ಬೆಳಗೋಡು ಕರವೇ ಘಟಕದ ಮನವಿಗೆ ಸ್ಪಂದಿಸಿದ ಕರ್ನಾಟಕ ಬ್ಯಾಂಕ್
ನೂತನ ಎಟಿಎಂ ಕೇಂದ್ರ ತೆರೆಯಲು ಸಮ್ಮತಿ
ಸಕಲೇಶಪುರ : ತಾಲೂಕಿನ ಹೋಬಳಿ ಕೇಂದ್ರ ಬೆಳಗೋಡಿಗೆ ಕರ್ನಾಟಕ ಬ್ಯಾಂಕ್ ಲಿ ನೂತನ ಏಟಿಎಂ ಕೇಂದ್ರ ತೆರೆಯಲು ಮುಂದಾಗಿದೆ.
ಬೆಳಗೋಡು ಹೋಬಳಿ ಕೇಂದ್ರವಾಗಿದ್ದರು ಹಲವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಈ ಭಾಗದಲ್ಲಿ ಕೂಲಿ ಕಾರ್ಮಿಕರು, ಬೆಳೆಗಾರರು ಹೆಚ್ಚಿನ ಸಂಖ್ಯೆಯಲಿದ್ದಾರೆ. ಬೆಳಗೋಡು ಹೋಬಳಿ ಕೇಂದ್ರದಲ್ಲಿ ಕರ್ನಾಟಕ ಬ್ಯಾಂಕ್ ಏಕೈಕ ಬ್ಯಾಂಕ್ ಇದ್ದು ಹಲವಾರು ವರ್ಷಗಳಿಂದ ಹೋಬಳಿ ವ್ಯಾಪ್ತಿಯ ಜನರು ಬಹುಪಾಲು ಈ ಬ್ಯಾಂಕ್ ನಲ್ಲಿ ತಮ್ಮಉಳಿತಯ ಸಾಲ ಸೇರಿದಂತೆ ಬ್ಯಾಂಕಿನಲ್ಲಿರುವ ಇನ್ನಿತರ ಸೇವೆಗಳನ್ನು ಪಡೆದುಕೊಳ್ಳುತ್ತಿದ್ದಾರೆ.ಆದರೆ ತ್ವರಿತವಾಗಿ ಹಣ ಪಡೆಯಲು ಅನಾನುಕೂಲವಾಗುತ್ತಿತ್ತು. ಬ್ಯಾಂಕಿನ ಕೆಲಸದ ಅವಧಿಯಲ್ಲಿ ಮಾತ್ರ ಬ್ಯಾಂಕಿಗೆ ಸಂಬಂಧಪಟ್ಟಂತಹ ವ್ಯವಹಾರ ನೆಡೆಸಲು ಸಾಧ್ಯವಾಗುತ್ತಿತ್ತು
ಈ ಕುರಿತಂತೆ ಕಳೆದ ವರ್ಷ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಕ್ಷಣಾ ವೇದಿಕೆ ಬೆಳಗೋಡು ಹೋಬಳಿ ಘಟಕ ಹೋಬಳಿ ಕೇಂದ್ರದಲ್ಲಿನ ಸಮಸ್ಯೆಗಳ ಬಗ್ಗೆ ಸರ್ಕಾರ ಹಾಗೂ ಬ್ಯಾಂಕಿನ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರು. ಹೋಬಳಿ ಅಧ್ಯಕ್ಷ ರವಿ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಬ್ಯಾಂಕಿನ ವ್ಯವಸ್ಥಾಪಕರನ್ನು ಭೇಟಿ ಮಾಡಿ ಎಟಿಎಂ ಕೇಂದ್ರ ತೆರೆಯುವ ಕುರಿತಂತೆ ಮನವಿ ಸಲ್ಲಿಸಿದ್ದರು.
ಕರ್ನಾಟಕ ರಕ್ಷಣಾ ವೇದಿಕೆಯ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಕರ್ನಾಟಕ ಬ್ಯಾಂಕ್ ನೂತನ ಎಟಿಎಂ ಕೇಂದ್ರ ತೆರೆಯಲು ಸಿದ್ಧತೆ ನಡೆದಿದೆ. ಇನ್ನೆರಡು ದಿನದಲ್ಲಿ ಎಟಿಎಂ ಕೇಂದ್ರ ಸಾರ್ವಜನಿಕರಿಗೆ ಲಭ್ಯವಾಗಲಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರವೇ ಬೆಳಗೋಡು ಹೋಬಳಿ ಘಟಕ ತಿಳಿಸಿದೆ.
ಈ ವೇಳೆ ಕರವೇ ಬೆಳಗೋಡು ಹೋಬಳಿ ಗೌರವಧ್ಯಕ್ಷ ರಾಜು,ಪ್ರಧಾನ ಕಾರ್ಯದರ್ಶಿ ಉಮೇಶ್,ಸಂಚಾಲಕರಾದ ಚಂದ್ರಶೇಖರ್, ಕೃಷ್ಣಪ್ಪ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.