Sunday, November 24, 2024
Homeಕ್ರೈಮ್ಮಾಸ್ತಿಗೌಡ@ಕೃಷ್ಣ ಮಟಾಶ್!ಯಾಚೇನಹಳ್ಳಿ ಚೇತು ಆಪ್ತನಾಗಿದ್ದ ರೌಡಿ ಶೀಟರ್‌ನನ್ನು ಅಟ್ಟಾಡಿಸಿ ಕೊಂದ ಟೀಂ

ಮಾಸ್ತಿಗೌಡ@ಕೃಷ್ಣ ಮಟಾಶ್!ಯಾಚೇನಹಳ್ಳಿ ಚೇತು ಆಪ್ತನಾಗಿದ್ದ ರೌಡಿ ಶೀಟರ್‌ನನ್ನು ಅಟ್ಟಾಡಿಸಿ ಕೊಂದ ಟೀಂ

ಮಾಸ್ತಿಗೌಡ@ಕೃಷ್ಣ ಮಟಾಶ್!ಯಾಚೇನಹಳ್ಳಿ ಚೇತು ಆಪ್ತನಾಗಿದ್ದ ರೌಡಿ ಶೀಟರ್‌ನನ್ನು ಅಟ್ಟಾಡಿಸಿ ಕೊಂದ ಟೀಂ

ಚನ್ನರಾಯಪಟ್ಟಣ: ತಾಲೂಕಿನ ಹೊನ್ನಮಾರನಹಳ್ಳಿಯ ನಟೋರಿಯಸ್ ರೌಡಿಶೀಟರ್ ಹಾಗೂ ಕಾನೂನು ಬಾ”ರ ಚಟುವಟಿಕೆ ಆರೋಪದಡಿ ಗಡಿಪಾರಾಗಿ ಸದ್ಯ ಕಲಬುರಗಿ ಜೈಲಿನಲ್ಲಿರುವ ಮತ್ತೊಬ್ಬ ರೌಡಿ ಶೀಟರ್ ಯಾಚೇನಹಳ್ಳಿ ಚೇತುವಿನ ಮಾಜಿ ಶಿಷ್ಯನಾಗಿದ್ದ ಮಾಸ್ತಿಗೌಡ ಅಲಿಯಾಸ್ ಕೃಷ್ಣ(30)ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಪಟ್ಟಣದ ಬಿಎಂ ರಸ್ತೆಯಲಿರುವ ಧನಲಕ್ಷ್ಮೀ ಚಿತ್ರಮಂದಿರದ ಮುಂಭಾಗ ಹಾಡುಹಗಲೇ ಸಾರ್ವಜನಿಕರನ್ನು ಬೆಚ್ಚಿ ಬೀಳಿಸುವ ಭಯಾನಕ ಕೃತ್ಯ ನಡೆದಿದೆ.

ಇನ್ನೋವಾ ಕಾರಿನಲ್ಲಿ ಬಂದ ನಾಲ್ಕೈದು ಯುವಕರು, ಕೃಷ್ಣನನ್ನು ಬೆನ್ನಟ್ಟಿದ್ದಾರೆ. ಆತ ಓಡಲು ಆರಂಭಿಸುತ್ತಿದ್ದಂತೆಯೇ ನಡುರಸ್ತೆಯಲ್ಲಿ ಕೃಷ್ಣನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ನಂತರ ದುಷ್ಕರ್ಮಿಗಳು ಕೊಲೆಗೈದಿದ್ದಾರೆ.

ತಲೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಮನಬಂದಂತೆ ಬಿದ್ದ ಏಟುಗಳಿಗೆ ಗಂಭೀರ ಗಾಯಗೊಂಡ ಮಾಸ್ತಿಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪಟ್ಟಣದಲ್ಲಿ ಆಗಾಗ್ಗೆ ರೌಡಿ ಶೀಟರ್‌ಗಳ ಹೊಡೆದಾಟ, ಬಡಿದಾಟ ಮರುಕಳಿಸುತ್ತಿರುವುದರಿಂದ ಚನ್ನರಾಯಪಟ್ಟಣ ಜನತೆ ಮತ್ತೊಮ್ಮೆ ಬೆಚ್ಚಿ ಬಿದ್ದಿದ್ದಾರೆ. ಸುದ್ದಿ ತಿಳಿಯುತ್ತಿದ್ದೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಚನ್ನರಾಯಪಟ್ಟಣ ಡಿವೈಎಸ್ಪಿ ರವಿ ಪ್ರಸಾದ್, ನಗರ ಠಾಣೆ ಇನ್‌ಸ್ಪೆಕ್ಟರ್ ಕೆ.ಎಂ. ವಸಂತ್, ಶ್ವಾನದಳ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಹಿನ್ನೆಲೆ ಬಲು ಭಯಾನಕ:

ಈ ಹಿಂದೆ ಕೊಲೆ ಸೇರಿದಂತೆ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಾಸ್ತಿಗೌಡ ಒಂದು ಕಾಲದಲ್ಲಿ ಕುಖ್ಯಾತ ರೌಡಿಶೀಟರ್ ಯಾಚೇನಹಳ್ಳಿ ಚೇತು ಶಿಷ್ಯನಾಗಿದ್ದ.

