ಉಪವಿಭಾಧಿಕಾರಿ ವಿರುದ್ದ ಸಿಡಿದೆದ್ದ ತಾಲೂಕು ವಕೀಲರ ಸಂಘ: ಎ.ಸಿ ಕೋರ್ಟ್ ಬಹಿಷ್ಕರಿಸಲು ವಕೀಲರ ಸಂಘ ತೀರ್ಮಾನ
ಸಕಲೇಶಪುರ: ವಕೀಲರಿಗೆ ಹಾಗೂ ಸಾರ್ವಜನಿಕರಿಗೆ ಯಾವುದೆ ಕೆಲಸ ಕಾರ್ಯಗಳು ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಆಗದ ಹಿನ್ನೆಲೆಯಲ್ಲಿ ಹಾಲಿ ಉಪವಿಭಾಗಾಧಿಕಾರಿಗಳು ವರ್ಗವಣೆಯಾಗುವವರೆಗೂ ಉಪವಿಭಾಗಾಧಿಕಾರಿಗಳ ನ್ಯಾಯಾಲಯವನ್ನು ತಾಲೂಕು ವಕೀಲರ ಸಂಘ ಬಹಿಷ್ಕರಿಸುವ ತೀರ್ಮಾನ ಕೈಗೊಂಡಿದೆ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಪ್ರದೀಪ್ ಹೇಳಿದರು.
ಎಸಿ ನ್ಯಾಯಾಲಯದಲ್ಲಿ ಯಾವುದೆ ಕೆಲಸಗಳೂ ಆಗುತ್ತಿಲ್ಲ, ಎಸಿರವರು ಪ್ರಕರಣದ ಕುರಿತು ಮಾಡಿರುವ ಆದೇಶ ಪ್ರತಿಯನ್ನು ವಕೀಲರು ಕೇಳಿದರೆ ಕೊಡುವುದಿಲ್ಲ ಅಲ್ಲದೆ ಎಸಿರವರು ಯಾವುದೆ ವಕೀಲರಿಗ ಗೌರವ ಕೊಡುವುದಿಲ್ಲ. ಇದೀಷ್ಟು ಸಾಲದಂತೆ ಕೆಲವು ಸಿಬ್ಬಂದಿಗಳು ಎಸಿ ಕಚೇರಿಯಲ್ಲಿ ಹಲವು ವರ್ಷಗಳಿಂದ ಠಿಕಾಣಿ ಹೂಡಿದ್ದು ಇದರಿಂದ ಎಸಿ ಕಚೇರಿ ಭ್ರಷ್ಟಚಾರದ ಗೂಡಾಗಿದೆ. ಎಸಿ ಕಚೇರಿಯಲ್ಲಿ ಕೆಲಸ ಮಾಡುವ ಬಹುತೇಕ ಸಿಬ್ಬಂದಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸುವುದಿಲ್ಲ , ಸಾರ್ವಜನಿಕರಿಗೆ ಹಾಗೂ ವಕೀಲರಿಗೆ ಗೌರವ ಕೊಡುವುದಿಲ್ಲ. ಈ ಹಿನ್ನೆಲೆಯಲ್ಲಿ ಹಾಲಿ ಉಪವಿಭಾಗಾಧಿಕಾರಿ ಸೇರಿದಂತೆ ಉಪವಿಭಾಗಾಧಿಕಾರಿ ಕಚೇರಿಯ ಎಲ್ಲಾ ಸಿಬ್ಬಂದಿಗಳು ವರ್ಗಾವಣೆಯಾಗುವವರೆಗೂ ಎಸಿ ನ್ಯಾಯಾಲಯದ ಯಾವುದೆ ಕಾರ್ಯಕಲಾಪದಲ್ಲಿ ವಕೀಲರು ಭಾಗಿಯಾಗದಿರಲು ತೀರ್ಮಾನಿಸಿದ್ದಾರೆ. ಸಾರ್ವಜನಿಕರಿಗೆ ಇದರಿಂದ ಕೆಲ ಸಮಯ ಅಡಚಣೆಯುಂಟಾಗಬಹುದು., ಆದರೆ ಸಾರ್ವಜನಿಕರ ಅನುಕೂಲಕ್ಕಾಗಿ ವಕೀಲರ ಸಂಘ ಈ ತೀರ್ಮಾನ ಕೈಗೊಂಡಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದರು.
ಈ ಸಂಧರ್ಭದಲ್ಲಿ ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ವಾಣಿ, ಹಿರಿಯ ವಕೀಲರಾದ ಆರ್.ಎನ್ ಕೃಷ್ಣಮೂರ್ತಿ, ಎಂ.ಪಿ ಹರೀಶ್ ಹಾಜರಿದ್ದರು.