Sunday, November 24, 2024
Homeಸುದ್ದಿಗಳುಸಕಲೇಶಪುರ*ಪತ್ರಿಕೋದ್ಯಮ ಮಾರ್ಗ ಎಷ್ಟು ನೇರವವೋ ಅಷ್ಟೇ ಇಕ್ಕಟ್ಟು.*

*ಪತ್ರಿಕೋದ್ಯಮ ಮಾರ್ಗ ಎಷ್ಟು ನೇರವವೋ ಅಷ್ಟೇ ಇಕ್ಕಟ್ಟು.*

*ಪತ್ರಿಕೋದ್ಯಮ ಮಾರ್ಗ ಎಷ್ಟು ನೇರವವೋ ಅಷ್ಟೇ ಇಕ್ಕಟ್ಟು.*

ಪತ್ರಿಕೋದ್ಯಮ ಎಂದರೆ, ದಿಟ್ಟ ಧ್ವನಿಯೊಂದಿಗೆ, ದಿಟ್ಟತನ, ನೇರವಂತಿಕೆ, ನಿರಂತರ ಸತ್ಯವನ್ನು
ಎಳೆಯುವ ರಥ. ಈ ರಥವನ್ನು ಎಳೆದುಕೊಂಡು ಜನರನ್ನು ತಲುಪುವುದೇ ಗಾಂಧಿ ಮಾರ್ಗ.

