ಆಸ್ಪತ್ರೆಲ್ಲಿ ಬಡವರಿಗೆ ಏನ್ರಿ ಸಿಗುತ್ತೆ ಸರ್ವಿಸ್… ಲಕ್ಷಾಂತರ ರೂಪಾಯಿ ಕೊಟ್ಟು ಜನರೇಟರ್ ತಗೋ ಬಂದು ಉಪಯೋಗ ಬರಲಿಲ್ಲ ಅಂದ್ರೆ ಏನ್ರೀ ಪ್ರಯೋಜನ…
ಕಾಫರ್ಡ್ ಆಸ್ಪತ್ರೆ ಅವ್ಯವಸ್ಥೆ ಕಂಡು ವೈದ್ಯಾಧಿಕಾರಿಗೆ ತರಾಟೆ ತೆಗೆದುಕೊಂಡ ಶಾಸಕ ಸಿಮೆಂಟ್ ಮಂಜುನಾಥ್.
ಶಾಸಕರ ಪ್ರಶ್ನೆಗೆ ಉತ್ತರ ನೀಡಲು ತಡ ಬಡಾಯಿಸಿದ ವೈದ್ಯ ಅರುಣ್ ಕುಮಾರ್.
ಸಕಲೇಶಪುರ : ತಾಲೂಕು ಸಾರ್ವಜನಿಕ ಕ್ರಾಫರ್ಡ್ ಆಸ್ಪತ್ರೆಗೆ ಶಾಸಕ ಸಿಮೆಂಟ್ ಮಂಜು ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿ, ಕರ್ತವ್ಯದಲ್ಲಿ ನಿರ್ಲಕ್ಷೃ ಮಾಡಿದರೆ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಅಶುಚಿತ್ವ ಬಗ್ಗೆ ಸಾರ್ವಜನಿಕರು ನೀಡಿದ ಮೇರೆಗೆ ಧಿಡೀರ್ ಬೇಟಿ ನೀಡಿದ ಶಾಸಕರು ಆಸ್ಪತ್ರೆಯಲ್ಲಿ ಸಂಚರಿಸಿ ವಾರ್ಡುಗಳು, ಶೌಚಾಲಯ, ಹೆರಿಗೆ ಕೊಠಡಿ, ರಕ್ತ ತಪಾಸಣೆ ವಿಭಾಗ, ಎಕ್ಸ್‌ರೇ ವಿಭಾಗಗಳನ್ನು ವೀಕ್ಷಣೆ ಮಾಡಿದರು. ದ್ವಿತೀಯ ದರ್ಜೆಯ ಗುಮಾಸ್ತರೊಬ್ಬರ ಅನಧಿಕೃತ ಗೈರು, ಆಸ್ಪತ್ರೆಯ ಸುತ್ತಮುತ್ತ ಗಿಡಗಂಟೆಗಳು ಬೆಳೆದಿರುವುದು, ಶೌಚಾಲಯವನ್ನು ಸ್ವಚ್ಛಗೊಳಿಸದೆ ಇರುವುದು, ಮುಂತಾದ ಹಲವು ಅವ್ಯವಸ್ಥೆಯು ಅವರ ಗಮನಕ್ಕೆ ಬಂದಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕ್ಷೇತ್ರದ ಜನರಿಗೆ ಉತ್ತಮ ಆರೋಗ್ಯ ಶಿಕ್ಷಣ ಹಾಗೂ ಸ್ವಚ್ಛ ಪರಿಸರ ಒದಗಿಸಿಕೊಡುವ ಕಾರ್ಯಕ್ಕೆ ಆದ್ಯತೆ ನೀಡಿ ದುಡಿಯುತ್ತೇನೆ, ಇನ್ನು ಮುಂದೆ ವಾರದಲ್ಲಿ ಒಂದು ಸಲ ಸರ್ಕಾರಿ ಆಸ್ಪತ್ರೆಗೆ ಹಠಾತ್ ಭೇಟಿ ನೀಡುವೆ. ನಮ್ಮ ಸರ್ಕಾರಿ ಆಸ್ಪತ್ರೆಗಳು ಮೂಲಭೂತ ಸೌಕರ್ಯದಲ್ಲಿ ಬಹಳ ಹಿಂದೆ ಇವೆ. ರೋಗಿಗಳಿಗೆ ಅಗತ್ಯ ಆರೋಗ್ಯ ಸೌಲಭ್ಯ ಸಿಗಬೇಕು. ಆಸ್ಪತ್ರೆಯ ಆಡಳಿತ ಸುಧಾರಣೆ ಆಗಲೇಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತನಾಗುವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆ ವೈದ್ಯಾಧಿಕಾರಿ ಅರುಣ್ ಸೇರಿದಂತೆ ಇನ್ನಿತರರು ಇದ್ದರು