ಎಇಇ ಮೋಹನ್ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ ತಾಲೂಕು ಆಡಳಿತ.
ಸಕಲೇಶಪುರ : ತಾಲೂಕು ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಮೋಹನ್ ಕುಮಾರ್ ನಿಧನಕ್ಕೆ ತಾಲೂಕು ಆಡಳಿತದಿಂದ ಮೌನಚರಣೆ ನೆಡೆಸುವ ಮೂಲಕ ಸಂತಾಪ ಸೂಚಿಸಲಾಯಿತು.
ಮಂಗಳವಾರ ಮಳೆ ಸಂಭಂದ ಶಾಸಕರ ಅಧ್ಯಕ್ಷತೆಯಲ್ಲಿ ಕರೆದಿದ್ದ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆಗೂ ಮುನ್ನ ನೆನ್ನೆ ಚನ್ನರಾಯಪಟ್ಟಣ ಸಮೀಪದ ಉದಯಪುರದಲ್ಲಿ ಕಿಯಾ ಕಾರ್ ಹಾಗೂ ಲಾರಿ ನಡುವಿನ ಮುಖಮುಖಿ ಅಪಘಾತದಲ್ಲಿ ಸಕಲೇಶಪುರ ತಾಲೂಕು ಲೋಕೋಪಯೋಗಿ ಇಲಾಖೆಯ ಎಇಇ ಮೋಹನ್ ಕುಮಾರ್ ತೀವ್ರವಾಗಿ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಮೃತ ಪಟ್ಟಿದ್ದರು. ಸರಳ ಸಜ್ಜನಿಕೆಯ ಅಧಿಕಾರಿಯಾಗಿದ್ದ ಮೋಹನ್ ಅವರ ನಿಧನಕ್ಕೆ ಶಾಸಕ ಸಿಮೆಂಟ್ ಮಂಜು ಕಂಬನಿ ಮಿಡಿದ್ದಾರೆ.
ಈ ವೇಳೆ ಸಕಲೇಶಪುರ ತಹಸೀಲ್ದಾರ್ ಮೇಘನ, ಆಲೂರು ತಾಲೂಕು ದಂಡಧಿಕಾರಿ ಸುಂದ್ರೇಶ್, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಕೃಷ್ಣ, ಆಲೂರು ಇಓ ನಾರಾಯಣಸ್ವಾಮಿ, ಪುರಸಭಾ ಮುಖ್ಯಧಿಕಾರಿ ಜಯಣ್ಣ, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಆದಿತ್ಯ, ಹರೀಶ್ ಸೇರಿದಂತೆ ಹಲವಾರು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.