ಇಂದು ಪತ್ರಿಕೋದ್ಯಮವೆಂಬುದು ಕಾಲದ ಸ್ಥಿತ್ಯಂತರದಲ್ಲಿ ಹಲವು ಬದಲಾವಣೆಗಳನ್ನು ಕಂಡಿದೆ. ಪತ್ರಿಕೋದ್ಯಮದ ರೀತಿ, ಸ್ವರೂಪ ಬದಲಾಗಿದೆ. ಮುದ್ರಣ ಮಾಧ್ಯಮದ ಜಾಗವನ್ನು ಬಹುಪಾಲು ಆನ್ ಲೈನ್ ಪತ್ರಿಕೆಗಳು ಆಕ್ರಮಿಸಿಕೊಳ್ಳುತ್ತಿವೆ. ಸಾಮಾಜಿಕ ತಾಣಗಳು ಕೂಡ ಸುದ್ದಿಗಳನ್ನು ಸೆಕೆಂಡು, ಸೆಕೆಂಡಿಗೂ ಹೊತ್ತು ತರುತ್ತವೆ. ಎಲೆಕ್ಟ್ರಾನಿಕ್ ಮಾಧ್ಯಮಗಳು ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು ತಾಂತ್ರಿಕವಾಗಿ ಹೆಚ್ಚು ಸಮೃದ್ಧವಾಗುತ್ತಿವೆ. ಇಂದು ಸುದ್ದಿ ತಿಳಿಯಬೇಕೆಂದರೆ ಬಹುಪಾಲು ಮಂದಿ ಪತ್ರಿಕೆಯನ್ನು ಹಿಡಿದುಕೊಂಡು ಕೂರುವುದಿಲ್ಲ. ಕೈಯಲ್ಲಿ ಸ್ಮಾರ್ಟ್ ಫೋನ್, ಟ್ಯಾಬ್ ಇದ್ದರೆ ಸಾಕು, ಇಂಟರ್ನೆಟ್ ಸಂಪರ್ಕವಿದ್ದರೆ ಜಗತ್ತಿನ ಯಾವ ಭಾಗದ ವಿಷಯವನ್ನು ಕೂಡ ಅಂಗೈಯಲ್ಲಿ ಹಿಡಿದುಕೊಂಡು ನೋಡಬಹುದು ಎಂಬಂತಾಗಿದೆ. ತಂತ್ರಜ್ಞಾನದ ಬೆಳವಣಿಗೆ ಸುದ್ದಿ ಮಾಧ್ಯಮದ ಮೇಲೆ ಕೂಡ ಇಷ್ಟರ ಮಟ್ಟಿನ ಪರಿಣಾಮ ಬೀರಿದೆ.
ಆದರೂ ಕೂಡ ಪತ್ರಿಕೆಗಳನ್ನು ಹಿಡಿದುಕೊಂಡು ಅಕ್ಷರಗಳನ್ನು ಓದುವುದೆಂದರೆ ಅದರ ಮಜಾನೇ ಬೇರೆ, ಕಾಗದದ ಸ್ಪರ್ಶ ಹಿತಾನುಭವ ನೀಡುತ್ತದೆ, ಅದು ಆನ್ ಲೈನ್ ಮಾಧ್ಯಮದಲ್ಲಿ ಸಿಗಲಾರದು ಪತ್ರಿಕೋದ್ಯಮ, ಪತ್ರಿಕಾ ಸಾಹಿತ್ಯಕ್ಕೆ ಭದ್ರ ತಳಪಾಯ ಪತ್ರಿಕೆಗಳು ಎಂದರೆ ಅತಿಶಯೋಕ್ತಿಯೆನಿಸಲಾರದು.
ಪತ್ರಿಕೆ ಹಾಗೂ ದೃಶ್ಯ ಮಾಧ್ಯಮದ ಮುಖ್ಯ ಕೆಲಸವೆಂದರೆ,ಗಾಂಧೀಜಿ ಹೇಳಿದಂತೆ ಸತ್ಯ ಪ್ರತಿಪಾದನ, ದೇಶದ ಸಾರ್ವಜನಿಕರ ಜೀವ ನದಲ್ಲಿ ನಡೆಯುವ ಅನ್ಯಾಯಗಳನ್ನು ಧೈರ್ಯವಾಗಿ ತೋರಿಸುವಿಕೆ, ನಿರ್ಮೂಲಗೊಳಿಸುವುದು ಆಗಿರುತ್ತದೆ. ಪತ್ರಿಕೋ
ದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯಲಾಗುತ್ತದೆ.ಸ೦ವಿಧಾನ ಮನ್ನಿಸಿದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳ ನಂತರ ಅವು ಮೂರಕ್ಕೂ ಮೀರಿದ ಒಂದು ಕಾರ್ಯವನ್ನು ಪತ್ರಿಕೆಗಳು ಮಾಡಬೇಕೆಂದು ಪ್ರಜಾಪ್ರಭುತ್ವ ನಿರೀಕ್ಷಿಸುತ್ತದೆ.
ಭ್ರಷ್ಟಾಚಾರದ ವ್ಯಾಪಕತ್ವದ ವಿಚಾರದಲ್ಲಿ, ಕೆಲವು ರಾಜಕಾರಣಿಗಳನ್ನು ಮೀರಿಸಲು ಸಾಧ್ಯವಿಲ್ಲ. ರಾಜಕಾರಣದಲ್ಲಿ ಪತ್ರಿಕೋದ್ಯಮ ಪತ್ರಿಕೋದ್ಯಮದಲ್ಲಿ ರಾಜಕಾರಣ,ರಾಜಕಾರಣಿಗಳ, ರಾಜಕೀಯ ಪಕ್ಷಗಳ, ಒಡೆತನವು ಸರಕಾರದ ಬಂಡವಾಳವು ಇದೆ ಎನ್ನಿಸುತ್ತಿದೆ.
ರಾಜಕಾರಣಿಗಳ ಒಡೆತನದಲ್ಲಿ ಸಕ್ಕರೆ ಕಾರ್ಖಾನೆಗಳು, ವಿದ್ಯಾ ಸಂಸ್ಥೆಗಳು, ಆಸ್ಪತ್ರೆಗಳು ಇವೆ ಎಂದು ನಮಗೆಲ್ಲರಿಗೂ ಗೊತ್ತಿದೆ. ಇತ್ತೀಚೆಗೆ ಹೊಸ ಸೇರ್ಪಡೆ
ಮುದ್ರಾ ಮತ್ತು ದೃಶ್ಯ ಮಾಧ್ಯಮಗಳು. ರಾಷ್ಟ್ರದ ಸಾರ್ವಜನಿಕ ಜೀವನದಲ್ಲಿ ವಿವೇಕವನ್ನು ಜಾಗೃತವಾಗಿರುವ ಕಾರ್ಯವನ್ನು ಪತ್ರಿಕೋದ್ಯಮ ಮಾಡಬೇಕಾಗುತ್ತದೆ. ಕಾರ್ಯಾಂಗ ಮತ್ತು ಶಾಸಕಾಂಗ ಅತಿರೇಕಗಳನ್ನು ನಿಯಂತ್ರಿಸುವ ಕಾರ್ಯವನ್ನು ನ್ಯಾಯಾಂಗ ಮಾಡುತ್ತಿದೆ. ಆದರೆ ಅದು ಅದಕ್ಕಾಗಿ ಸ್ವಯಂಪ್ರೇರಿತ ಮುಂದಾಗುವುದಿಲ್ಲ ಆದರೆ ಇದೇ
ಕೆಲಸವನ್ನು ಪತ್ರಿಕೋದ್ಯಮ ವಿಸ್ತಾರ ರೂಪದಲ್ಲಿ ಮಾಡಲು ಮುಂದಾಗುತ್ತದೆ. ಸ್ವಯಂ ಪ್ರೇರಣೆಯಿಂದಲೇ
