Saturday, November 23, 2024
Homeಸುದ್ದಿಗಳುಸಕಲೇಶಪುರಡೀಮ್ಡ್ ಅರಣ್ಯ ಪ್ರದೇಶಗಳಲ್ಲಿ ಕುಡಿಯುವ ನೀರಿನ ಯೋಜನೆಗೆ ಅವಕಾಶವಿದೆ ಎಂದು ಅರಣ್ಯ ಹಾಗೂ ಜೀವಶಾಸ್ತ್ರ ಸಚಿವ...

ಡೀಮ್ಡ್ ಅರಣ್ಯ ಪ್ರದೇಶಗಳಲ್ಲಿ ಕುಡಿಯುವ ನೀರಿನ ಯೋಜನೆಗೆ ಅವಕಾಶವಿದೆ ಎಂದು ಅರಣ್ಯ ಹಾಗೂ ಜೀವಶಾಸ್ತ್ರ ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು: ಡೀಮ್ಡ್ ಅರಣ್ಯ ಪ್ರದೇಶಗಳಲ್ಲಿ ಕುಡಿಯುವ ನೀರಿನ ಯೋಜನೆಗೆ ಅವಕಾಶವಿದೆ ಎಂದು ಅರಣ್ಯ ಹಾಗೂ ಜೀವಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಸಕಲೇಶಪುರ ಶಾಸಕ‌ *ಸಿಮೆಂಟ್ ಮಂಜುನಾಥ್* ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ಯಾವುದೇ ಸಮಸ್ಯೆ ಇಲ್ಲದೆ ಅವಕಾಶ ನೀಡಲಾಗುವುದು. ಈ ಸಂಬಂದ ಸರ್ವೆ‌ ನಡೆಸಲಾಗುವುದು.‌ ಅಲ್ಲದೆ ಮನವಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಎತ್ತಿನಹೊಳೆ ಯೋಜನೆ ಮೂಲಕ 8-10 ಜಿಲ್ಲೆಗಳಿಗೆ ಸಕಲೇಶಪುರ ತಾಲೂಕಿನಿಂದ ನೀರು ಕೊಡುತ್ತಿದ್ದರೂ ಸಕಲೇಶಪುರ ಪಟ್ಟಣಕ್ಕೆ ಮಾತ್ರ‌ ಕುಡಿಯುವ ನೀರು ಉಪಯೋಗಿಸಲಾಗುತಿದೆ. ಅಲ್ಲದೆ ಆಲೂರು- ಕಟ್ಟಾಯ ಹಾಗೂ ಸಕಲೇಶಪುರದಲ್ಲಿ ಜಲಾಶಯಗಳಿದ್ದರೂ ಕುಡಿಯುವ ನೀರಿನ ಸಮಸ್ಯೆ ಇದೆ. ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಇಲಾಖಾ ಸಿಬ್ಬಂದಿಯಿಂದ ನಿತ್ಯ ಕಿರುಕುಳವಿದೆ. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆ ಅತಿಯಾಗಿದೆ.
ಸುಮಾರು 80 ಟ್ಯಾಂಕ್ ಮಾಡಲು ಅನುಮತಿ ಇದ್ದರೂ ಅರಣ್ಯ ಇಲಾಖೆಯಿಂದ ಡೀಮ್ಡ್ ಹೆಸರಲ್ಲಿ ದಿನನಿತ್ಯ ತೊಂದರೆ‌ ನೀಡಲಾಗುತ್ತಿದೆ. ಜಲಜೀವನ್ ಯೋಜನೆಯಡಿ ನೀರಿನ ಟ್ಯಾಂಕ್ ಯೋಜನೆ ಮಾಡುತ್ತಿದ್ದರೂ , ಅಧಿಕಾರಿಗಳು FIR ಮಾಡುತ್ತಿದ್ದಾರೆ, ಅಲ್ಲದೆ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ನಿರ್ಮಾಣ ಮಾಡುತ್ತಿದ್ದರೂ ಅರಣ್ಯ ಇಲಾಖೆಯ ಕಿರುಕುಳ ತಪ್ಪಿಲ್ಲ ಎಂದು ಸರ್ಕಾರದ ಗಮನ‌ ಸೆಳೆದರು.

