Sunday, November 24, 2024
Homeಕ್ರೈಮ್ಅಕ್ರಮ ಗೋ ಸಾಗಾಟ ಪತ್ತೆ: 18 ಗೋವುಗಳು ವಶಕ್ಕೆ: ಬಜರಂಗದಳ ಹಾಗೂ ವಿಶ್ವ ಹಿಂದು ಪರಿಷತ್...

ಅಕ್ರಮ ಗೋ ಸಾಗಾಟ ಪತ್ತೆ: 18 ಗೋವುಗಳು ವಶಕ್ಕೆ: ಬಜರಂಗದಳ ಹಾಗೂ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರ ಆಕ್ರೋಶ.

ಅಕ್ರಮ ಗೋ ಸಾಗಾಟ ಪತ್ತೆ: 18 ಗೋವುಗಳು ವಶಕ್ಕೆ: ಬಜರಂಗದಳ ಹಾಗೂ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರ ಆಕ್ರೋಶ.

 ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು.

ಸಕಲೇಶಪುರ : ಎರಡು ಪಿಕಪ್ ವಾಹನದಲ್ಲಿ ಅಮಾನವೀಯವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಸಕಲೇಶಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಪತ್ತೆಹಚ್ಚಿದ್ದು, 18 ಗೋವುಗಳನ್ನು ರಕ್ಷಿಸಲಾಗಿದೆ.

ಗುರುವಾರ ಬೆಳ್ಳಂಬೆಳಗೆ ದೇವಾಲದಕೆರೆ ಮಾರ್ಗವಾಗಿ ಕೊಡ್ಲಿಪೇಟೆ ಕಡೆಯ ಕಸಾಯಿಖಾನೆಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಪಿಕಪ್ ವಾಹನವನ್ನು ಹಿಂಬಾಲಿಸಿದ್ದರು. ಈ ಸಂದರ್ಭ ವಾಹನ ನಿಲ್ಲಿಸದೆ ಪರಾರಿಯಾದ ಹಿನ್ನೆಲೆಯಲ್ಲಿ ಬಜರಂಗದಳದ ಕಾರ್ಯಕರ್ತರು 112 ಪೊಲೀಸ್ ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಗಿತ್ತು. ಕಾರ್ಯಕರ್ತರ ಖಚಿತ ಮಾಹಿತಿ ಮೇರೆಗೆ ಪೊಲೀಸರು

ಬೆಳಗ್ಗಿನ ಜಾವಾ 3 ಗಂಟೆ ಸಮಯದಲ್ಲಿ ಅಕ್ರಮವಾಗಿ ದೇವಾಲಕೆರೆ ಗ್ರಾಮದಿಂದ ಕೊಡ್ಲಿಪೇಟೆ, ಮಲ್ಲಪಟ್ಟಣಕ್ಕೆ ಯಾವದೇ ಭಯವಿಲ್ಲದೆ ಕ್ರೂರವಾಗಿ ಒಂದು ವಾಹನದಲ್ಲಿ 10 ಮತ್ತು ಮತ್ತೊಂದು ವಾಹನದಲ್ಲಿ 8 ಗೋವುಗಳನ್ನ ಅಕ್ರಮವಾಗಿ ತುಂಬಿ ಸಾಗಾಣಿಕೆ ಮಾಡುತ್ತಿದ್ದರು.ಈ ವೇಳೆ ಪೊಲೀಸರು ತಡೆಗಟ್ಟಲು ಮುಂದಾದಾಗ ಎರಡು ವಾಹನದ ಚಾಲಕರು ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

 

ಅಮಾನವೀಯ ಸಾಗಾಟ:ಮಡಿಕೇರಿ ಹಾಗೂ ಹಾಸನ ನೋಂದಾಯಿತ ಸರಕು ಸಾಗಣೆಯ ವಾಹನದಲ್ಲಿ ದನ, ಕರುಗಳು ಸೇರಿ ಒಟ್ಟು 18 ಗೋವುಗಳನ್ನು ಕಸಾಯಿ ಖಾನೆಗೆ ಅಕ್ರಮವಾಗಿ ಸಾಗಿಸಲಾಗಿತ್ತು. ದನ ಹಾಗೂ ಕರುಗಳ ಕೈ ಕಾಲುಗಳನ್ನು ಅಗ್ಗದಿಂದ ಕಟ್ಟಿ ಅಮಾನವೀಯವಾಗಿ ಒಂದರ ಮೇಲೊಂದು ಹಾಕಿ ಸಕಲೇಶಪುರ ಭಾಗದಿಂದ ಕೊಡ್ಲಿಪೇಟೆ ಕಡೆಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ಆರೋಪಿಗಳ ಬಂಧನಕ್ಕೆ ಆಗ್ರಹ:

ಸಕಲೇಶಪುರ ಅಕ್ರಮ ಗೋವುಗಳ ಸಾಗಾಣಿಕೆ, ಗೋಹತ್ಯೆ, ಗೋಮಾಂಸ ಮಾರಾಟದ ಕೇಂದ್ರವಾಗುತ್ತಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಗೋಹಂತಕರ ಮೇಲೆ ಹದ್ದಿನ ಕಣ್ಣಿಟ್ಟು ಚೆಕ್-ಪೋಸ್ಟ್ ಹಾಕಿ ವಾಹನ ತಪಾಸಣೆ ಮಾಡಿ ಅಕ್ರಮ ತಡೆಗಟ್ಟಬೇಕು.ಹಳ್ಳಿಗಳಿಂದ ಗೋವುಗಳನ್ನು ಕದ್ದು ಅಕ್ರಮವಾಗಿ ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಬಜರಂಗದಳ ಹಾಗೂ ವಿಎಚ್‌ಪಿ ಕಾರ್ಯಕರ್ತರು ಆಗ್ರಹಿಸಿದರು.

RELATED ARTICLES
- Advertisment -spot_img

Most Popular