ಇನ್ನೂ ಸಮಸ್ಯೆಗಳನ್ನು ಎತ್ತಿಕೊಂಡು ಅವುಗಳ ನಿವಾರಣೆಗಾಗಿ ಹೋರಾಡುತ್ತದೆ. ಅಂತ ಸಮಯದಲ್ಲಿ ಸರಕಾರದಲ್ಲಿ ಅಧಿಕಾರದಲ್ಲಿರುವ ಅವರನ್ನೊಳಗೊಂಡ ಸಾರ್ವಜನಿಕ ಕ್ಷೇತ್ರದಲ್ಲಿರುವ ಯಾರಿಂದಲೇ
ನಡೆಯಬಹುದಾದ ಅನ್ಯಾಯ ಅತಿರೇಕಗಳನ್ನು ಬಯಲಿಗೆಳೆಯುವುದು, ಪತ್ರಿಕೆಗಳ ದೃಶ್ಯಮಾಧ್ಯಮದ ಕರ್ತವ್ಯವಾಗಿರುತ್ತದೆ.
ಇಂತಹ ವಿಷಯಗಳಲ್ಲಿ ಪತ್ರಿಕೆಗಳು ದೃಶ್ಯಮಾಧ್ಯಮಗಳು ತಮ್ಮ ಹೊಣೆ ಮೀರಿ ವರ್ತಿಸಿದರೆ ಮಾನಹಾನಿ ಕಾಯಿದೆಗಳು ಅದನ್ನು ನಿಯಂತ್ರಿಸುತ್ತದೆ.
ವಿಷಯ, ವಿಚಾರ, ಆದಾಯ ದೊಡ್ಡ ಮತ್ತು ವರ್ಚಸ್ಸುಗಳು ಆದಾಯ ದೃಷ್ಟಿಯಿಂದ ದೊಡ್ಡವಿನಿಸುವ ಹಲವು ಮಾಧ್ಯಮಗಳು ಪತ್ರಿಕೆಗಳು ಉದ್ದಿಮೆದಾರರ ಕೆಲವು ರಾಜಕಾರಣಿಗಳ ಒಡೆತನಕ್ಕೆ ಸೇರಿದವುಗಳು ಎಂಬುದು ನಿಜ. ಈ ಕಾರಣಕ್ಕಾಗಿಯೇ ಸರಕಾರದ
ಸಮಾಜವಾದಿ ಧೋರಣೆ ಇವುಗಳಿಗೆ ಅಷ್ಟೊಂದು ಆಪ್ಯಾಯಮಾನವಾಗಿ,ಇವುಗಳು ಹೊಂದಿದ ಸ್ವಾತಂತ್ರ, ಒಡೆಯರ ಸ್ವಾರ್ಥದ ಹಿತಾಸಕ್ತಿಗಳಿಂದ ಸೀಮಿ
ತವಾಗಿದೆ ಎಂದು ಹೇಳಬೇಕಾಗುತ್ತದೆ.ಮಾತಿನಲ್ಲಿ ಸತ್ಯಾಂಶವಿಲ್ಲ ಎಂದು ಹೇಳಲಿಕ್ಕಾಗುವುದಿಲ್ಲ ಆದರೆ ಈ ಕಾರಣಗಳಿಗಾಗಿ ಪತ್ರಿಕೆಗಳಲ್ಲಿ ದೃಶ್ಯ ಮಾಧ್ಯಮಗಳು
ಸರಕಾರ ಬಯಸುವ ದಾರಿಯಲ್ಲಿ ಇರಬೇಕೆಂದು ಅಪೇಕ್ಷಿಸುವುದು. ಇವತ್ತಿನ ದಿನಗಳಲ್ಲಿ ನಡೆಯುತ್ತಿರುವ ಕೆಲವು ಸಂಗತಿಗಳನ್ನು ನೋಡಿ, ಸತ್ಯವೆನಿಸುತ್ತದೆ.
ಇತ್ತೀಚೆಗೆ ಪತ್ರಕರ್ತರು ಹಾಗೂ ಮಾಧ್ಯಮ ಸಂಸ್ಥೆಗಳ ಮೇಲೆ ಬ್ಲಾಕ್ಟೇಲ್,ಸುಲಿಗೆ, ನಕಲಿ ದಾಖಲೆ ಸೃಷ್ಟಿ ಹಲವು
ಆರೋಪಗಳನ್ನು ರಾಜಕಾರಣಿಗಳು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ, ಅಧಿಕಾರ ಮತ್ತು ಅಧಿಕಾರಿಗಳನ್ನು ಉಪಯೋಗಿಸಿಕೊಂಡು, ಮಾಧ್ಯಮ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು,ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು, ದೃಶ್ಯ ಹಾಗು ಮುದ್ರಣ ಮಾಧ್ಯಮಗಳಿಂದಲೇ ನೋಡುತ್ತಿದ್ದೇವೆ. ಇದಕ್ಕಿರುವ ಪುರಾವೆಗಳು ನ೦ಬಲರ್ಹವಲ್ಲದಿದ್ದರೂ,ಅನುಮಾನದಿಂದ
ನೋಡುವ ಸ್ಥಿತಿ ನಿರ್ಮಾಣವಾಗಿದೆ. ಈಗ ಬೇಕಿರುವುದು
ನಾಲ್ಕನೇ ಅಂಗದಲ್ಲಿ ಒಗ್ಗಟ್ಟಿನ ಬಲ.ದೃಶ್ಯ ಮಾಧ್ಯಮಗಳಿಗೆ ಜಾಹೀರಾತುಗಳಿಂದ ಹಣ ಸಂಪಾದನೆಯಾಗು ಇದೆ. ಹೇಗೋ ನಡೆಯುತ್ತದೆ. ಪರ
ವಾಗಿಲ್ಲ ಆದರೆ ಮುದ್ರಣ ಮಾಧ್ಯಮದವರಿಗೆ ಪತ್ರಿಕೆ ನಡೆಸುವುದೇ ಒಂದು ಸಾಹಸ ಆರ್ಥಿಕ ಕ್ರೂಢಿಕರಣವೇ
ಒಂದು ದೊಡ್ಡ ಕೆಲಸವಾಗುತ್ತಿದೆ.ದೃಶ್ಯಮಾಧ್ಯಮಗಳು ರಾಜಕಾರಣದ ಕೇಂದ್ರವಾಗದೆ, ಕಲೆ-ಸಾಹಿತ್ಯ ವ್ಯಕ್ತಿ ವಿಶೇಷ ದಿನ ವಿಶೇಷ. ಅತ್ಯಾಧುನಿಕತೆಯ ವೈಜ್ಞಾನಿಕತೆ, ಮಾಹಿತಿ ತಂತ್ರಜ್ಞಾನ, ಶ್ರೇಷ್ಠ ವಿಚಾರಗಳ ಜೊತೆಗೆ
ಈ ಬದುಕು ದೊಡ್ಡದು ಎಂದು ಹಂಬಲಿಸುವ ಧ್ವನಿಯಾಗಬೇಕು.ಸತ್ಯದ ಸಂದೇಶವನ್ನು ಮುದ್ರಣ ಹಾಗೂ ದೃಶ್ಯಮಾಧ್ಯಮ, ನೇರ, ದಿಟ್ಟ, ನಿರಂತರವಾಗಿ ನೀಡಿದರೆ,ಪ್ರಜಾಪ್ರಭುತ್ವದ ನಾಲ್ಕನೇ ಅಂಗದ “ಪವರ್”ಗೆ ಏನು ಮಾಡಲು ಸಾಧ್ಯವಿಲ್ಲ.
ನಿಧಾನವಾಗಿ ಸತ್ಯಕ್ಕೆ ಜಯ ಇದೆ. ಸತ್ಯವೇ ಅಂತಿಮ. ಸತ್ಯವೇ ನಿರಂತರ.ಸತ್ಯಮೇವ ಜಯತೆ…

