Sunday, November 24, 2024
Homeಸುದ್ದಿಗಳುಸಕಲೇಶಪುರದ್ವೇಷ ಭಾಷಣ ಪ್ರಕರಣ: ಭಜರಂಗದಳ ರಘು ಮನೆಗೆ ಭೇಟಿ ನೀಡಿದ ಹಿಂದೂ ಮುಖಂಡ ಅರುಣ್ ಪುತ್ತಿಲ

ದ್ವೇಷ ಭಾಷಣ ಪ್ರಕರಣ: ಭಜರಂಗದಳ ರಘು ಮನೆಗೆ ಭೇಟಿ ನೀಡಿದ ಹಿಂದೂ ಮುಖಂಡ ಅರುಣ್ ಪುತ್ತಿಲ

ದ್ವೇಷ ಭಾಷಣ ಪ್ರಕರಣ: ಭಜರಂಗದಳ ರಘು ಮನೆಗೆ ಭೇಟಿ ನೀಡಿದ ಹಿಂದೂ ಮುಖಂಡ ಅರುಣ್ ಪುತ್ತಿಲ

ಸಕಲೇಶಪುರ: ದ್ವೇಷ ಭಾಷಣ ಪ್ರಕರಣದಲ್ಲಿ ಪೋಲಿಸರು‌‌‌ ಪ್ರಕರಣ ದಾಖಲಿಸಿಕೊಂಡ ಹಿನ್ನೆಲೆಯಲ್ಲಿ ತಲೆ ಮೆರೆಸಿಕೊಂಡಿರುವ ಭಜರಂಗದಳ ಮುಖಂಡ ರಘುರವರ ಮನೆಗೆ ಹಿಂದೂ ಮುಖಂಡ ಅರುಣ್ ಪುತ್ತಿಲ ಭೇಟಿ ನೀಡಿ ಅವರ ತಂದೆ ತಾಯಿಗೆ ಸಾಂತ್ವನ‌ ಹೇಳಿದರು.

   ಈ ಸಂಧರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗೋ ಹತ್ಯೆ ಮಾಡುವವರ ವಿರುದ್ದ ಕ್ರಮ ಕೈಗೊಳ್ಳುವ ಬದಲು ಸರ್ಕಾರ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪದ ಮೇಲೆ ಹಿಂದೂ ಕಾರ್ಯಕರ್ತರನ್ನು ಸರ್ಕಾರ ಪೋಲಿಸ್ ಇಲಾಖೆ ಬಳಸಿ ಇಲಾಖೆ ಬಳಸಿಕೊಂಡು ಹತ್ತಿಕ್ಕಲು ಮುಂದಾಗಿರುವುದು ಸರಿಯಲ್ಲ.ಪ್ರಚೋದನಕಾರಿ ಭಾಷಣ ಮಾಡಿದ್ದರೆ ಅವರ ವಿರುದ್ದ ದೂರು ದಾಖಲಿಸಿಕೊಳ್ಳಲಿ,ಅದನ್ನು ಬಿಟ್ಟು ರಾತ್ರೋರಾತ್ರಿ ಭಯೋತ್ಪಾದಕರನ್ನು ಹುಡುಕುವ ರೀತಿಯಲ್ಲಿ ರಘುರವರ ಮನೆಗೆ ನುಗ್ಗಿ ಅವರ ತಾಯಿಯನ್ನು ನಿಂದಿಸಿರುವುದು ಎಷ್ಟು ಸರಿ? ಸುಮಾರು 21 ವರ್ಷಗಳ ನಂತರ ಕ್ಷೇತ್ರದಲ್ಲಿ ಧರ್ಮ ರಕ್ಷಕ‌ ಪಕ್ಷದಿಂದ ಶಾಸಕರು ಆಯ್ಕೆಯಾಗಿರುವುದನ್ನು ಸಹಿಸದೆ ಅವರಿಗೆ ಕ್ಷೇತ್ರದಲ್ಲಿ ಕೆಟ್ಟ ಹೆಸರು ತರಲು ಈ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಸರ್ಕಾರ ಗೋಹತ್ಯೆ ನಿಷೇದ ಕಾನೂನನ್ನು ಹಿಂಪಡೆಯಲು ಮುಂದಾಗಿರುವುದರಿಂದ ಈ ರೀತಿಯ ಸಮಸ್ಯೆ ಉಂಟಾಗುತ್ತಿದೆ.ಸರ್ಕಾರ ಹಿಂದೂ ಕಾರ್ಯಕರ್ತರಿಗೆ ಕಿರುಕುಳ‌ ಕೊಡುವುದನ್ನು ಮುಂದುವರೆಸಿದಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಳುಹಿಸಲಾಗುತ್ತದೆ ಎಂದರು.

RELATED ARTICLES
- Advertisment -spot_img

Most Popular