ಅತಿ ವೇಗದ ಚಾಲನೆಗೆ ಬಲಿಯಾದ ಯುವಕ
ಸಕಲೇಶಪುರ : ಅತಿ ವೇಗ ಹಾಗೂ ಅಜಾಗ್ರತೆಯಿಂದ ಬೈಕ್ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.
ತಾಲೂಕಿನ ಬಾಗೇ ಗ್ರಾಮದ ಜೆ.ಎಸ್.ಎಸ್ ಶಾಲೆ ಸಮೀಪ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಲಗಳಲೆ ಗ್ರಾಮದ ಇಬ್ಬರು ಯುವಕರು ಕೆಟಿಎಂ ಬೈಕ್ ನಲ್ಲಿ ಅತಿ ವೇಗವಾಗಿ ಚಾಲನೆ ಮಾಡಿ ಆಕಸ್ಮಿಕವಾಗಿ ಬಿದ್ದ ಪರಿಣಾಮ ಗುಲಗಳಲೆ ಸೃಜನ್( 21) ಸ್ಥಳದಲ್ಲೇ ಮೃತಪಟ್ಟಿದ್ದು ಅರ್ಜುನ್ ಎಂಬ ಯುವಕ ಗಂಭೀರ ಗಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆ ಸಂಭಂದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