Saturday, November 23, 2024
Homeಸುದ್ದಿಗಳುಸಕಲೇಶಪುರತಾಲೂಕು ಬ್ರಾಹ್ಮಣ ಸಮಾಜದ ವತಿಯಿಂದ ಶಾಸಕ ಸಿಮೆಂಟ್ ಮಂಜುರವರಿಗೆ ಗೌರವ ಸಮರ್ಪಣೆ

ತಾಲೂಕು ಬ್ರಾಹ್ಮಣ ಸಮಾಜದ ವತಿಯಿಂದ ಶಾಸಕ ಸಿಮೆಂಟ್ ಮಂಜುರವರಿಗೆ ಗೌರವ ಸಮರ್ಪಣೆ

ತಾಲೂಕು ಬ್ರಾಹ್ಮಣ ಸಮಾಜದ ವತಿಯಿಂದ ಶಾಸಕ ಸಿಮೆಂಟ್ ಮಂಜುರವರಿಗೆ ಗೌರವ ಸಮರ್ಪಣೆ
ಸಕಲೇಶಪುರ: ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿದ್ದು ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

 

ಸಕಲೇಶಪುರ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಸಿಮೆಂಟ್ ಮಂಜು ಹಿನ್ನಲೆಯಲ್ಲಿ ತಾಲೂಕು ಬ್ರಾಹ್ಮಣ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿ ಬ್ರಾಹ್ಮಣರೆಂದರೆ ಬಿಜೆಪಿ ಬಿಜೆಪಿಯೆಂದರೆ ಬ್ರಾಹ್ಮಣರಾಗಿದ್ದು ಕ್ಷೇತ್ರದ ಬ್ರಾಹ್ಮಣರು ಹೆಚ್ಚಿನ ಸಂಖ್ಯೆಯಲ್ಲಿ ನನ್ನ ಪರ ಮತದಾನ ಮಾಡಿದ್ದು ಈ ಹಿನ್ನೆಲೆಯಲ್ಲಿ ನಾನು ನಿಮಗೆಲ್ಲಾ ಅಭಿನಂದನೆ ಸಲ್ಲಿಸುತ್ತೇನೆ.ನಾನು ಇದೇ ಊರಿನಲ್ಲಿ ಬೆಳೆದಿರುವುದರಿಂದ ಬಹುತೇಕ ಎಲ್ಲಾರ ಪರಿಚಯವಿದೆ. ಬ್ರಾಹ್ಮಣ ಸಮಾಜದ ಕಟ್ಟಡ ನಿರ್ಮಾಣ ಕಾರ್ಯ ಹಲವು ವರ್ಷಗಳಿಂದ ಪ್ರಗತಿಯಲ್ಲಿದ್ದು ಮುಂದಿನ ದಿನಗಳಲ್ಲಿ ಸಾಧ್ಯವಾದಷ್ಟು ಶಾಸಕರ ಅನುದಾನವನ್ನು ಸಮುದಾಯ ಭವನದ ನಿರ್ಮಾಣಕ್ಕೆ ನೀಡಲು ಮುಂದಾಗುತ್ತೇನೆ. ಪಟ್ಟಣದ ಕೆಲವು ಇಲಾಖೆಗಳಲ್ಲಿ ಕಳೆದ 15 ವರ್ಷಗಳಿಂದ ಭ್ರಷ್ಟಚಾರ ಬೇರೂರಿದ್ದು ಮುಂದಿನ ದಿನಗಳಲ್ಲಿ ಭ್ರಷ್ಟಚಾರ ರಹಿತ ಆಡಳಿತ ನಡೆಸಲು ಪ್ರಾಮಾಣಿಕವಾಗಿ ಮುಂದಾಗುತ್ತೇನೆ ಹಾಗೂ ಕ್ರಾರ್ಡ್ ಆಸ್ಪತ್ರೆಯಲ್ಲಿ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗುತ್ತೇನೆ ಎಂದರು.

  • ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪುರಸ‘ಾ ಸದಸ್ಯೆ ಜ್ಯೋತಿ ರಾಜ್‌ಕುಮಾರ್ ಮಾತನಾಡಿ ಬ್ರಾಹ್ಮಣರೇ ಅತಿ ಹೆಚ್ಚು ಸಂಖ್ಯೆಯಲ್ಲಿರುವ ನನ್ನ ವಾರ್ಡ್‌ನಲ್ಲಿ ಹಲವಾರು ಬ್ರಾಹ್ಮಣರು ನನ್ನ ಪರ ಮತದಾನ ಮಾಡಿದ್ದಾರೆ. ಈಗಾಗಲೆ ನನ್ನ ವಾರ್ಡ್‌ನಲ್ಲಿ ನಿರಂತವಾಗಿ ಹಲವು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ನಾನು ಮತ್ತಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಲು ಮುಂದಾಗುತ್ತೇನೆ ಎಂದರು.
    ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಶಿವಪ್ರಕಾಶ್ ಧನಾವತ್ ಮಾತನಾಡಿ ತಾಲೂಕು ಬ್ರಾಹ್ಮಣ ಸಮಾಜಕ್ಕೆ ಹಲವು ವರ್ಷಗಳ ಇತಿಹಾಸವಿದೆ. ಬ್ರಾಹ್ಮಣ ಸಮಾಜದ ಕಟ್ಟಡದ ಕಾಮಗಾರಿ ಕೆಲಸ ಹಲವು ಕಾರಣಗಳಿಂದ ಕುಂಠಿತಗೊಂಡಿದೆ. ಈ ನಿಟ್ಟಿನಲ್ಲಿ ಶಾಸಕರು ಮುಂದಿನ ದಿನಗಳಲ್ಲಿ ಸೂಕ್ತ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.
    ಈ ಸಂಧರ್ಭದಲ್ಲಿ ಶಾಸಕ ಸಿಮೆಂಟ್ ಮಂಜುನಾಥ್, ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಮಾಜದ ಕೊಡುಗೆ ದಾನಿಗಳಾದ ಕೋಗರವಳ್ಳಿ ಶ್ಯಾಮರಾವ್ ,ಕಾಫಿ ಬೆಳೆಗಾರ ಮಂಜುನಾಥ್‌ರವರನ್ನು ಸನ್ಮಾನಿಸಲಾಯಿತು. ಮಧ್ಯಾಹ್ನದ ನಂತರ ಸಮಾಜದ ಬಂಧುಗಳಿಗಾಗಿ ವಿವಿ‘ ಆಟೋಟ ಕಾರ್ಯಕ್ರಮಗಳು ನಡೆಯಿತು.
    ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಎನ್ ಶಿವಶಂಕರ್ ಸ್ವಾಗತ ಭಾಷಣ ಮಾಡಿದರೆ, ಸಮಾಜದ ಮುಖಂಡ ಕೃಷ್ಣಮೂರ್ತಿ ಖಂಡಿಗೆ ಪ್ರಾಸ್ತಾವಿಕ ಭಾಷಣ ಮಾಡಿದರು. ವಕೀಲ ಆರ್.ಎನ್ ಕೃಷ್ಣಮೂರ್ತಿ ನಿರೂಪಣೆ ಮಾಡಿದರು.
    ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ರಘೋತ್ತಮ, ಮಾಜಿ ಕಾರ್ಯದರ್ಶಿ ವೆಂಕಟೇಶ್, ವಿಪ್ರ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ, ಸಮಾಜದ ಮುಖಂಡರುಗಳಾದ ಮೈಲಾರ್, ರಾಜೀವ್, ಸೋಮೇಶ್, ಕಬ್ಬಿನಗದ್ದೆ ಅನಂತ, ಶ್ರೀಕಾಂತ್, ಸೂರ್ಯನಾರಾಯಣ, ಬಾಲಣ್ಣ , ಕುಮಾರ್, ಬಿಜೆಪಿ ಮುಖಂಡರುಗಳಾದ ರಾಜ್‌ಕುಮಾರ್, ರಘು ಗೌಡ ಹಾಜರಿದ್ದರು.
RELATED ARTICLES
- Advertisment -spot_img

Most Popular