ಯಡೇಹಳ್ಳಿ ಆರ್. ಮಂಜುನಾಥ್.
9901606220

ಬಾಕ್ಸ್ ಮಾಡುವುದು.

ಮಧ್ಯರಾತ್ರಿ ಮುದ್ರಣಾಲಯದಿಂದ ವಾಹನವೇರಿ ಹೊರಟ ಪತ್ರಿಕೆಗಳು ನಗರ, ಪಟ್ಟಣ, ಹಳ್ಳಿಗಳನ್ನು ತಲುಪುತ್ತವೆ. ನಸುಕಿನ 3 ಗಂಟೆಯ ವೇಳೆಗೆ ಮುಚ್ಚಿರುವ ಅಂಗಡಿ ಮಳಿಗೆಗಳ ಎದುರಿನಲ್ಲೋ, ಬಸ್ ನಿಲ್ದಾಣದಲ್ಲೋ, ದೀಪದ ಬೆಳಕಿನ ಕೆಳಗೆ ಬಂಡಲ್‌ಗಳನ್ನು ಇಳಿಸಿಕೊಂಡು, ಬಿಚ್ಚಿದೊಡನೆ ಸರಿಯಾಗಿ ಜೋಡಿಸಿ­­ಕೊಂಡು, ಸೈಕಲ್‌, ದ್ವಿಚಕ್ರ ವಾಹನಗಳ ಮೂಲಕ ಮನೆ–ಮನೆಗೆ ತಲುಪಿಸುತ್ತಾರೆ.

RELATED ARTICLES
- Advertisment -spot_img

Most Popular