ಎತ್ತಿನ ಹೊಳೆ ಯೋಜನೆ ಮೂಲಕ ಸಕಲೇಶಪುರದಿಂದ ಇತರೆ ಜಿಲ್ಲೆಗಳಿಗೆ ನೀರು‌ ನೀಡುತ್ತಿದ್ದರೂ, ನೀರಿನ ಮೂಲ‌ಸೆಲೆಯ ಪ್ರದೇಶದಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ನಮಗೆ ಮೂಲ ಸೌಕರ್ಯ ನೀಡಿ ನೀರು ಬೇಕಾದಷ್ಟು ಪಡೆಯಿರಿ. ಅಲ್ಲಿನ ಜನರಿಗೆ ಪರಿಹಾರ ನೀಡಿ. ಕೆಲಸ‌ ನಡೆಯುತ್ತಿರುವ ಪ್ರದೇಶದಲ್ಲಿ ಮೂಲ ಸೌಕರ್ಯ ನೀಡಬೇಕಾದುದು ಸರ್ಕಾರದ ಕರ್ತವ್ಯ. ಈ ಬಗ್ಗೆ ಕೂಡಲೇ ಕ್ರಮ ವಹಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು.

ಶಾಶ್ವತ ಪರಿಹಾರ ನೀಡಿ
ತಾಲೂಕಿನಲ್ಲಿ ಆನೆ ಹಾವಳಿಯಿಂದ ಈಗಾಗಲೇ 75 ಜನರು ಮೃತಪಟ್ಟಿದ್ದಾರೆ. ಈ ಭಾಗದಲ್ಲಿ ಆನೆ ಸಮಸ್ಯೆಯಿಂದಾಗಿ ಮಕ್ಕಳು ಶಾಲೆಗೆ ಹೋಗಲು ಭಯಪಡುತ್ತಿದ್ದಾರೆ, ರೈತರು, ಕೃಷಿಕರು , ಸ್ಥಳೀಯರು ಆನೆ ಹಾವಳಿಯಿಂದ ತತ್ತರಿಸಿದ್ದಾರೆ. ಕಾಫಿ ತೋಟಗಳಲ್ಲಿ ಕೆಲಸಕ್ಕೆ ಕಾರ್ಮಿಕರು ಬರದೆ ಸಮಸ್ಯೆಯಾಗುತಿದೆ. ಆನೆ ಸಮಸ್ಯೆ ಸಂಬಂಧ ಬಜೆಟ್‌ನಲ್ಲಿ 120 ಕೋಟಿ 5 ಜಿಲ್ಲೆಗೆ ನೀಡಲಾಗಿದೆ. ಆದರೆ ಅತಿ ಹೆಚ್ಚು ಆನೆ ಸಮಸ್ಯೆಗೆ ಒಳಗಾಗಿರುವ ಸಕಲೇಶಪುರದಲ್ಲಿ *ಆನೆ ಕಾರಿಡಾರ್* ಸಮಸ್ಯೆ ಪರಿಹಾರಕ್ಕೆ 100 ಕೋಟಿ ಮೀಸಲಿಡ ಬೇಕು ಹಾಗೂ ಶಾಶ್ವತ ಪರಿಹಾರ ರೂಪಿಸಿ ಜನರ‌ ಜೀವ ಉಳಿಸುವ ಜವಾಬ್ದಾರಿ ಸರ್ಕಾರದ‌ ಮೇಲಿದೆ ಎಂದು ಗಮನ ಸೆಳೆದರು.

RELATED ARTICLES
- Advertisment -spot_img

Most Popular