದಾರೆ. ಪಟ್ಟಣಕ್ಕೆ ಸಮೀಪವಿರುವ ಗಣೇಶ್ ನಗರದಲ್ಲಿ ಸರ್ಕಾರದಿಂದ ಮಂಜೂರಾದ ನಿವೇಶನದಲ್ಲಿ 30*40 ನಿವೇಶನದಲ್ಲಿ ಮೊದಲಿಗೆ ಮಾಲಿಕರೊರ್ವರು ಮನೆ ಕಟ್ಟಲು ಮುಂದಾಗ ಮನೆಯ ಹಿಂ‘ಾಗವಿದ್ದ ವಿದ್ಯುತ್ ಕಂಬವನ್ನು ಸ್ಥಳಾಂತರಿಸಲು ಮನವಿ ಮಾಡಿದ್ದಾರೆ.
ಆದರೆ ಚೆಸ್ಕಾಂ ಇಲಾಖೆ ಕಂಬವನ್ನು ಸ್ಥಳಾಂತರಿಸಲು ನಿರ್ಲಕ್ಷ್ಯ ಮಾಡಿದ ಕಾರಣ ಮನೆಯ ಮಾಲಿಕರು ವಿದ್ಯುತ್ ಕಂಬವನ್ನು ಸೇರಿಸಿಕೊಂಡೆ ಮನೆಯನ್ನು ಕಟ್ಟಿದ್ದು ಇದಾದ ನಂತರ ಕಮಲಮ್ಮ ಎಂಬುವರು ಖರೀದಿ ಮಾಡಿದ್ದಾರೆ. ಇದೀಗ ಕಮಲಮ್ಮನವರು ಬದುಕಿಗಾಗಿ ಪಟ್ಟಣದಲ್ಲಿ ವಾಸಿಸುತ್ತಿದ್ದು ಅವರ ಸಂಬಂದಿ ಕಲ್ಯಾಣಿ ಎಂಬುವರು ಈ ಮನೆಯಲ್ಲಿ ಅಪಾಯದ ಅರಿವಿದ್ದರು ಸಹ ಬಡವರಾಗಿರುವುದರಿಂದ ಅನಿವಾರ್ಯವಾಗಿ ವಾಸವಿದ್ದಾರೆ. 11.ಕೆ.ವಿ ಸಾಮರ್ಥ್ಯದ ವಿದ್ಯುತ್ ತಂತಿ ಈ ಕಂಬದ ಮೂಲಕವೇ ಹಾದು ಹೋಗಿದ್ದು ಆದರೆ ಇಲ್ಲಿ ಮನೆಮಾಲಿಕರು ಬಡವರಾಗಿರುವ ಕಾರಣ ಚೆಸ್ಕಾಂ ಇಲಾಖೆ ಕಂಬವನ್ನು ಸ್ಥಳಾಂತರಿಸಲು ಮುಂದಾಗಿಲ್ಲ.
ಇದೇ ಮನೆಯಿಂದ ತುಸು ಮುಂದೆ ಇನ್ನೆರಡು ಮನೆಗಳಿದ್ದು ಮಂಜುಳಾ ಎಂಬುವರ ಮನೆಯ ತಾರಸಿ ಮೇಲಿಂದಲೆ ಕೈಗೆ ತಾಗುವ ಅಂತರದಲ್ಲಿ ವಿದ್ಯುತ್ ತಂತಿ ಹಾದುಹೋಗಿದ್ದು ಈ ಮನೆಯವರು ಸಹ ಮನೆಯ ಮೇಲೆ ಹೋಗಲು ಆತಂಕ ಎದುರಿಸಬೇಕಾಗಿದೆ. ಒಟ್ಟಿನಲ್ಲಿ ಈ ಬಡಾವಣೆಯಲ್ಲಿ ಅವೈಜ್ಞಾನಿಕವಾಗಿ ಹಾದು ಹೋಗಿರುವ ವಿದ್ಯುತ್ ತಂತಿ ಹಾಗೂ ಕಂಬಗಳಿಂದ ಜನರು ವಿನಾಕಾರಣ ಆತಂಕ ಎದುರಿಸಬೇಕಾಗಿದೆ.
ಹೇಳಿಕೆ: ಶೃತಿ ಇಂದ್ರೇಶ್, ಹಲಸುಲಿಗೆ ಗ್ರಾ.ಪಂ ಸದಸ್ಯರು: ಬಡವರೆ ಹೆಚ್ಚು ನೆಲೆಸಿರುವ ಈ ಬಡಾವಣೆಯಲ್ಲಿ ವಿದ್ಯುತ್ ಕಂಬವೊಂದು ಮನೆಯ ಮ‘್ಯದಿಂದಲೆ ಹಾದುಹೋಗಿರುವುದರಿಂದ ಅಪಾಯವನ್ನು ಆಹ್ವಾನಿಸುತ್ತಿದೆ. ಕಂಬವನ್ನು ತೆರವುಗೊಳಿಸುವಂತೆ ಹಲವು ಬಾರಿ ಚೆಸ್ಕಾಂ ಇಲಾಖೆಗೆ ಮನವಿ ಮಾಡಿದರು ಸಹ ಯಾವುದೆ ಪ್ರಯೋಜನವಾಗಿಲ್ಲ. ಕೂಡಲೆ ಚೆಸ್ಕಾಂ ಇಲಾಖೆ ಕಂಬವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು