Sunday, April 20, 2025
Homeಕ್ರೈಮ್ಗುಂಡಿಕ್ಕಿ ಗರ್ಭ ಧರಿಸಿದ ಹಸುವನ್ನು ಕೊಂದ ಕಿರಾತಕರು: ಮಾಲೀಕನ ಎದುರೆ ಹಸುವನ್ನು ಅಮಾನುಷವಾಗಿ ಕೊಂದ ದುರುಳರು:...

ಗುಂಡಿಕ್ಕಿ ಗರ್ಭ ಧರಿಸಿದ ಹಸುವನ್ನು ಕೊಂದ ಕಿರಾತಕರು: ಮಾಲೀಕನ ಎದುರೆ ಹಸುವನ್ನು ಅಮಾನುಷವಾಗಿ ಕೊಂದ ದುರುಳರು: ಸೂಕ್ತ ತನಿಖೆಗೆ ಒತ್ತಾಯಿಸಿದ ಬಜರಂಗದಳ

ಗುಂಡಿಕ್ಕಿ ಗರ್ಭ ಧರಿಸಿದ ಹಸುವನ್ನು ಕೊಂದ ಕಿರಾತಕರು: ಮಾಲೀಕನ ಎದುರೆ ಹಸುವನ್ನು ಅಮಾನುಷವಾಗಿ ಕೊಂದ ದುರುಳರು: ಸೂಕ್ತ ತನಿಖೆಗೆ ಒತ್ತಾಯಿಸಿದ ಬಜರಂಗದಳ

ಸಕಲೇಶಪುರ : ಸಕಲೇಶಪುರ ಭಾಗದಲ್ಲಿ ದಿನದಿಂದ ದಿನಕ್ಕೆ ಅಕ್ರಮ ಗೋ ಹತ್ಯೆ ಹಾಗೂ‌ ಗೋ ಮಾಂಸ ಮಾರಾಟ ಎಗ್ಗಿಲದೆ ನಡೆಯುತ್ತಿದ್ದು ಮಂಗಳವಾರ ಸಂಜೆ ಗೋ ಮಾಂಸಕ್ಕಾಗಿ ಕೆಲವು ಕಿಡಿಗೇಡಿಗಳು ಗರ್ಭ ಧರಿಸಿದ ಹಸುವನ್ನು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ.

 ತಾಲೂಕಿನ ಕ್ಯಾಮನಹಳ್ಳಿ ಸಮೀಪ ಘಟನೆ ನಡೆದಿದ್ದು ಅಕ್ರಮ ಗೋ ಮಾಂಸ ಮಾರಾಟಗಾರರು ಹಸುವಿಗೆ ಬಂದೂಕಿನಿಂದ ಗುಂಡಿಕ್ಕಿ ಕತ್ತು ಸೀಳಿ ಪೈಚಾಚಿಕ ಕೃತ್ಯ ಎಸಗಿದ್ದಾರೆ.

 ಹಸುವಿನ ಮಾಲೀಕನ ಮನೆಯ ಸಮೀಪವೇ ಘಟನೆ ನಡೆದಿದ್ದು ಹಸುವನ್ನು ಕುಯ್ಯುತ್ತಿರುವ ಸಮಯದಲ್ಲಿ ಮಾಲೀಕನನ್ನು ಕಂಡು ಕಿರಾತಕರು ಪರಾರಿಯಾಗಿದ್ದಾರೆ.

 ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಘಟನೆಯನ್ನು ಕಂಡು ಬೆಚ್ಚಿ. ಬಿದ್ದಿದ್ದಾರೆ. ಸಾಮಾನ್ಯವಾಗಿ ಹಸುಗಳಿಗೆ ಕಾಲು ಕಟ್ಟಿ ಕದ್ದು ಒಯ್ಯುತ್ತಾರೆ. ಆದರೆ ಕಳ್ಳರು ಇದೀಗ ಬಂದೂಕುಗಳನ್ನು ಬಳಸುತ್ತಿರುವುದು ಮಲೆನಾಡಿಗರಲ್ಲಿ ಭಯದ ವಾತಾವರಣ ನಿರ್ಮಿಸಿದೆ.

 ಇನ್ನು ಘಟನೆಯ ಸಂಬಂಧ ಗರ್ಭಧರಿಸಿದ ಹಸುವನ್ನು ಗುಂಡಿಕ್ಕಿದ ಹಿನ್ನೆಲೆಯಲ್ಲಿ ಬಜರಂಗದಳ ಕಾರ್ಯಕರ್ತರು ಠಾಣೆ ಮುಂಭಾಗ ಹಸುವಿನ ಮೃತ ದೇಹವಿಟ್ಟು ಪ್ರತಿಭಟನೆ ನಡೆಸಲು ಮುಂದಾದ ವೇಳೆ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕಾರ್ಯಕರ್ತರ ಮನವೊಲಿಸಿ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 ಇಂದು ಹಸುವಿನ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಯಲಿದ್ದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಹಿಂದೂ ಸಂಘಟನೆಗಳ ಮುಖಂಡ ರಘು ಸಕಲೇಶಪುರ ಹಾಗೂ ಕಾರ್ಯಕರ್ತರು ಸೂಕ್ತ ತನಿಖೆ ನಡೆಸಿ ಘಟನೆಗೆ ಕಾರಣರಾದವರನ್ನು ತಕ್ಷಣವೇ ಬಂಧಿಸಬೇಕೆಂದು ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ.

RELATED ARTICLES
- Advertisment -spot_img

Most Popular