ನಂತರದಲ್ಲಿ ಸಣ್ಣಪುಟ್ಟ ಮನಸ್ತಾಪದಿಂದ ಗುರು-ಶಿಷ್ಯರ ನಡುವೆ ವೈಷಮ್ಯ ಮೂಡಿ, ಇಬ್ಬರೂ ಬೇರೆಯಾಗಿ  ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದರು.

ಈ ನಡುವೆ ಚನ್ನರಾಯಪಟ್ಟಣದವನೇ ಆದ ಮತ್ತೊಬ್ಬ ರೌಡಿಶೀಟರ್ ಬಾಂದು ಕಿರಣ್ ಎಂಬಾತನನ್ನು ಚೇತು ಅಪಹರಣ ಮಾಡಿ, 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ. ಅದಾದ ಬಳಿಕ ಮತ್ತೆ ಯಾಚೇನಹಳ್ಳಿ ಚೇತು ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದ.

ಇದಾದ ಬಳಿಕ ಬಾಂದು ಕಿರಣ್, ಮಾಸ್ತಿಗೌಡನ ಮೊರೆ ಹೋಗಿ, ಹೇಗಾದರೂ ಮಾಡಿ ಚೇತುನನ್ನು ಮುಗಿಸಬೇಕು ಎಂದು ಬಾಂದು ಕಿರಣ್ ಮತ್ತು ಮಾಸ್ತಿಗೌಡ ಅಂಡ್ ಗ್ಯಾಂಗ್ ಸ್ಕೆಚ್ ಹಾಕಿತ್ತು. ಒಂದು ದಿನ ಚನ್ನರಾಯಪಟ್ಟಣದ ಹೊರ ವಲಯದಲ್ಲಿ ಯಾಚೇನಹಳ್ಳಿಯಿಂದ ಬರುತ್ತಿದ್ದ ಚೇತು ಮೇಲೆ ಗ್ಯಾಂಗ್ ಫೈರಿಂಗ್ ಮಾಡಿತ್ತು. ಆದರೆ ಚೇತು ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಬಚಾವಾಗಿದ್ದ. ಆಗಿನಿಂದಲೂ ಇಬ್ಬರ ನಡುವೆ ಹಗೆತನ ಮುಂದುವರಿದೇ ಇತ್ತು. ನಂತರದಲ್ಲೂ ಚೇತು ಕೊಲೆ, ಕೊಲೆಯತ್ನ ಸುಲಿಗೆ, ಮೊದಲಾದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದರಿಂದ ಈತನನ್ನು ಇತ್ತೀಚೆಗೆ ಮತ್ತೊಂದು ವರ್ಷ ಗಡಿಪಾರು ಮಾಡಿ ದೂರದ ಕಲಬುರಗಿ ಜೈಲಿಗೆ ಕಳಿಸಲಾಗಿದೆ.

ಇದಕ್ಕೂ ಮುನ್ನ ಒಂದು ವರ್ಷದ ಹಿಂದೆ ನಟೋರಿಯಸ್ ರೌಡಿಶೀಟರ್ ಚೇತನ್ ಮೇಲೆ ಇಂದು ಕೊಲೆಯಾಗಿರುವ ಮಾಸ್ತಿಗೌಡ ಫೈರಿಂಗ್ ಮಾಡಿದ್ದ. ಇದೀಗ ತಂಡವೊಂದು ಸ್ಕೆಚ್ ಹಾಗಿ ಮಾಸ್ತಿಗೌಡನನ್ನೇ ಮುಗಿಸಿದೆ. ಈ ಮೂಲಕ ಚನ್ನರಾಯಪಟ್ಟಣದಲ್ಲಿ ಮತ್ತೊಮ್ಮೆ ರೌಡಿ ಪಟಾಲಂ ಮಚ್ಚುಲಾಂಗು ಝಳಪಿಸಿದ್ದು, ಜನರು ಸಹಜವಾಗಿಯೇ ಭಯಭೀತರಾಗಿದ್ದಾರೆ.

RELATED ARTICLES
- Advertisment -spot_img

Most Popular