Sunday, November 24, 2024
Homeಸುದ್ದಿಗಳುಸಕಲೇಶಪುರಸ್ಟೋನ್ ವ್ಯಾಲಿ ರೆಸಾರ್ಟ್‌ ಮಾಲಿಕರಿಗೆ ಹೈಕೋರ್ಟ್ ನಲ್ಲಿ ಕಾನೂನ್ಮಾತಕ ಜಯ: ರೆಸಾರ್ಟ್‌ ನಡೆಸಲು ಅವಕಾಶ

ಸ್ಟೋನ್ ವ್ಯಾಲಿ ರೆಸಾರ್ಟ್‌ ಮಾಲಿಕರಿಗೆ ಹೈಕೋರ್ಟ್ ನಲ್ಲಿ ಕಾನೂನ್ಮಾತಕ ಜಯ: ರೆಸಾರ್ಟ್‌ ನಡೆಸಲು ಅವಕಾಶ

ಬ್ರೇಕಿಂಗ್ ನ್ಯೂಸ್: 

ಸ್ಟೋನ್ ವ್ಯಾಲಿ ರೆಸಾರ್ಟ್‌ ಮಾಲಿಕರಿಗೆ ಹೈಕೋರ್ಟ್ ನಲ್ಲಿ ಕಾನೂನ್ಮಾತಕ ಜಯ: ರೆಸಾರ್ಟ್‌ ನಡೆಸಲು ಅವಕಾಶ

ಸಕಲೇಶಪುರ: ಸೆಕ್ಷನ್ 4 ಹೆಸರಿನಲ್ಲಿ ಇತ್ತೀಚೆಗಷ್ಟೆ ಬಂದ್ ಮಾಡಲಾಗಿದ್ದ ಸ್ಟೋನ್ ವ್ಯಾಲಿ ರೆಸಾರ್ಟ್‌ ಮಾಲಿಕರಿಗೆ ರೆಸಾರ್ಟ್‌ ನಡೆಸಲು ರಾಜ್ಯ ಉಚ್ಚ ನ್ಯಾಯಾಲಯ ಮಾಲಿಕರ ಪರ ತೀರ್ಪು ನೀಡಿದೆ.

   ಅರಣ್ಯ ಭೂಮಿಯಲ್ಲಿ ರೆಸಾರ್ಟ್‌ ನಿರ್ಮಾಣ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಇತ್ತೀಚೆಗಷ್ಟೇ ಸ್ಟೋನ್ ವ್ಯಾಲಿ ರೆಸಾರ್ಟ್ ಬಂದ್ ಮಾಡಿ ರೆಸಾರ್ಟ್‌ ಗೆ ಬೀಗ ಜಡಿದಿದ್ದರು. ಈ ಹಿನ್ನೆಲೆಯಲ್ಲಿ ರೆಸಾರ್ಟ್‌ ಮಾಲಿಕ ಸುಭಾಷ್ ರೆಸಾರ್ಟ್‌ ಬಂದ್ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು.ಕೂಲಂಕುಶವಾಗಿ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಧೀಶರು ಅರಣ್ಯ ಇಲಾಖೆಗೆ ರೆಸಾರ್ಟ್ ಬಂದ್ ತೆರವುಗೊಳಿಸಲು ಆದೇಶಿಸಿದ್ದಾರೆ ಅಲ್ಲದೆ ರೆಸಾರ್ಟ್ ಕುರಿತು ಯಾವುದೆ ರೀತಿಯ ದೂರುಗಳು ಇದ್ದಲ್ಲಿ ಇತರೆ ಇಲಾಖೆಗಳು ಅಡ್ವೋಕೇಟ್ ಜನರಲ್ ಸಮ್ಮುಖಕ್ಕೆ ತರಬೇಕೆಂದು ಆದೇಶಿಸಿದ್ದಾರೆ‌.

RELATED ARTICLES
- Advertisment -spot_img

Most Popular