Sunday, November 24, 2024
Homeಸುದ್ದಿಗಳುಜಲಪಾತ ವೀಕ್ಷಣೆಗೆ ಬಂದು ನೀರಿನಲ್ಲಿ ಸಿಲುಕಿದ್ದ ಪ್ರವಾಸಿಗನ ರಕ್ಷಣೆ

ಜಲಪಾತ ವೀಕ್ಷಣೆಗೆ ಬಂದು ನೀರಿನಲ್ಲಿ ಸಿಲುಕಿದ್ದ ಪ್ರವಾಸಿಗನ ರಕ್ಷಣೆ

ಮಲೆನಾಡು ಭಾಗದಲ್ಲಿ ಮುಂದುವರಿದ ಮಳೆ. ಭಾರೀ ಮಳೆಯಿಂದ ಮೂಕನಮನೆ ಜಲಪಾತದಲ್ಲಿ ಏಕಾಏಕಿ ಹೆಚ್ಚಾದ ನೀರಿನ ಹರಿವು. ಜಲಪಾತ ವೀಕ್ಷಣೆಗೆ ಬಂದು ನೀರಿನಲ್ಲಿ ಸಿಲುಕಿದ್ದ ಪ್ರವಾಸಿಗನ ರಕ್ಷಣೆ.

ಸಕಲೇಶಪುರ: ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದ್ದು, ಭಾರೀ ಮಳೆಯಿಂದ ಮೂಕನಮನೆ ಜಲಪಾತದಲ್ಲಿ ಏಕಾಏಕಿ ನೀರಿನ ಹರಿವು ಹೆಚ್ಚಾಗಿದ್ದು, ಜಲಪಾತ ವೀಕ್ಷಣೆಗೆ ಬಂದು ನೀರಿನಲ್ಲಿ ಸಿಲುಕಿದ್ದ ಪ್ರವಾಸಿಗನನ್ನು ರಕ್ಷಣೆ ಮಾಡಲಾಗಿದೆ. ನಿನ್ನೆ ಸಂಜೆ ಬೆಂಗಳೂರಿನಿಂದ ಸಕಲೇಶಪುರ ತಾಲ್ಲೂಕಿನ ಮೂಕನಮನೆ ಜಲಪಾತ ವೀಕ್ಷಿಸಲು ಬೆಂಗಳೂರಿನಿಂದ ಸಂಜಯ್ ಹಾಗೂ ಇತರ ಮೂವರು ಗೆಳೆಯರು ಬಂದಿದ್ದರು..

ಈ ಸಂದರ್ಭದಲ್ಲಿ ಭಾರೀ ಮಳೆಯಿಂದ ಜಲಪಾತದಲ್ಲಿ ನೀರಿನ ಹರಿವಿನ ಪ್ರಮಾಣದ ಏರಿಕೆಯಾಗಿದೆ. ಈ ವೇಳೆ ಜಲಪಾತಕ್ಕೆ ಇಳಿದಿದ್ದ ಸಂಜಯ್ ಸುತ್ತಲೂ ನೀರು ಆವರಿಸಿಕೊಂಡಿದ್ದು ಸಂಜಯ್ ಪರದಾಡಿದ್ದಾನೆ. ನಂತರ ಸಂಜಯ್ ಬಂಡೆಯ ಮೇಲೆ ಕುಳಿತಿದ್ದು, ಈ ವೇಳೆ ಸ್ಥಳದಲ್ಲಿದ್ದ ಪ್ರವಾಸಿ ಪೋಲಿಸರಾದ ಅಶ್ರಫ್, ವಡಿವೇಳ್  ಹಾಗೂ ಸ್ಥಳದಲ್ಲಿದ್ದ  ಸ್ನೇಹಿತರು,ಸ್ಥಳೀಯರು, ಹಾಗೂ ಇತರ  ಪ್ರವಾಸಿಗರ ಸಹಾಯದಿಂದ ನೀರಿನಲ್ಲಿ ಸಿಲುಕಿದ್ದ ಸಂಜಯ್‌ಗೆ ರಕ್ಷಣಾ ಕವಚ ನೀಡಿ ಹಗ್ಗಕಟ್ಟಿ ಹೊರಗೆ ಎಳೆದು ತಂದಿದ್ದಾರೆ. ಕೊಂಚ ಯಡವಟ್ಟಾದರೂ‌ ಪ್ರವಾಸಿಗ ಸಂಜಯ್ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರು. ಗೆಳೆಯರ ಸಮಯ ಪ್ರಜ್ಞೆ ಹಾಗೂ ಸ್ಥಳದಲ್ಲೇ ಇದ್ದ ಇತರೆ ಪ್ರವಾಸಿಗರ ನೆರವಿನೊಂದಿಗೆ ಪ್ರವಾಸಿಗನ ರಕ್ಷಣೆ ಮಾಡಿದ್ದು ಅನಾಹುತವೊಂದು ತಪ್ಪಿದಂತಾಗಿದೆ.

RELATED ARTICLES
- Advertisment -spot_img

Most Popular